Heavy rain : Shimoga - Bhadravati - Shikaripura taluk 18th Thursday holiday announcement for schools and colleges! ಭಾರೀ ಮಳೆ : ಶಿವಮೊಗ್ಗ – ಭದ್ರಾವತಿ - ಶಿಕಾರಿಪುರ ತಾಲೂಕಿನಲ್ಲಿ ಜು. 18 ರ ಗುರುವಾರ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ!

ಭಾರೀ ಮಳೆ : ಶಿವಮೊಗ್ಗ – ಭದ್ರಾವತಿ – ಶಿಕಾರಿಪುರ ತಾಲೂಕಿನಲ್ಲಿ ಜು. 18 ರ ಗುರುವಾರ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ!

ಶಿವಮೊಗ್ಗ, ಜು. 18: ಭಾರೀ ಮಳೆ (heavy rainfall) ಮುಂದುವರಿದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ತಾಲೂಕಿನ ಶಾಲಾ – ಕಾಲೇಜ್ ಗಳಿಗೆ (shools and colleges) ರಜೆ (holiday) ಘೋಷಣೆ ಮಾಡಲಾಗಿದೆ.

ಶಿವಮೊಗ್ಗ ನಗರ (shimoga city) ಸೇರಿದಂತೆ ತಾಲೂಕಿನಾದ್ಯಂತ ತಡರಾತ್ರಿಯಿಂದ ವ್ಯಾಪಕ ಮಳೆಯಾಗುತ್ತಿದ್ದು, ಗುರುವಾರ ಬೆಳಿಗ್ಗೆಯಿಂದಲೂ ಧಾರಾಕಾರ ಮಳೆ (rainfall) ಮುಂದುವರಿದಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಶಾಲೆಗಳಿಗೆ ರಜೆ ಘೋಷಣೆ (Holiday announcement for schools) ಮಾಡಲಾಗಿದೆ ಎಂದು ಬಿಇಓ ರಮೇಶ್ (beo ramesh) ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಭದ್ರಾವತಿ (bhadravathi) ಹಾಗೂ ಶಿಕಾರಿಪುರ (shikaripura) ತಾಲೂಕಿನ ಶಾಲಾ – ಕಾಲೇಜ್ ಗಳಿಗೂ ರಜೆ ಘೋಷಣೆ ಮಾಡಿ ಅಲ್ಲಿನ ಆಡಳಿತ ಆದೇಶ ಹೊರಡಿಸಿರುವ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಜಿಲ್ಲೆಯ ಹೊಸನಗರ (hosanagara), ಸಾಗರ (sagara), ತೀರ್ಥಹಳ್ಳಿ (thirthalli), ಸೊರಬ (soraba) ತಾಲೂಕಿನ ಶಾಲೆಗಳಿಗೆ ಆಯಾ ತಾಲೂಕು ಆಡಳಿತಗಳು ರಜೆ ಘೋಷಣೆ ಮಾಡಿವೆ. ಇದೀಗ ಜಿಲ್ಲೆಯ ಉಳಿದ ಮೂರು ತಾಲೂಕುಗಳಲ್ಲಿಯೂ ಗುರುವಾರ (ಜು. 18) ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

International Justice Day : Let's know about India's new criminal laws ಅಂತಾರಾಷ್ಟ್ರೀಯ ನ್ಯಾಯ ದಿನ : ಭಾರತದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ತಿಳಿಯೋಣ Previous post ಅಂತಾರಾಷ್ಟ್ರೀಯ ನ್ಯಾಯ ದಿನ : ಭಾರತದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ತಿಳಿಯೋಣ
Tunga river which caused flood threat: Increasing inflow to Gajanur Tunga Reservoir! ಪ್ರವಾಹದ ಭೀತಿ ಮೂಡಿಸಿದ ತುಂಗಾ ನದಿ : ಗಾಜನೂರು ತುಂಗಾ ಡ್ಯಾಂಗೆ ಹೆಚ್ಚುತ್ತಿರುವ ಒಳಹರಿವು! Next post ಪ್ರವಾಹದ ಭೀತಿ ಮೂಡಿಸಿದ ತುಂಗಾ ನದಿ : ಗಾಜನೂರು ತುಂಗಾ ಜಲಾಶಯಕ್ಕೆ ಹೆಚ್ಚುತ್ತಿರುವ ಒಳಹರಿವು!