ರಾಜ್ಯದಲ್ಲಿಯೂ ನಿಷೇಧವಾಗಲಿದೆಯಾ ಗೋಬಿ ಮಂಚೂರಿ – ಬಾಂಬೆ ಮಿಠಾಯಿ?!

Will Gobi Manchuri – Bombay Mithai be banned in the state too?! ರಾಜ್ಯದಲ್ಲಿಯೂ ನಿಷೇಧವಾಗಲಿದೆಯಾ ಗೋಬಿ ಮಂಚೂರಿ – ಬಾಂಬೆ ಮಿಠಾಯಿ?!

ಬೆಂಗಳೂರು, ಮಾ. 10: ಆರೋಗ್ಯಕ್ಕೆ ಹಾನಿಕಾರಕ ಅಂಶ ಒಳಗೊಂಡಿರುವ ಹಿನ್ನೆಲೆಯಲ್ಲಿ, ಗೋವಾ  ರಾಜ್ಯದ ಮಾಪುಸ ನಗರಾಡಳಿತವು ಗೋಬಿ ಮಂಚೂರಿ ನಿಷೇಧಿಸಿತ್ತು. ಮತ್ತೊಂದೆಡೆ ತಮಿಳುನಾಡು ಹಾಗೂ ಪುದುಚೇರಿ ಸರ್ಕಾರಗಳು, ಬಾಂಬೆ ಮಿಠಾಯಿ ನಿಷೇಧಿಸಿತ್ತು. ಈ ನಡುವೆ ಕರ್ನಾಟಕ ರಾಜ್ಯದಲ್ಲಿ ಈ ಎರಡು ತಿನಿಸುಗಳು ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಎರಡು ತಿನಿಸುಗಳ ಕುರಿತಂತೆ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಲಾಗಿದ್ದು, ಈಗಾಗಲೇ ಇದರ ವರದಿಯು ಆರೋಗ್ಯ ಇಲಾಖೆ ಕೈ ಸೇರಿದೆ. ಈ ಸಂಬಂಧ ಮಾ.11 ರ ಸೋಮವಾರ ಆರೋಗ್ಯ ಇಲಾಖೆ ಸಚಿವರು ಅದಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ರಾಜ್ಯದ ನೂರಾರು ಕಡೆ ಗೋಬಿ ಮಂಚೂರಿ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ತಪಾಸಣೆಗೊಳಪಡಿಸಿದೆ ಎಂದು ಹೇಳಲಾಗಿದೆ.

ಆರೋಗ್ಯ ಸಚಿವರು ಹೇಳಿದ್ದೇನು? : ‘ಗೋಬಿ ಮಂಚೂರಿ ಖಾದ್ಯದ ಬಗ್ಗೆ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ಪರೀಕ್ಷೆ ನಡೆಸಲಾಗಿದ್ದು, ವರದಿ ಪರಿಶೀಲನೆ ನಡೆಸಿ ಸೋಮವಾರ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗೂಂಡುರಾವ್ ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.

ನಿಷೇಧ : ಕ್ಯಾನ್ಸರ್’ಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ, ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಸರ್ಕಾರಗಳು ಬಾಂಬೆ ಮಿಠಾಯಿ ಸಿಹಿ ತಿನಿಸನ್ನು ನಿಷೇಧಿಸಿವೆ. ಮತ್ತೊಂದೆಡೆ ಗೋವಾ ರಾಜ್ಯದ ಮಾಪುಸ ನಗರಾಡಳಿತವು, ಗೋಬಿ ಮಂಚೂರಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಿತ್ತು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *