MP orders construction of underpasses and skywalks in major circles of Shivamogga! ಶಿವಮೊಗ್ಗದ ಪ್ರಮುಖ ಸರ್ಕಲ್ ಗಳಲ್ಲಿ ಅಂಡರ್ ಪಾಸ್ – ಸ್ಕೈವಾಕ್ ನಿರ್ಮಾಣಕ್ಕೆ ಎಂಪಿ ಸೂಚನೆ!

shimoga news | ಶಿವಮೊಗ್ಗದ ಪ್ರಮುಖ ಸರ್ಕಲ್ ಗಳಲ್ಲಿ ಅಂಡರ್ ಪಾಸ್ – ಸ್ಕೈವಾಕ್ ನಿರ್ಮಾಣಕ್ಕೆ ಎಂಪಿ ಸೂಚನೆ!

ಶಿವಮೊಗ್ಗ (shivamogga), ಜನವರಿ 3: ಶಿವಮೊಗ್ಗ ನಗರದಲ್ಲಿ ವಾಹನ ದಟ್ಟಣೆಯಿಂದ ಉಂಟಾಗಿರುವ ಸಂಚಾರ ದಟ್ಟಣೆ ನಿಯಂತ್ರಿಸಲು, ಪ್ರಮುಖ ಸರ್ಕಲ್ ಗಳಲ್ಲಿ ಸ್ಕೈವಾಕ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಮೂಲಕ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಂಸದ ಬಿ ವೈ ರಾಘವೇಂದ್ರ ಸೂಚಿಸಿದ್ದಾರೆ.

ಶನಿವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂದೇಶ್ ಮೋಟಾರ್ ಸರ್ಕಲ್, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಆಲ್ಕೊಳ ಸರ್ಕಲ್ ಸೇರಿದಂತೆ ನಗರದ ಹಲವು ಸರ್ಕಲ್‌ಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಸಾಕಷ್ಟು ವಾಹನ ಸಂಚಾರ ದಟ್ಟಣೆಯಿದೆ. ಪಾದಚಾರಿಗಳು ರಸ್ತೆ ದಾಟಲು ಪರದಾಡುವಂತಾಗಿದೆ.

ಇದರಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿದೆ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಸ್ಕೈವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ನಗರದ ಶಿವಪ್ಪ ನಾಯಕ ಮತ್ತು ಅಮೀರ್ ಅಹಮದ್ ಸರ್ಕಲ್ ನಲ್ಲಿ ಅಂಡರ್ ಪಾಸ್ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಇದನ್ನು ಮುಚ್ಚಲಾಗಿದೆ. ಇದನ್ನು ಕೂಡಲೇ ಪರಿಶೀಲಿಸಿ ಮಳೆಗಾಲ ಹೊರತುಪಡಿಸಿ, ಉಳಿದ ದಿನಗಳಲ್ಲಿ ಅಂಡರ್‌ಪಾಸ್‌ ತೆರೆದು ಸಾರ್ವಜನಿರು ರಸ್ತೆ ದಾಟಲು ಅನುವು ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.

ಶಿವಮೊಗ್ಗದ ಶಾಂತಮ್ಮ ಲೇಔಟ್ ಮಾರ್ಗವಾಗಿ ಚಿತ್ರದುರ್ಗ ಹೋಗುವ ರಸ್ತೆ ಹಾಗೂ ಗುಂಡಪ್ಪ ಶೆಡ್ ರಸ್ತೆಯಲ್ಲಿ ಈಗಾಗಲೇ ಅಂಡರ್‌ಪಾಸ್ ಮಾಡಲು ತೀರ್ಮಾನಿಸಿದ್ದು, ಮರ ಕಡಿತ ಬಾಕಿ ಇದೆ. ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಜಂಟಿ ಸರ್ವೆ ಮಾಡಿ ವರದಿ ನೀಡಿದ ಕೂಡಲೇ ಅಂಡರ್‌ಪಾಸ್ ಕಾಮಗಾರಿ ಕೆಲಸ ಆರಂಭವಾಗುತ್ತದೆ.
ಹಾಗೂ ತರೀಕೆರೆ ಬೈ ಪಾಸ್ ಕಾಮಗಾರಿ ಮರ ಕಡಿತ ನಿಂದ ಅರ್ಧಕ್ಕೆ ನಿಂತಿದ್ದು, ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಕಾಮಗಾರಿಗೆ ದಾರಿ ಮಾಡಿಕೊಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಸಿಸಿಎಫ್ ಹನುಂತಪ್ಪ, ಎಸ್‌ಪಿ ಬಿ.ನಿಖಿಲ್, ಡಿಸಿಎಫ್ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ವಿ ಅಭಿಷೇಕ್, ವಿಶೇಷ ಭೂ ಸ್ವಾದೀನಾಧಿಕಾರಿ ಸಿದ್ದಲಿಂಗ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಳೆದ ಬಾರಿ 3500 ಕೋಟಿ ರೂ. ನೀಡಿತ್ತು. ಆದರೆ ಈ ಬಾರಿ 1500 ಕೋಟಿ ರೂ. ಬಿಡುಗಡೆ ಮಾಡಿದೆ. ಆಗುಂಬೆ ಮಾರ್ಗದ ಅಭಿವೃದ್ದಿಗೆ 400 ರೂ. ಕೋಟಿ ಬಿಡುಗಡೆ ಆಗಿದೆ. ರಾಜ್ಯ ಸರ್ಕಾರ, ಅಧಿಕಾರಿಗಳು, ಪರಿಸರವಾದಿಗಳು ವರದಿ ನೀಡಿದ ಮೇಲೆ ಆ ಮಾರ್ಗಕ್ಕೆ ಟನಲ್ ಮಾಡುವುದೊ ಅಥವಾ ರಸ್ತೆ ಅಗಲೀಕರಣ ಮಾಡುವುದೊ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಂಸದ ಬಿ ವೈ ರಾಘವೇಂದ್ರರವರು ಸಭೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸಂಚರಿಸಲು ಈಗಾಗಲೇ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಶಿಕಾರಿಪುರದಿಂದ ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಭೂಸ್ವಾದೀನ ಕುರಿತಾದ ಸಮಸ್ಯೆಯಿದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ 45 ಕೋಟಿ ರೂ.ಗಳನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ ಎಂದು ಸಂಸದರು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

To control the traffic congestion caused by vehicle congestion in Shivamogga city, MP BY Raghavendra has suggested that skywalks or underpasses be constructed at major circles to facilitate smooth movement of pedestrians.

The district administration forgot the largest lake under Shimoga corporation! ಶಿವಮೊಗ್ಗ ನಗರದಲ್ಲಿರುವ ಅತೀ ದೊಡ್ಡ ಕೆರೆ ಮರೆತ ಜಿಲ್ಲಾಡಳಿತ! Previous post shimoga news | ಶಿವಮೊಗ್ಗ ನಗರದಲ್ಲಿರುವ ಅತೀ ದೊಡ್ಡ ಕೆರೆ ಮರೆತ ಜಿಲ್ಲಾಡಳಿತ..!
Shivamogga Water Board Announcement: Special counter to pay water revenue on January 4th ಶಿವಮೊಗ್ಗ ಜಲ ಮಂಡಳಿ ಪ್ರಕಟಣೆ : ಜನವರಿ 4 ರಂದು ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್ Next post shimoga news | ಶಿವಮೊಗ್ಗ ಜಲ ಮಂಡಳಿ ಪ್ರಕಟಣೆ : ಜನವರಿ 4 ರಂದು ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್