Shivamogga : Accused robbed a teacher by pretending to be a Reels fan! ಶಿವಮೊಗ್ಗ : ರೀಲ್ಸ್ ಅಭಿಮಾನಿ ಎಂದು ಕರೆಯಿಸಿಕೊಂಡು ಶಿಕ್ಷಕನ ದರೋಡೆ ಮಾಡಿದ ಆರೋಪಿಗಳು!

soraba | ಸೊರಬ : ಮಗುವಿನ ಮುಖಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ!

ಸೊರಬ (sorab), ಅಕ್ಟೋಬರ್ 31: ಅಂಗನವಾಡಿ ಸಹಾಯಕಿಯೋರ್ವರು, ಮೂರುವರೆ ವರ್ಷದ ಮಗುವಿನ ಮುಖಕ್ಕೆ ಬೆಂಕಿಯಿಂದ ಕಾಸಿದ ಚಾಕುವಿನಿಂದ ಬರೆ ಹಾಕಿದ ಆಘಾತಕಾರಿ ಘಟನೆ, ಸೊರಬ ತಾಲೂಕಿನ ಇಂಡುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಸವಿ ಗ್ರಾಮದ ಅಂಗನವಾಡಿಯಲ್ಲಿ ಅಕ್ಟೋಬರ್ 30 ರಂದು ನಡೆದಿದೆ.

ಮಗುವಿನ ಗಲ್ಲದ ಬಳಿ ಬರೆ ಹಾಕಿದ ಗುರುತು ಬಿದ್ದಿದ್ದು, ಪೋಷಕರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಂಗನವಾಡಿ ಕೇಂದ್ರಕ್ಕೆ ಸೊರಬ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಯೋಜನಾಭಿವೃದ್ದಿ ಕಚೇರಿ ಅಧಿಕಾರಿ, ಸಿಬ್ಬಂದಿಗಳು ಭೇಟಿಯಿತ್ತು ಮಾಹಿತಿ ಕಲೆ ಹಾಕಿದ್ದಾರೆ. ಸಹಾಯಕಿಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾರಣವೇನು? : ಸದರಿ ಅಂಗನವಾಡಿ ಕೇಂದ್ರದಲ್ಲಿ 10 ಮಕ್ಕಳಿದ್ದಾರೆ. ಗುರುವಾರ ಇಬ್ಬರು ಮಕ್ಕಳು ಜಗಳವಾಡಿಕೊಂಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಹಾಯಕಿಯು, ಮಗುವೊಂದರ ಗಲ್ಲಕ್ಕೆ ಬರೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಅಂಗನವಾಡಿಯಿಂದ ಮನೆಗೆ ಮಗು ಆಗಮಿಸಿದ ನಂತರ ಪೋಷಕರಿಗೆ ವಿಷಯ ಗೊತ್ತಾಗಿದೆ. ಸಹಾಯಕಿ ವಿರುದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

A shocking incident in which an Anganwadi helper scratched the face of a three-and-a-half-year-old child with a fire-hardened knife took place on October 30 at an Anganwadi in Chikkasavi village under Induvalli Gram Panchayat in Sorab taluk.

Shivamogga: Request to DySP demanding establishment of police sub-station ಶಿವಮೊಗ್ಗ : ಪೊಲೀಸ್ ಉಪ ಠಾಣೆ ಸ್ಥಾಪನೆಗೆ ಆಗ್ರಹಿಸಿ ಡಿವೈಎಸ್ಪಿಗೆ ಮನವಿ Previous post shimoga | ಶಿವಮೊಗ್ಗ : ಪೊಲೀಸ್ ಉಪ ಠಾಣೆ ಸ್ಥಾಪನೆಗೆ ಮನವಿ
Shivamogga: Kannada Rajyotsava celebrated at MAEMS Government School, Sominakoppa ಶಿವಮೊಗ್ಗ : ಸೋಮಿನಕೊಪ್ಪದ ಎಂಎಇಎಂಎಸ್ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ Next post shimoga kannada rajyotsava news | ಶಿವಮೊಗ್ಗ : ಸೋಮಿನಕೊಪ್ಪದ ಎಂಎಎಂಇಎಸ್ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ