'Chaddi gang' roaming in Bhadravati: Citizens worried! ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ ಓಡಾಟ : ನಾಗರೀಕರ ಆತಂಕ!

bhadravati | ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ : ನಾಗರೀಕರ ಆತಂಕ!

ಭದ್ರಾವತಿ (bhadravathi), ಸೆಪ್ಟೆಂಬರ್ 20: ಇತ್ತೀಚೆಗೆ ಶಿವಮೊಗ್ಗದ ವಿದ್ಯಾನಗರ ಸುತ್ತಮುತ್ತ ಕಾಣಿಸಿಕೊಂಡಿದ್ದ ಅಪರಿಚಿತ ಮುಸುಕುಧಾರಿಗಳ ತಂಡ, ಇದೀಗ ಭದ್ರಾವತಿ ನಗರದ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾರೂಢ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ.

ಸೆಪ್ಟೆಂಬರ್ 19 ರ ಮುಂಜಾನೆ, ಸರಿಸುಮಾರು 2 ರಿಂದ 3 ಗಂಟೆಯ ನಡುವೆ  ಸದರಿ ತಂಡ ಸಿದ್ದಾರೂಢ ನಗರದ ವಿವಿಧೆಡೆ ಓಡಾಡಿದೆ. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮಾರಕಾಸ್ತ್ರಗಳನ್ನಿಡಿದಿರುವ ಆರೇಳು ಜನರು ದರೋಡೆ ನಡೆಸಲು ಸಂಚು ನಡೆಸಿದ್ದಾರೆ.

ಕೆಲ ಮನೆಗಳ ಹೊರಭಾಗದಲ್ಲಿ ತಪಾಸಣೆ ಕೂಡ ಮಾಡಿದ್ದಾರೆ. ಸದರಿ ದೃಶ್ಯಗಳು ಮನೆಗಳ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಸದರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡಾ. ಅಶ್ವತ್ಥ ನಾರಾಯಣ ಎಂಬುವರ ಮನೆಯ ಕಾಂಪೌಂಡ್ ಹಾರಿಕೊಂಡು ಒಳ ಬಂದಿರುವ ದುಷ್ಕರ್ಮಿಗಳು ಹೊರಭಾಗದಲ್ಲಿ ತಪಾಸಣೆ ನಡೆಸಿದ್ದಾರೆ. ಮನೆಯವರು ಎಚ್ಚರಗೊಂಡ ಲೈಟ್ ಹಾಕಿದ್ದಾರೆ. ಇದರಿಂದ ಸದರಿ ತಂಡ ಸ್ಥಳದಿಂದ ಕಾಲ್ಕಿತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ ಸದರಿ ಬಡಾವಣೆಯಲ್ಲಿ ಹಳೇನಗರ ಠಾಣೆ ಬೀಟ್ ಪೊಲೀಸ್ ಸಿಬ್ಬಂದಿಗಳಾದ ಜೈನುಲ್ಲಾ, ಮಂಜುನಾಥ್ ಎಂಬುವರು ಬೈಕ್ ನಲ್ಲಿ ಆಗಮಿಸಿದ್ದಾರೆ. ಇವರನ್ನು ಕಂಡ ದುಷ್ಕರ್ಮಿಗಳು, ಭದ್ರಾ ನದಿಯ ಮೂಲಕ ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸಬ್ ಇನ್ಸ್’ಪೆಕ್ಟರ್ ಸುನೀಲ್, ಎಎಸ್ಐ ಕುಬೇರಪ್ಪ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಡಕಾಯಿತರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿಲ್ಲ.

ಸದರಿ ಘಟನೆಯ ನಂತರ ಭದ್ರಾವತಿ ಪೊಲೀಸರು ಹೈಅಲರ್ಟ್ ಆಗಿದ್ದು, ಡಕಾಯಿತರ ತಂಡದ ಪತ್ತೆಗೆ ವ್ಯಾಪಕ ಕ್ರಮಕೈಗೊಂಡಿದ್ದಾರೆ. ಗಸ್ತು ವ್ಯವಸ್ಥೆ ಹೆಚ್ಚಿಸಿರುವ ಮಾಹಿತಿಗಳು ತಿಳಿದುಬಂದಿದೆ.

Bhadravati, September 20: An incident has been reported where a group of unidentified masked men, who were recently seen around Vidyanagar in Shivamogga, have now been spotted in the areas around Siddharudha Nagar under the jurisdiction of old town Police Station in Bhadravati city.

Dussehra holiday declared for schools from September 20! ಸೆಪ್ಟೆಂಬರ್ 20 ರಿಂದ ಶಾಲೆಗಳಿಗೆ ದಸರಾ ರಜೆ ಘೋಷಣೆ! Previous post dasara school holidays 2025 | ಸೆಪ್ಟೆಂಬರ್ 20 ರಿಂದ ಶಾಲೆಗಳಿಗೆ ದಸರಾ ರಜೆ ಘೋಷಣೆ!
Power outage in areas around Shivamogga Airport on Sept. 23 ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ. 23 ರಂದು ವಿದ್ಯುತ್ ವ್ಯತ್ಯಯ Next post shimoga | power outage | ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ. 23 ರಂದು ವಿದ್ಯುತ್ ವ್ಯತ್ಯಯ