filling of shikaripura anjanapura reservoir: yeddyurappa's sons offer bagin ಶಿಕಾರಿಪುರ ಅಂಜನಾಪುರ ಡ್ಯಾಂ ಭರ್ತಿ : ಯಡಿಯೂರಪ್ಪ ಪುತ್ರರಿಂದ ಬಾಗಿನ ಅರ್ಪಣೆ

ಶಿಕಾರಿಪುರ ಅಂಜನಾಪುರ ಜಲಾಶಯ ಭರ್ತಿ : ಯಡಿಯೂರಪ್ಪ ಪುತ್ರರಿಂದ ಬಾಗಿನ ಅರ್ಪಣೆ

ಶಿಕಾರಿಪುರ (shikaripura), ಜು. 17: ಶಿಕಾರಿಪುರ ತಾಲೂಕಿನಾದ್ಯಂತ ಮುಂಗಾರು ಮಳೆ (monsoon rain) ಚುರುಕುಗೊಂಡಿದೆ. ಈ ನಡುವೆ ತಾಲೂಕಿನ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ, ತಾಲೂಕಿನ ರೈತರ ಜೀವನಾಡಿಯಾದ ಅಂಜನಾಪುರ ಜಲಾಶಯ (anjanapura dam) ಗರಿಷ್ಠ ಮಟ್ಟ ತಲುಪಿದ್ದು, ನೀರು ಹೊರ ಹರಿಯಲಾರಂಭಿಸಿದೆ.

ಅಂಜನಾಪುರ ಡ್ಯಾಂ 23 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನೀರಾವರಿ (irrigation) ಜೊತೆಗೆ ಶಿಕಾರಿಪುರ (shikaripura) ಹಾಗೂ ಶಿರಾಳಕೊಪ್ಪ (shiralakoppa) ಪಟ್ಟಣಗಳಿಗೆ ಡ್ಯಾಂನಿಂದ (dam) ಕುಡಿಯುವ ನೀರು (drinking water) ಪೂರೈಕೆಯಾಗುತ್ತದೆ. ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರ (farmers) ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಈ ನಡುವೆ ಬುಧವಾರ ಜಲ ಸಂಪನ್ಮೂಲ ಇಲಾಖೆಯಿಂದ (water resource department) ಅಂಜನಾಪುರ ಡ್ಯಾಂಗೆ (anjanapura dam) ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (mp b y raghavendra) ಹಾಗೂ ಕ್ಷೇತ್ರದ ಶಾಸಕರೂ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (bjp president b y vijayendra) ಅವರು ಜಲಾಶಯಕ್ಕೆ ಪೂಜೆ ಸಲ್ಲಿಸಿ ಕುಟುಂಬ ಸದಸ್ಯರೊಂದಿಗೆ ಬಾಗಿನ ಅರ್ಪಿಸಿದರು.

‘ತುಂಗಾ ಜಲಾಶಯ ವ್ಯಾಪ್ತಿ ಹಾಗೂ ಶಿಕಾರಿಪುರ ತಾಲೂಕಿನಾದ್ಯಂತ (shikaripur taluk) ಉತ್ತಮ ವರ್ಷಧಾರೆಯಾಗುತ್ತಿದೆ (rainfall). ಇದರಿಂದ ತಾಲೂಕಿನ ಅನ್ನದಾತರ ಜೀವನಾಡಿಯಾದ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ತನ್ನ ವೈಭವವನ್ನು ಮರಳಿ ಪಡೆದಿದೆ. ಇಂದು ಜಲಸಂಪನ್ಮೂಲ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಬಾಗಿನ (bagina) ಸಮರ್ಪಣೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ (mla) ಬಿ.ವೈ. ವಿಜಯೇಂದ್ರ ಅವರೊಂದಿಗೆ ಭಾಗಿಯಾಗಿ ಬಾಗಿನ ಅರ್ಪಿಸಲಾಯಿತು’ ಎಂದು ಲೋಕಸಭಾ ಸದಸ್ಯ ಬಿ.ವೈ.ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದ (social media) ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.

Heavy rain is likely to continue : red alert forecast for Shimoga district again! ಭಾರೀ ಮಳೆ ಮುಂದುವರಿಕೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್ ಅಲರ್ಟ್ ಮುನ್ಸೂಚನೆ! Previous post ಭಾರೀ ಮಳೆ ಮುಂದುವರಿಕೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್ ಅಲರ್ಟ್ ಮುನ್ಸೂಚನೆ!
70000 cusecs of water released from tunga dam : flood threat continues in shimoga city! ತುಂಗಾ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗ ನಗರದಲ್ಲಿ ಮುಂದುವರಿದ ಪ್ರವಾಹ ಭೀತಿ! Next post ತುಂಗಾ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗ ನಗರದಲ್ಲಿ ಮುಂದುವರಿದ ಪ್ರವಾಹ ಭೀತಿ!