shimoga | ಶಿವಮೊಗ್ಗ | ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ

shivamogga | Applications invited from women to form Akka Pade team shimoga | ಶಿವಮೊಗ್ಗ | ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ

ಶಿವಮೊಗ್ಗ (shivamogga), ನವೆಂಬರ್ 7: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಕ್ಕ ಪಡೆ ತಂಡ ರಚನೆ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ತಂಡಕ್ಕೆ ಎನ್ ಸಿ ಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 35 ರಿಂದ 45 ವರ್ಷದೊಳಗಿನವರಾಗಿದ್ದು, ದೈಹಿಕ ಸದೃಢತೆ ಮತ್ತು ಸ್ಥಳೀಯ ನಿವಾಸಿ ಯಾಗಿರಬೇಕು. ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ 2 ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸಲು ಬದ್ಧರಿರಬೇಕು.

ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ ಶಿವಮೊಗ್ಗ ಇವರಿಗೆ ದಿನಾಂಕ:13.11.2025 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-295514 ಅಥವಾ  ddwcdshimoga@gmail.com ಸಂಪರ್ಕಿಸಬಹುದಾಗಿದೆ ಎಂದು ಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ‌ ಬಣಕಾರ್ ತಿಳಿಸಿದ್ದಾರೆ.

shivamogga, november 07: The Women and Child Development Department has invited applications from female candidates to form a sister support team in the district with the aim of providing immediate protection to vulnerable women and children in distress.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →