ಶಿವಮೊಗ್ಗ : ಪ್ರತ್ಯೇಕ ಕಳ್ಳತನ ಪ್ರಕರಣ – ಮೂವರು ಮಹಿಳೆಯರ ಬಂಧನ!

Shimoga: Separate theft case - arrest of three women! ಶಿವಮೊಗ್ಗ : ಪ್ರತ್ಯೇಕ ಕಳ್ಳತನ ಪ್ರಕರಣ – ಮೂವರು ಮಹಿಳೆಯರ ಬಂಧನ!

ಶಿವಮೊಗ್ಗ (shivamogga), ಜು. 15: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ (doddapete police station) ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಳವು ಪ್ರಕರಣಗಳಿಗೆ (individual theft cases) ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು (womens) ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬಸ್ ನಿಲ್ದಾಣದಲ್ಲಿ ಕಳವು : ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ (shimoga ksrtc bus stand) ಪ್ರಯಾಣಿಕರಿಂದ ಚಿನ್ನಾಭರಣ (jewels) ಕಳವು ಮಾಡಿದ್ದ ಆರೋಪದ ಮೇರೆಗೆ ಮಂಜುನಾಥ ಬಡಾವಣೆ ನಿವಾಸಿ ತಾಹಿರಾ ರೋಹಿ (32) ಎಂಬ ಮಹಿಳೆಯನ್ನು ಬಂಧಿಸಲಾಗಿದೆ.

29-6-2024 ರಂದು ಭದ್ರಾವತಿ (bhadravathi) ಕೂಡ್ಲಿಗೆರೆ ಗ್ರಾಮದ ಮಹಿಳೆಯೋರ್ವರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ (ksrtc bus stand) ಆಗಮಿಸಿದ್ದರು. ಈ ವೇಳೆ ಅವರ ವ್ಯಾನಿಟಿ ಬ್ಯಾಗ್ (vanity bag) ನಲ್ಲಿದ್ದ ಬಂಗಾರದ ನಕ್ಲೆಸ್ (nekles) ಕಳುವಾಗಿದ್ದು ಕಂಡುಬಂದಿತ್ತು. ಈ ಸಂಬಂಧ ಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸದರಿ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ತಾಹಿರಾ ರೋಹಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆಪಾದಿತೆಯು ಬಸ್ ನಿಲ್ದಾಣದಲ್ಲಿ ಎರಡು ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಗಿತ್ತು. ಆಪಾದಿತೆಯಿಂದ 5.45 ಲಕ್ಷ ರೂ. ಮೌಲ್ಯದ 81 ಗ್ರಾಂ 800 ಮಿಲಿ ಗ್ರಾಂ ತೂಕದ ಬಂಗಾರದ ಆಭರಣಗಳನ್ನು (gold jewelry) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಂಗಡಿಯಲ್ಲಿ ಕಳವು : ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗದ ಬಿ.ಹೆಚ್.ರಸ್ತೆಯ (b h road) ಭೀಮಾ ಗೋಲ್ಡ್ ಅಂಗಡಿಯಲ್ಲಿ (bhima gold jewelry shop) 25-5-2024 ರಂದು ಗ್ರಾಹಕರ ಸೋಗಿನಲ್ಲಿ (In customer guise) ಆಗಮಿಸಿ, 3 ಬಂಗಾರದ ಲಾಕೆಟ್ ಕಳವು ಮಾಡಿರುವ ಕುರಿತಂತೆ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಿವಮೊಗ್ಗದ ಜಿ.ಎಸ್.ಕೆ.ಎಂ ರಸ್ತೆ ಪಂಚವಟಿ ಕಾಲೋನಿಯ ನಿವಾಸಿಯಾದ ಸರೋಜ ಕೆ (49) ಹಾಗೂ ಯುವತಿ ತನ್ವಿ ಎಂ ಎಸ್ (22) ಎಂಬುವರನ್ನು ಬಂಧಿಸಿದ್ದಾರೆ ಇವರಿಂದ 27 ಸಾವಿರ ರೂ. ಮೌಲ್ಯದ 3 ಗ್ರಾಂ 470 ಮಿಲಿ ತೂಕದ 3 ಬಂಗಾರದ ಲಾಕೆಟ್ ಗಳನ್ನು (gold locket) ಪೊಲೀಸರು (police) ವಶಕ್ಕೆ ಪಡೆದುಕೊಂಡಿದ್ದಾರೆ.

ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ (inspector) ರವಿ ಪಾಟೀಲ್ ನೇತೃತ್ವದಲ್ಲಿ ಎ ಎಸ್ ಐ ನಾಗರಾಜ್, ಫಾಲಾಕ್ಷ ನಾಯ್ಕ್, ಲಚ್ಚನಾಯ್ಕ್, ಸಿಪಿಸಿಗಳಾದ ಚಂದ್ರ ನಾಯ್ಕ್, ಗುರುನಾಯ್ಕ್, ನಿತಿನ್, ಪುನೀತ್ ರಾವ್, ಸಿಬ್ಬಂದಿಗಳಾದ ದೀಪಾ ಎಸ್ ಹುಬ್ಬಳ್ಳಿ, ಪೂಜಾ, ಸುಮಿತ್ರಬಾಯಿ, ಲಕ್ಷ್ಮೀರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →