
ಜಲಾಶಯಗಳ ಒಳಹರಿವಿನಲ್ಲಿ ಕೊಂಚ ಇಳಿಕೆ!
ಶಿವಮೊಗ್ಗ (shivamogga), ಜು. 20: ಮಲೆನಾಡಿನಲ್ಲಿ ಮಳೆ (malnad rain) ಮುಂದುವರಿದಿದ್ದು, ಅಬ್ಬರ ಕೊಂಚ ಇಳಿಕೆಯಾಗಿದೆ. ಪ್ರಮುಖ ಜಲಾಶಯಗಳ (dam) ಒಳಹರಿವಿನಲ್ಲಿಯೂ ತುಸು ಇಳಿಕೆ ಕಂಡುಬಂದಿದೆ. ಮತ್ತೊಂದೆಡೆ, ಹವಾಮಾನ ಇಲಾಖೆಯು (meteorological department) ಮುಂದಿನ ಎರಡ್ಮೂರು ದಿನಗಳ ಕಾಲ ಮಲೆನಾಡಿನಲ್ಲಿ ಭಾರೀ ಮಳೆ (heavy rainfall) ಮುಂದುವರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ (rain) ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ (mani) 108 ಮಿಲಿ ಮೀಟರ್, ಯಡೂರು (yadur) 105 ಮಿ.ಮೀ., ಹುಲಿಕಲ್ (hulikal) 149 ಮಿ.ಮೀ., ಮಾಸ್ತಿಕಟ್ಟೆ (masthikatte) 167 ಮಿ.ಮೀ., ಚಕ್ರಾ (chakra) 125 ಮಿ.ಮೀ., ಸಾವೇಹಕ್ಲು (savehakklu) 140 ಮಿ.ಮೀ. ಮಳೆಯಾಗಿದೆ.
ಉಳಿದಂತೆ ಶಿವಮೊಗ್ಗ (shivamogga) 28. 20 ಮಿ.ಮೀ., ಭದ್ರಾವತಿ (bhadravati) 22. 80 ಮಿ.ಮೀ., ತೀರ್ಥಹಳ್ಳಿ (thirthahalli) 65. 60 ಮಿ.ಮೀ., ಸಾಗರ (sagar) 93. 10 ಮಿ.ಮೀ., ಶಿಕಾರಿಪುರ (shikaripur) 41. 40 ಮಿ.ಮೀ., ಸೊರಬ (sorab) 53. 40 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagar) 77., 60 ಮಿ.ಮೀ. ವರ್ಷಧಾರೆಯಾಗಿದೆ.
ಡ್ಯಾಂ ವಿವರ : ಶನಿವಾರದ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲ ವಿದ್ಯುತ್ (power generation) ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ (linganamakki) ಒಳಹರಿವು 69,724 ಕ್ಯೂಸೆಕ್ ಇದೆ. ಹೊರ ಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಡ್ಯಾಂ ನೀರಿನ ಮಟ್ಟ 1794. 3 (ಗರಿಷ್ಠ ಮಟ್ಟ : 1819 ) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1761. 5 ಅಡಿಯಿತ್ತು.
ಭದ್ರಾ ಡ್ಯಾಂನ (bhadra dam) ಒಳಹರಿವು 46,876 ಕ್ಯೂಸೆಕ್ ಇದೆ. ಭದ್ರಾ ಡ್ಯಾಂ ನೀರಿನ ಮಟ್ಟ 162 ಅಡಿ 3 ಇಂಚು ಇದೆ (ಗರಿಷ್ಠ ಮಟ್ಟ : 186 ಅಡಿ) ಇದೆ. ಪ್ರಸ್ತುತ ಡ್ಯಾಂನ ಹೊರಹರಿವು (out flow) 186 ಕ್ಯೂಸೆಕ್ ಇದೆ. ಕಳೆದ ವರ್ಷ (last year) ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 142. 1 ಅಡಿ ನೀರು ಸಂಗ್ರಹವಾಗಿತ್ತು.
ತುಂಗಾ ಜಲಾಶಯವು (tunga dam) ಕಳೆದ ಹಲವು ವಾರಗಳ ಹಿಂದೆಯೇ ಗರಿಷ್ಠ ಮಟ್ಟವಾದ 588. 24 ಮೀಟರ್ ತಲುಪಿದೆ. ಪ್ರಸ್ತುತ ಡ್ಯಾಂನ ಒಳಹರಿವು 65,796 ಕ್ಯೂಸೆಕ್ ಒಳಹರಿವಿದ್ದು, 68,654 ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ (hosapet tungabhadra dam) ಬಿಡಲಾಗುತ್ತಿದೆ.