Shivamogga : Vaidya elected as President of Journalists Association, Halaswamy as General Secretary, KV Shivakumar elected as State Committee ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ

shimoga | ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ

ಶಿವಮೊಗ್ಗ (shivamogga), ನವೆಂಬರ್ 8: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ‘ನಮ್ಮ ನಾಡು’ ಪತ್ರಿಕೆಯ ವರದಿಗಾರ ಹೆಚ್. ಯು. ವೈದ್ಯನಾಥ್ (ವೈದ್ಯ), ಪ್ರಧಾನ ಕಾರ್ಯದರ್ಶಿಯಾಗಿ ದೂರದರ್ಶನ ಚಂದನ ವಾಹಿನಿ ವರದಿಗಾರ ಆರ್. ಎಸ್. ಹಾಲಸ್ವಾಮಿ ಆಯ್ಕೆಯಾಗಿದ್ದಾರೆ.

ಸಂಘದ ರಾಜ್ಯ ಸಮಿತಿ ನಿರ್ದೇಶಕರಾಗಿ ‘ನಮ್ಮ ನಾಡು’ ಪತ್ರಿಕೆ ಸಂಪಾದಕ ಕೆ. ವಿ. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಜಿಲ್ಲಾ ಸಮಿತಿ ನಿರ್ದೇಶಕ ಸ್ಥಾನಕ್ಕೆ ಶಿಕಾರಿಪುರದ ‘ನಮ್ಮ ಕನ್ನಡ ನಾಡು’ ಪತ್ರಿಕೆಯ ರಾಜರಾವ್ ಎಂ. ಜಾದವ್‌ರವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರನ್ನು ಸಮಿತಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿ ಚುನಾವಣಾಧಿಕಾರಿ ಶ್ರೀನಿವಾಸ್ ಆದೇಶಿಸಿದ್ದಾರೆ.

Shivamogga, November 8: The Karnataka Working Journalists’ Association has been elected unopposed to the posts of President and General Secretary of the Shivamogga district branch. H. U. Vaidyanath, a reporter for the newspaper ‘Namma Nadu’, has been elected as the president, and R. S. Halaswamy, a reporter for Doordarshan Chandana Vahini, has been elected as the general secretary. K. V. Shivakumar, editor of the newspaper ‘Namma Nadu’, has been elected unopposed as the state committee director of the association.

shivamogga | Applications invited from women to form Akka Pade team shimoga | ಶಿವಮೊಗ್ಗ | ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ Previous post shimoga | ಶಿವಮೊಗ್ಗ | ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ