shimoga | ಶಿವಮೊಗ್ಗ : ಪೊಲೀಸ್ ಉಪ ಠಾಣೆ ಸ್ಥಾಪನೆಗೆ ಮನವಿ
ಶಿವಮೊಗ್ಗ (shivamogga), ಅಕ್ಟೋಬರ್ 30: ನಗರದ ಹೊರವಲಯ ಪ್ರೆಸ್ ಕಾಲೋನಿಯಲ್ಲಿ ಪೊಲೀಸ್ ಉಪ ಠಾಣೆ ಸ್ಥಾಪನೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘವು, ಅಕ್ಟೋಬರ್ 30 ರಂದು ಡಿವೈಎಸ್ಪಿ ಸಂಜೀವ್ ಕುಮಾರ್ ಅವರಿಗೆ ಮನವಿ ಪತ್ರ ಅರ್ಪಿಸಿತು.
ಪ್ರೆಸ್ ಕಾಲೋನಿಯು ನಗರದ ಹೊರವಲಯದಲ್ಲಿದೆ. ಹೊಸ ಹೊಸ ಬಡಾವಣೆಗಳೂ ಅಭಿವೃದ್ದಿಯಾಗುತ್ತಿವೆ. ಇತ್ತೀಚೆಗೆ ಕಿಡಿಗೇಡಿಗಳ ಹಾವಳಿ, ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದ ಪೊಲೀಸ್ ಉಪ ಠಾಣೆ ಸ್ಥಾಪನೆಯಾಗಬೇಕು. ಬಡಾವಣೆಗಳಲ್ಲಿ ಹಗಲು – ರಾತ್ರಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಬಡಾವಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ರಾಜ್ಯ ಹೆದ್ದಾರಿಯಲ್ಲಿ ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ. ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಮುಖಂಡರಾದ ಸತೀಶ್, ಗುರುಚರಣ್, ರವಿ ಎಸ್, ಅಶೋಕ್ ಕುಮಾರ್ ಉಪಸ್ಥಿತರಿದ್ದರು.
Shivamogga, October 30: The KHB Press Colony Residents’ Welfare Association submitted a petition to DySP Sanjeev Kumar K on October 30, demanding action to establish a police sub-station in Press Colony on the outskirts of the city. Journalist B Renukesh, president of the association, leaders Satish, Gurucharan, Ravi s, Ashok Kumar were present during the petition.
