Shimoga: SP visits house to house – listens to citizens' grievances ಶಿವಮೊಗ್ಗ : ಮನೆ ಮನೆಗೆ ಎಸ್ಪಿ ಭೇಟಿ – ನಾಗರೀಕರ ಅಹವಾಲು ಆಲಿಕೆ

shimoga police news | ಶಿವಮೊಗ್ಗ : ಮನೆ ಮನೆಗೆ ಎಸ್ಪಿ ಭೇಟಿ – ನಾಗರೀಕರ ಅಹವಾಲು ಆಲಿಕೆ

ಶಿವಮೊಗ್ಗ (shivamogga), ಅಕ್ಟೋಬರ್ 24: ಶಿವಮೊಗ್ಗ ನಗರದ ಹೊರವಲಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುರಲೆ ಗ್ರಾಮದಲ್ಲಿ, ಪೊಲೀಸ್ ಇಲಾಖೆಯಿಂದ ಅಕ್ಟೋಬರ್ 23 ರಂದು ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರು, ಮನೆಗಳಿಗೆ ಖುದ್ದು ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸಿದರು.

ಮಾಹಿತಿ ನೀಡಿ : ಇದಕ್ಕೂ ಮುನ್ನ ಪುರಲೆಯ ಸಿದ್ದೇಶ್ವರ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಗರೀಕರನ್ನುದ್ದೇಶಿಸಿ ಜಿ ಕೆ ಮಿಥುನ್ ಕುಮಾರ್ ಮಾತನಾಡಿದರು. ‘ವಾಸ ಸ್ಥಳದ ಸುತ್ತಮುತ್ತ ನಡೆಯುವ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು’ ಎಂದು ತಿಳಿಸಿದ್ದಾರೆ.

ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯು ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿದೆ ಎಂದು ಹೇಳಿದ್ದಾರೆ.

ಗ್ರಾಮಗಳ ಮೂಲಕ  ಹೆದ್ದಾರಿ ಹಾದು ಹೋಗಿದ್ದು, ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಕೆಲ ವೇಳೆ ಪಾದಚಾರಿಗಳ ನಿರ್ಲಕ್ಷ್ಯದಿಂದಲೂ  ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು, ಸೂಚನಾ ಫಲಕ ಹಾಗೂ ರಸ್ತೆಯಲ್ಲಿ  ವೈಜ್ಞಾನಿಕ ರೀತಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗುತ್ತದೆ. ಹೆದ್ದಾರಿ ಪ್ರಾಧಿಕಾರ, ಇತರೆ ಇಲಾಖೆಗಳ ಸಹಕಾರದೊಂದಿಗೆ ರಸ್ತೆಗಳಲ್ಲಿ ರಿಫ್ಲೆಕ್ಟರ್ಸ್,  ಬ್ಲಿಂಕರ್ಸ್, ಸೂಚನಾ ಫಲಕಗಳನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಾರ್ವಜನಿಕರು ತಮ್ಮ  ಅಂಗಡಿ – ಮುಂಗಟ್ಟು ಹಾಗೂ ಮನೆಗಳಲ್ಲಿ ರಸ್ತೆ ಕಾಣುವ ರೀತಿಯಲ್ಲಿ, ಎಂಟ್ರಿ ಮತ್ತು ಎಕ್ಸಿಟ್  ಪಾಯಿಂಟ್ ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹಾಗೂ ಗ್ರಾಮದ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.

ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಅಥವಾ ಸಾರ್ವಜನಿಕವಾಗಿ ಉಪಟಳ ನೀಡುವುದು ಕಂಡುಬಂದಲ್ಲಿ, ಕೂಡಲೇ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿ. ಕಾಲಮಿತಿಯೊಳಗೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸುತ್ತಾರೆ.  ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್ಪಿ ಎ. ಜಿ. ಕಾರ್ಯಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್, ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್  ಸತ್ಯನಾರಾಯಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

shivamogga : In Purale village under the jurisdiction of the rural police station on the outskirts of Shivamogga city, the police department organized a ‘House to House Police’ program on October 23. SP G K Mithun Kumar personally visited the houses and listened to the grievances of the citizens

Hyderabad-Bengaluru bus catches fire: 20 passengers feared burnt alive! ಹೈದ್ರಾಬಾದ್ – ಬೆಂಗಳೂರು ಬಸ್ ಬೆಂಕಿಗಾಹುತಿ : 20 ಪ್ರಯಾಣಿಕರ ಸಜೀವ ದಹನ ಶಂಕೆ! Previous post accident news | ಹೈದ್ರಾಬಾದ್ – ಬೆಂಗಳೂರು ಬಸ್ ಬೆಂಕಿಗಾಹುತಿ : 20 ಪ್ರಯಾಣಿಕರ ಸಜೀವ ದಹನ ಶಂಕೆ!