Shivamogga Water Board Announcement: Special counter to pay water revenue on January 4th ಶಿವಮೊಗ್ಗ ಜಲ ಮಂಡಳಿ ಪ್ರಕಟಣೆ : ಜನವರಿ 4 ರಂದು ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್

shimoga news | ಶಿವಮೊಗ್ಗ ಜಲ ಮಂಡಳಿ ಪ್ರಕಟಣೆ : ಜನವರಿ 4 ರಂದು ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್

ಶಿವಮೊಗ್ಗ (shivamogga).ಜನವರಿ 03: ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವತಿಯಿಂದ 2025 – 26 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ವಿವಿಧೆಡೆ ಜನವರಿ 4 ರಂದು ವಿಶೇಷ ಕರ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.

ಈ ಕುರಿತಂತೆ ಜಲ ಮಂಡಳಿಯ ನಿರ್ವಹಣಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜೀವನ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಕೌಂಟರ್ ಗಳ ವಿವರ : ಅಶೋಕನಗರ ಪೊಲೀಸ್ ಕ್ವಾಟ್ರಸ್ ಹಾಲಿನ ಡೈರಿ ಹತ್ತಿರ, ಗಾಂಧಿ ಬಜಾರ್ ಬಸವಣ್ಣ ದೇವಸ್ಥಾನದ ಆವರಣ, ಭಾರತೀಯ ಸಭಾಭವನ ಎದುರು, ಆರ್.ಎಂ.ಎಲ್. ನಗರ ಹಾಗೂ ಪಂಪಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ.

ಮೇಲ್ಕಂಡ ಸ್ಥಳಗಳಲ್ಲಿ ಕೌಂಟರ್ ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ನೀರಿನ ಬಾಕಿ ಕಂದಾಯ ಹಾಗೂ ಬಾಕಿ ಕರವಸೂಲಾತಿ ಉಳಿಸಿಕೊಂಡಿರುವ ಗ್ರಾಹಕರು ಕಂದಾಯ ಪಾವತಿ ಮಾಡಿಕೊಳ್ಳಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಅನದಿಕೃತ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಲ ಮಂಡಳಿ ಆಡಳಿತ ತಿಳಿಸಿದೆ. ಕಟ್ಟಡದ ಕಂದಾಯ ಪಾವತಿಸಿದ ರಶೀದಿ, ವಿದ್ಯುತ್ ಸಂಪರ್ಕ ಪಡೆದ ಆರ್ ಆರ್ ಸಂಖ್ಯೆ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್, ಸ್ಥಳದ ನಕ್ಷೆಯ ವಿವರವನ್ನು ಸರ್ವಜ್ಞ ವೃತ್ತದಲ್ಲಿರುವ ಮಂಡಳಿಯ ಕಚೇರಿಗೆ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

The Shivamogga City Water Supply and Sewerage Board has opened special tax collection counters in various parts of the city on January 4th to collect water revenue and arrears for the year 2025-26. Engineer Jeevan, Assistant Executive of the Water Board’s Management Sub-Division, gave information about this in a press release.

MP orders construction of underpasses and skywalks in major circles of Shivamogga! ಶಿವಮೊಗ್ಗದ ಪ್ರಮುಖ ಸರ್ಕಲ್ ಗಳಲ್ಲಿ ಅಂಡರ್ ಪಾಸ್ – ಸ್ಕೈವಾಕ್ ನಿರ್ಮಾಣಕ್ಕೆ ಎಂಪಿ ಸೂಚನೆ! Previous post shimoga news | ಶಿವಮೊಗ್ಗದ ಪ್ರಮುಖ ಸರ್ಕಲ್ ಗಳಲ್ಲಿ ಅಂಡರ್ ಪಾಸ್ – ಸ್ಕೈವಾಕ್ ನಿರ್ಮಾಣಕ್ಕೆ ಎಂಪಿ ಸೂಚನೆ!
Next post bhadravati news | ಶಿವಮೊಗ್ಗದ ಐವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಭದ್ರಾವತಿ ಕೋರ್ಟ್ : ಕಾರಣವೇನು?