Shimoga: Petition to rural MLAs for addition of corporation, road repair ಶಿವಮೊಗ್ಗ : ಪಾಲಿಕೆ ಸೇರ್ಪಡೆ, ರಸ್ತೆ ದುರಸ್ತಿ ಕೋರಿ ಗ್ರಾಮಾಂತರ ಶಾಸಕರಿಗೆ ಮನವಿ

shimoga news | ಶಿವಮೊಗ್ಗ | ಪಾಲಿಕೆ ಸೇರ್ಪಡೆ, ರಸ್ತೆ ದುರಸ್ತಿ ಕೋರಿ ಗ್ರಾಮಾಂತರ ಶಾಸಕರಿಗೆ ಮನವಿ

ಶಿವಮೊಗ್ಗ (shivamogga), ನವೆಂಬರ್ 10: ಪಾಲಿಕೆ ವ್ಯಾಪ್ತಿಗೆ ವಸತಿ ಬಡಾವಣೆಗಳ ಸೇರ್ಪಡೆ ಮಾಡಬೇಕೆಂದು ಕೋರಿ, ಅಬ್ಬಲಗೆರೆ ಗ್ರಾಪಂ ಅಧೀನದ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಬಡಾವಣೆ ಪ್ರಮುಖರ ನಿಯೋಗ, ನವೆಂಬರ್ 10 ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರಿಗೆ ಮನವಿ ಪತ್ರ ಅರ್ಪಿಸಿತು.

ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ, ನಗರದ ನೆಹರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಶಾರದ ಪೂರ್ಯನಾಯ್ಕ್ ಅವರನ್ನು ನಿಯೋಗ ಭೇಟಿಯಾಗಿ, ವಿವಿಧ ವಿಷಯಗಳ ಕುರತಂತೆ ಸಮಾಲೋಚಿಸಿ ಮನವಿ ಪತ್ರ ಅರ್ಪಿಸಿತು.

ಬಸವನಗಂಗೂರು ಗ್ರಾಮ ಅಧೀನದ ವಸತಿ ಬಡಾವಣೆಗಳಾದ ಪ್ರೆಸ್ ಕಾಲೋನಿ, ಶ್ರೀ ಲೇಔಟ್, ಮಹಾಲಕ್ಷ್ಮೀ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ವಸತಿ ಬಡಾವಣೆಗಳು ನಗರಕ್ಕೆ ಹೊಂದಿಕೊಂಡಂತಿವೆ. ಪಾಲಿಕೆ ವ್ಯಾಪ್ತಿಗೆ ಸದರಿ ಬಡಾವಣೆಗಳು ಸೇರ್ಪಡೆಯಾದರೆ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ.

ರಸ್ತೆ ದುರಸ್ತಿ : ಸದರಿ ಬಡಾವಣೆಗಳಲ್ಲಿ ಹಾದು ಹೋಗಿರುವ 60 ಅಡಿ ಮುಖ್ಯ ರಸ್ತೆಯ ಅರ್ಧ ಭಾಗ ಡಾಂಬರೀಕರಣಗೊಂಡಿದೆ. ಉಳಿದ ಸುಮಾರು ಅರ್ಧ ಕಿ.ಮೀ. ಉದ್ದದ ರಸ್ತೆಯು, ಗುಂಡಿ – ಗೊಟರು ಬಿದ್ದಿದೆ. ಜನ – ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿದೆ. ಸದರಿ ರಸ್ತೆಯ ಡಾಂಬರೀಕರಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಮುಖಂಡರು ಮನವಿ ಮಾಡಿದರು.

ಹೈಮಾಸ್ಟ್ ಲೈಟ್ : ಹಾಗೆಯೇ ಮಹಾಲಕ್ಷ್ಮೀ ಲೇಔಟ್, ಶ್ರೀ ಬಡಾವಣೆ, ಪ್ರೆಸ್ ಕಾಲೋನಿಗಳು ನಗರದ ಹೊರವಲಯದಲ್ಲಿವೆ. ನಿವಾಸಿಗಳ ಹಿತದೃಷ್ಟಿಯಿಂದ ಹೈ ಮಾಸ್ಟ್ ಲೈಟ್ ಗಳ ಅಳವಡಿಕೆ ಮಾಡುವಂತೆ ಇದೇ ವೇಳೆ ನಿಯೋಗ ಶಾಸಕರಿಗೆ ಮನವಿ ಮಾಡಿತು.

ಶಾಸಕರು ಹೇಳಿದ್ದೇನು? : ಮನವಿ ಸ್ವೀಕರಿಸಿದ ನಂತರ ಶಾರದಾ ಪೂರ್ಯನಾಯ್ಕ್ ಅವರು ಮಾತನಾಡಿ, ವಸತಿ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮುಖ್ಯ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುವುದು. ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಅಗತ್ಯವಿರುವೆಡೆ ಕಾಲಮಿತಿಯೊಳಗೆ ಹೈಮಾಸ್ಟ್ ಲೈಟ್ ಅಳವಡಿಸಿ, ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಿವಾಸಿಗಳ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಮುಖಂಡರಾದ ಗುರುಚರಣ್, ಸುನೀಲ್ ಉಪಸ್ಥಿತರಿದ್ದರು.

shivamogga, november 10: A delegation of barangay leaders from Basavanagangur village under Abbalagere Gram Panchayat submitted a petition to Sharada Pooryanaik, MLA of Shivamogga Rural Assembly constituency, on November 10, demanding that the barangays be included in the corporation’s jurisdiction.

Led by the KHB Press Colony Residents’ Welfare Association, a delegation met Sharada Pooryanaik at the MLA’s office on Nehru Road in the city, discussed various issues, and submitted a petition.

ಶಿವಮೊಗ್ಗ : ರಾಜಕಾಲುವೆ ಕೊಳಚೆ ನೀರಲ್ಲಿ ಕುಡಿಯುವ ನೀರು ಪೈಪ್ ಗಳು – ಎಚ್ಚೆತ್ತುಕೊಳ್ಳುವುದೆ ಜಲ ಮಂಡಳಿ? ವರದಿ : ಬಿ. ರೇಣುಕೇಶ್ ಶಿವಮೊಗ್ಗ, ನವೆಂಬರ್ 10: ಕಲುಷಿತ ಕುಡಿಯುವ ನೀರು ಸೇವನೆಯು, ನಾಗರೀಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಕುಡಿಯುವ ನೀರು ಪೂರೈಕೆಯ ಪೈಪ್ ಲೈನ್ ಗಳು, ಚರಂಡಿ – ರಾಜ ಕಾಲುವೆ ಮೂಲಕ ಹಾದು ಹೋದ ವೇಳೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಕಾಲಕಾಲಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡುತ್ತದೆ. ಆದರೆ ಶಿವಮೊಗ್ಗ ನಗರದ ದೇವರಾಜ ಅರಸ್ ಬಡಾವಣೆ ಬಳಿಯಿರುವ ಓವರ್ ಹೆಡ್ ಟ್ಯಾಂಕ್ ಮೂಲಕ, ವಿವಿಧ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆಯಾಗುವ ಪೈಪ್ ಲೈನ್ ಗಳು ರಾಜಕಾಲುವೆ ಕೊಳಚೆ ನೀರಲ್ಲಿಯೇ ಹಾದು ಹೋಗಿವೆ..! ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡಿಲ್ಲವಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ದೂರುತ್ತಾರೆ. ನೀರು ಪೂರೈಕೆ : ದೇವರಾಜ ಅರಸು ಬಡಾವಣೆ ಓವರ್ ಹೆಡ್ ಟ್ಯಾಂಕ್ ನಿಂದ ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟ್ ಮೆಂಟ್, ದೇವರಾಜ ಅರಸು ಬಡಾವಣೆ, ಸೂರ್ಯ ಲೇಔಟ್, ಪಿ ಅಂಡ್ ಟಿ ಲೇಔಟ್, ಸಹ್ಯಾದ್ರಿ ನಗರ, ಜೆ ಹೆಚ್ ಪಟೇಲ್ ಬಡಾವಣೆ, ಸೋಮಿನಕೊಪ್ಪ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಓವರ್ ಹೆಡ್ ಟ್ಯಾಂಕ್ ಹೊರ ಭಾಗದಲ್ಲಿಯೇ ಕಾಶೀಪುರ ಕಡೆಯಿಂದ ಬರುವ ರಾಜ ಕಾಲುವೆ ಹಾದು ಹೋಗಿದೆ. ಸದರಿ ಕಾಲುವೆ ಕೊಳಚೆ ನೀರಲ್ಲಿಯೇ ನೀರು ಪೂರೈಕೆಯ ಪೈಪ್ ಗಳು ಹಾದು ಹೋಗಿವೆ. ಕಾಲುವೆ ಮೂಲಕ ಪೈಪ್ ಹಾಕುವ ವೇಳೆ, ಕನಿಷ್ಠ ಕಡ್ಡಾಯ ಸುರಕ್ಷತಾ ಕ್ರಮಗಳ ಪಾಲನೆ ಮಾಡಿಲ್ಲವೆಂಬುವುದು ನಾಗರೀಕರ ಆರೋಪವಾಗಿದೆ. ‘ರಾಜಕಾಲುವೆ ಮೇಲ್ಭಾಗದಿಂದ, ಕೊಳಚೆ ನೀರಿನ ಸಂಪರ್ಕಕ್ಕೆ ಆಸ್ಪದವಾಗದಂತೆ ಪೈಪ್ ಗಳನ್ನು ಕೊಂಡೊಯ್ಯಬೇಕಾಗಿತ್ತು. ಆದರೆ ಇವ್ಯಾವ ಕಾರ್ಯಗಳು ಆಗಿಲ್ಲ. ಕೊಳಚೆ ನೀರಲ್ಲಿಯೇ ಪೈಪ್ ಗಳನ್ನು ಹಾಕಲಾಗಿದೆ. ಪೈಪ್ ಗಳು ಏನಾದರೂ ದುರಸ್ತಿಯಾದರೆ, ನೇರವಾಗಿ ಕೊಳಚೆ ನೀರು ಪೈಪ್ ಗಳಲ್ಲಿ ಸೇರ್ಪಡೆಯಾಗುತ್ತದೆ. ಹಾಗೆಯೇ ಪೈಪ್ ಗಳ ಬಳಿ ಕಸಕಡ್ಡಿ, ಪ್ಲಾಸ್ಟಿಕ್ ಮತ್ತೀತರ ವಸ್ತುಗಳು ಸಿಲುಕಿ ಸರಾಗವಾಗಿ ನೀರು ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಮಳೆಗಾಲದ ವೇಳೆ ರಾಜಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗಲು ಅಡಚಣೆಯಾಗುತ್ತಿದೆ. ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ’ ಎಂದು ಸ್ಥಳೀಯ ಕೆಲ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಎಚ್ಚೆತ್ತುಕೊಳ್ಳಲಿ : ತಕ್ಷಣವೇ ಜಲ ಮಂಡಳಿ ಆಡಳಿತ ಇತ್ತ ಗಮನಹರಿಸಬೇಕಾಗಿದೆ. ದೇವರಾಜ ಅರಸು ಬಡಾವಣೆ ಓವರ್ ಹೆಡ್ ಟ್ಯಾಂಕ್ ಬಳಿಯ ರಾಜಕಾಲುವೆ ಬಳಿ ಹಾದು ಹೋಗಿರುವ ಪೈಪ್ ಗಳ ಬಳಿ, ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆ ಮಾಡಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ. ಓವರ್ ಹೆಡ್ ಟ್ಯಾಂಕ್ ನಿಂದ ನೀರು ಸೋರಿಕೆ..! *** ದೇವರಾಜ ಅರಸು ಓವರ್ ಹೆಡ್ ಟ್ಯಾಂಕ್ ನ ಹೊರಭಾಗದಿಂದ ನೀರು ಸೋರಿಕೆಯಾಗುತ್ತಿದೆ. ಕ್ರಮೇಣ ನೀರು ಸೋರಿಕೆಯ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಹಾಗೆಯೇ ಟ್ಯಾಂಕ್ ಪ್ರವೇಶ ದ್ವಾರದ ಬಳಿಯೇ ಪೈಪ್ ಒಡೆದು ಅಪಾರ ಪ್ರಮಾಣದ ಕುಡಿಯುವ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹಲವು ದಿನಗಳಿಂದ ಅವ್ಯವಸ್ಥೆಯಿದ್ದರೂ ಇಲ್ಲಿಯವರೆಗೂ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಟ್ಯಾಂಕ್ ಆವರಣದಲ್ಲಿರುವ ಉದ್ಯಾನವನ ಸಂಪೂರ್ಣ ಕೊಳಚೆಮಯವಾಗಿದೆ. ತಕ್ಷಣವೇ ಜಲ ಮಂಡಳಿ ಇತ್ತ ಗಮನಹರಿಸಿ, ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರೀಕರು ಒತ್ತಾಯಿಸುತ್ತಾರೆ. ಏನಾದರೂ ಕೊಂಚ ಹೆಚ್ಚುಕಡಿಮೆಯಾಗಿ ಪೈಪ್ ಗಳು ಒಡೆದರೆ, ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಮಿಶ್ರಣವಾಗುವ ಸಾಧ್ಯತೆಗಳು ಅಲ್ಲಗಳೆಯುವಂತಿಲ್ಲವೆಂದು The pipelines that supply drinking water to various settlements through the overhead tank near Devaraja Urs Layout in Shivamogga City have passed through the sewage water of Rajakaluve..! Minimum precautionary measures have not been followed. Previous post shimoga news | ಶಿವಮೊಗ್ಗ : ರಾಜಕಾಲುವೆ ಕೊಳಚೆ ನೀರಲ್ಲಿ ಕುಡಿಯುವ ನೀರು ಪೈಪ್ ಗಳು – ಎಚ್ಚೆತ್ತುಕೊಳ್ಳುವುದೆ ಜಲ ಮಂಡಳಿ?
Adoption Month celebrated from November 1 to 30: Special 'emphasis' on the world of 'adopted' children ನ.1 ರಿಂದ 30 ರವರೆಗೆ ದತ್ತು ಮಾಸಾಚರಣೆ : ‘ದತ್ತು’ ಮಗುವಿನ ಜಗತ್ತಿಗೆ ವಿಶೇಷ ‘ಒತ್ತು’ ವಿಶೇಷ ಲೇಖನ : ಭಾಗ್ಯ ಎಂ ಟಿ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ, ಶಿವಮೊಗ್ಗ. Next post special article | ನ.1 ರಿಂದ 30 ರವರೆಗೆ ದತ್ತು ಮಾಸಾಚರಣೆ : ‘ದತ್ತು’ ಮಗುವಿನ ಜಗತ್ತಿಗೆ ವಿಶೇಷ ‘ಒತ್ತು’