Sagara: Three youths go missing in separate incidents - Police department appeals for assistance in finding them ಸಾಗರ : ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

sagara news | ಸಾಗರ : ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

ಸಾಗರ (sagara), ಅಕ್ಟೋಬರ್ 30: ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ಮೂವರು ಯುವಕರು ಕಾಣೆಯಾಗಿದ್ದು, ಸದರಿ ಯುವಕರ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿವರ ಕೆಳಕಂಡಂತಿದೆ.

ಪ್ರಕರಣ 1 : ಸಾಗರ ತಾಲೂಕು ಪಡವಗೋಡು ಗ್ರಾಮದ ನವೀನ್ ಹೆಚ್ ಕೆ ಬಿನ್ ಕೆರಿಯಪ್ಪ ಎಂಬ 29 ವರ್ಷದ ಯುವಕ, ಸೆಪ್ಟೆಂಬರ್ 20 ರಂದು ಶಾಮಿಯಾನ ಹಾಕಲು ಹೋಗುವುದಾಗಿ ಹೇಳಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. 5.5 ಅಡಿ ಎತ್ತರ ಕೋಲುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.

ಪ್ರಕರಣ 2: ಹೆಗ್ಗೋಡು ಗ್ರಾಮದ ರಮೇಶ್ ಶಿವಾನಂದ ಭಟ್ ಎಂಬುವವರ ಮಗ ಅಶ್ವಿನ್ ಭಟ್ ಎಂಬ 29 ವರ್ಷದ ಯುವಕ ಏ. 05 ರಂದು ಕುಟುಂಬ ವ್ಯಾಜ್ಯದ ಸಲುವಾಗಿ ಠಾಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. 5.7 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ.

ಪ್ರಕರಣ 3 : ಕಮಲಾಪುರ ಆವಿನಹಳ್ಳಿ ಗ್ರಾಮದ ದಾಮೋದರ ಎಂಬುವವರ ಮಗ ರವಿರಾಜ ಎಂಬ 26 ವರ್ಷದ ಯುವಕ ಮಾರ್ಚ್ 2024 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. 5.3 ಅಡಿ ಎತ್ತರ. ಕೋಲುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಬಲಗೈಯಲ್ಲಿ ಶಿವರಾಜ ಹಚ್ಚೆ ಗುರುತು ಇರುತ್ತದೆ.

ಮೇಲ್ಕಂಡ ಯುವಕರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಸಂಪರ್ಕ ಸಂಖ್ಯೆ : 08182-261400 / 08183-226082 / 9480803361 / 9480803385 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Sagar, October 30: Three youths have gone missing from various places under the jurisdiction of Sagar Rural Police Station, and the police department has issued a statement requesting assistance in locating the said youths.

Rippon'pet: Bike accident – one dead, another injured! ರಿಪ್ಪನ್’ಪೇಟೆ : ಬೈಕ್ ಅಪಘಾತ – ಓರ್ವ ಸಾವು, ಮತ್ತೋರ್ವನಿಗೆ ಗಾಯ! Previous post shimoga – shikaripura accident news | ಶಿವಮೊಗ್ಗ – ಶಿಕಾರಿಪುರದಲ್ಲಿ ಅಪಘಾತ : ನಾಲ್ವರು ಸಾವು – ಇಬ್ವರಿಗೆ ಗಾಯ!
Shivamogga ranks 6th among the top 10 cities in the country with clean air! ಸ್ವಚ್ಚ ಗಾಳಿ ಹೊಂದಿರುವ ದೇಶದ ಟಾಪ್ – 10 ನಗರಗಳಲ್ಲಿ ಶಿವಮೊಗ್ಗಕ್ಕೆ 6 ನೇ ಸ್ಥಾನ! Next post shimoga railway news | ಶಿವಮೊಗ್ಗ ನಗರದ ವಿವಿಧೆಡೆ ಅಗತ್ಯವಿದೆ ರೈಲ್ವೆ ಫ್ಲೈ ಓವರ್ – ಅಂಡರ್ ಪಾಸ್ : ಗಮನಹರಿಸುವರೆ ಸಂಸದರು?