shimoga railway news | ಶಿವಮೊಗ್ಗ ನಗರದ ವಿವಿಧೆಡೆ ಅಗತ್ಯವಿದೆ ರೈಲ್ವೆ ಫ್ಲೈ ಓವರ್ – ಅಂಡರ್ ಪಾಸ್ : ಗಮನಹರಿಸುವರೆ ಸಂಸದರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 30: ಶಿವಮೊಗ್ಗ ನಗರದ ಹೊರವಲಯ ಕೋಟೆಗಂಗೂರು ಸಮೀಪ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿವೆ. ಡಿಪೋ ಕಾರ್ಯಾರಂಭಗೊಂಡರೆ, ಶಿವಮೊಗ್ಗ ನಗರಕ್ಕೆ ಆಗಮಿಸುವ ರೈಲುಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗಲಿದೆ.
ಇದರಿಂದ ಶಿವಮೊಗ್ಗ ನಗರದ ವಿವಿಧೆಡೆಯಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗಳ ಬಳಿ ಜನ – ವಾಹನ ಸಂಚಾರದ ಮೇಲೆ ಪರಿಣಾಮ ಬೀರಲಿದೆ. ಈ ಕಾರಣದಿಂದ ಪ್ರಮುಖ ಲೆವೆಲ್ ಕ್ರಾಸಿಂಗ್ ಬಳಿ ಫ್ಲೈ ಓವರ್ ಅಥವಾ ಅಂಡರ್ ಪಾಸ್ ನಿರ್ಮಾಣದ ಅಗತ್ಯವಿದೆ.

ಎಲ್ಲೆಲ್ಲೆ ಬೇಕು? : ಹೊಳೆ ಬಸ್ ನಿಲ್ದಾಣ ಸಮೀಪದ ಗುಂಡಪ್ಪ ಶೆಡ್, ಕೀರ್ತಿ ನಗರದ ಬೊಮ್ಮನಕಟ್ಟೆ ರಸ್ತೆ, ನಗರದ ಹೊರವಲಯ ಕೋಟೆಗಂಗೂರು ಸಮೀಪದ ರೈಲ್ವೆ ಕ್ರಾಸಿಂಗ್ ಗಳ ಬಳಿ ಫ್ಲೈ ಓವರ್ / ಅಂಡರ್ ಪಾಸ್ ನಿರ್ಮಾಣವಾಗಬೇಕಾಗಿದೆ
ಭವಿಷ್ಯದ ರೈಲ್ವೆ ಸಂಚಾರ ಗಮನದಲ್ಲಿಟ್ಟುಕೊಂಡು ಹಾಗೂ ಸುಗಮ ಜನ – ವಾಹನ ಸಂಚಾರಕ್ಕಾಗಿ ಸದರಿ ಪ್ರದೇಶಗಳಲ್ಲಿ ರೈಲ್ವೆ ಇಲಾಖೆಯು ಅಂಡರ್ ಪಾಸ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕಾಗಿದೆ.
ಸಂಸದರು ಗಮನಿಸಲಿ : ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರ ಪ್ರಯತ್ನದ ಫಲವಾಗಿ ಹೆದ್ದಾರಿ, ರೈಲ್ವೆ ಮೊದಲಾದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳಾಗಿದೆ. ಹೊಸ ಹೊಸ ಯೋಜನೆಗಳು ಅನುಷ್ಠಾನಗೊಂಡಿವೆ.
ಈಗಾಗಲೇ ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳ ವಿವಿಧೆಡೆಯ ಲೆವೆಲ್ ಕ್ರಾಸಿಂಗ್ ಗಳ ಬಳಿ, ರೈಲ್ವೆ ಫ್ಲೈ ಓವರ್ ಹಾಗೂ ಅಂಡರ್ ಪಾಸ್ ಗಳು ನಿರ್ಮಾಣಗೊಂಡಿವೆ. ಅದೇ ರೀತಿಯಲ್ಲಿ ನಗರದ ಇತರೆಡೆಯ ಲೆವೆಲ್ ಕ್ರಾಸಿಂಗ್ ಗಳ ಬಳಿ ಅಂಡರ್ ಪಾಸ್ / ಫ್ಲೈ ಓವರ್ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರೀಕರ ಸಲಹೆಯಾಗಿದೆ.
ಜೆ ಹೆಚ್ ಪಟೇಲ್ ಬಡಾವಣೆ – ಕಾಶೀಪುರ ನಡುವೆ ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹ!
*** ನಗರದ ಜೆ ಹೆಚ್ ಪಟೇಲ್ ಬಡಾವಣೆ ಮೂಲಕ ರೈಲ್ವೆ ಮಾರ್ಗ ಹಾದು ಹೋಗಿದೆ. ಸದರಿ ಬಡಾವಣೆಯ ರವಿ ಶಂಕರ್ ವಿದ್ಯಾ ಮಂದಿರ ಸಮೀಪದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಸ್ಥಳೀಯ ನಾಗರೀಕರದ್ದಾಗಿದೆ. ಸದರಿ ಪ್ರದೇಶದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಯಾವುದೇ ಅಡೆತಡೆಯಿಲ್ಲವಾಗಿದೆ. ಅಂಡರ್ ಪಾಸ್ ನಿರ್ಮಿಸಿದರೆ ಜೆ ಹೆಚ್ ಪಟೇಲ್ ಬಡಾವಣೆ ಹಾಗೂ ಕಾಶೀಪುರ, ಆಲ್ಕೋಳ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನಡುವಿನ ಸಂಪರ್ಕ ಅತ್ಯಂತ ಸುಲಭವಾಗಲಿದೆ. ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಈ ಭಾಗದ ನಾಗರೀಕರದ್ದಾಗಿದೆ.
Shivamogga, October 30: The construction work of a railway coaching depot near Kotegangur on the outskirts of Shivamogga city is in full swing. Once the depot is operational, the number of trains arriving in Shivamogga city will further increase.
