Shivamogga: Husband sentenced to 1 year in prison for threatening his wife's life! ಶಿವಮೊಗ್ಗ : ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ಪತಿಗೆ 1 ವರ್ಷ ಜೈಲು ಶಿಕ್ಷೆ!

shimoga court news | ಶಿವಮೊಗ್ಗ : ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ಪತಿಗೆ 1 ವರ್ಷ ಜೈಲು ಶಿಕ್ಷೆ!

ಶಿವಮೊಗ್ಗ (shivamogga), ನವೆಂಬರ್ 8: ಪತ್ನಿಗೆ ಜೀವ ಬೆದರಿಕೆ ಹಾಕುವುದರ ಜೊತೆಗೆ ಮನೆಯಿಂದ ಹೊರ ಹಾಕಿದ ಪತಿಗೆ, 1 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ 2 ನೇ ಜೆಎಂಎಫ್’ಸಿ ನ್ಯಾಯಾಲಯ ತೀರ್ಪು ನೀಡಿದೆ.

ಭದ್ರಾವತಿ ತಾಲೂಕು ಗುಂಡೇರಿ  ಕ್ಯಾಂಪ್ ನಿವಾಸಿ ಹರೀಶ್ (25) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 1 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ 30 ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಧೀಶರಾದ ಸಿದ್ದರಾಜು ಎನ್ ಕೆ ಅವರು 29-10-2025 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ಪತಿ ಹರೀಶ್ ನು, ಪತ್ನಿ 3 ತಿಂಗಳ ಗರ್ಭೀಣಿಯಾಗಿದ್ದಾಗ ಮನೆಯಿಂದ ಹೊರ ಕಳುಹಿಸಿದ್ದ. ಮಗುವಾದ ನಂತರ ಮನೆಗೆ ಆಗಮಿಸಿದ ಪತ್ನಿಯೊಂದಿಗೆ ಗಲಾಟೆ ಮಾಡಿದ್ದ. ಇನ್ನೊಮ್ಮೆ ಮನೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದ. ‘

ಈ ಸಂಬಂಧ ಮಹಿಳೆಯು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಪಿಎಸ್ಐ ಶರಾವತಿ ಎಮ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Shivamogga, November 8: The 2nd JMFC Court in Shivamogga has sentenced a husband to 1 year in simple imprisonment for threatening his wife and throwing her out of the house.

Shivamogga : Vaidya elected as President of Journalists Association, Halaswamy as General Secretary, KV Shivakumar elected as State Committee ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ Previous post shimoga | ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ