Shivamogga: Heavy rain before Diwali! ಶಿವಮೊಗ್ಗ : ದೀಪಾವಳಿಗೂ ಮುನ್ನ ಭರ್ಜರಿ ಮಳೆ!

shimoga rain | ಶಿವಮೊಗ್ಗ : ದೀಪಾವಳಿಗೂ ಮುನ್ನ ಭರ್ಜರಿ ಮಳೆ!

ಶಿವಮೊಗ್ಗ (shivamogga), ಅಕ್ಟೋಬರ್ 19: ದೀಪಾವಳಿ ಹಬ್ಬಕ್ಕೂ ಮುನ್ನ ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆ ಅಕ್ಟೋಬರ್ 19 ರ ಸಂಜೆ ಭರ್ಜರಿ ಮಳೆಯಾಗಿದೆ.

ನಗರದ ವಿನೋಬನಗರ, ಕಾಶೀಪುರ, ಕಲ್ಲಳ್ಳಿ, ದೇವರಾಜ ಅರಸು ಬಡಾವಣೆ, ಸಹ್ಯಾದ್ರಿ ನಗರ, ಕನಕ ನಗರ, ಸೋಮಿನಕೊಪ್ಪ, ಜೆ ಹೆಚ್ ಪಟೇಲ್ ಬಡಾವಣೆ ಸೇರಿದಂತೆ ಹೊರವಲಯದ ಬಸವನಗಂಗೂರು, ಬೊಮ್ಮನಕಟ್ಟೆ, ಗೆಜ್ಜೇನಹಳ್ಳಿ, ಮೋಜಪ್ಪನ ಹೊಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾದ ವರದಿಗಳು ಬಂದಿವೆ.

ಸರಿಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಎಡೆಬಿಡದೆ ಬಿರುಸಿನ ಮಳೆಯಾಗಿದೆ. ಹಲವೆಡೆ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾದ ವರದಿಗಳು ಬಂದಿವೆ.

ಭಾನುವಾರ ಬೆಳಿಗ್ಗೆಯಿಂದ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಿತ್ತು. ಬೇಸಿಗೆ ತಾಪದ ಅನುಭವ ಉಂಟು ಮಾಡಿತ್ತು. ಸಂಜೆಯ ನಂತರ ಬಿದ್ದ ಮಳೆಯಿಂದ ತಣ್ಣನೆಯ ವಾತಾವರಣ ನೆಲೆಸುವಂತಾಯಿತು.

Shivamogga, October 19: Heavy rain lashed various parts of Shivamogga city and taluk on the evening of October 19, ahead of the Diwali festival. It has been raining heavily for more than half an hour. There have been reports of heavy rain accompanied by thunder and wind in many places.

shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 19 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 19 ರ ತರಕಾರಿ ಬೆಲೆಗಳ ವಿವರ
Sagara: Tourist bus heading to temple overturns – 18 injured! ಸಾಗರ : ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ – 18 ಜನರಿಗೆ ಗಾಯ! Next post sagara accident news | ಸಾಗರ : ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ – 18 ಜನರಿಗೆ ಗಾಯ!