
ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆ ಆರ್ಭಟ : ಚಕ್ರಾದಲ್ಲಿ 273 ಮಿಲಿ ಮೀಟರ್ ವರ್ಷಧಾರೆ!
ಶಿವಮೊಗ್ಗ (shivamogga), ಜು. 25: ಜಿಲ್ಲೆಯ ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಲ್ಲಿ ಮತ್ತೆ ಮಳೆ ಆರ್ಭಟ (heavy to heavy rainfall) ಆರಂಭವಾಗಿದೆ. ಎಡೆಬಿಡದೆ ಧಾರಾಕಾರ ವರ್ಷಧಾರೆಯಾಗಲಾರಂಭಿಸಿದೆ. ಇದರಿಂದ ಪ್ರಮುಖ ನದಿಗಳ (rivers) ನೀರಿನ ಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ, ಹೊಸನಗರ (hosanagar) ತಾಲೂಕಿನ ಚಕ್ರಾದಲ್ಲಿ (chakra) ಅತ್ಯಧಿಕ 275 ಮಿಲಿ ಮೀಟರ್ (ಮಿ.ಮೀ.) ಮಳೆಯಾಗಿದೆ (rain). ಮಾಣಿಯಲ್ಲಿ (mani) 253 ಮಿ.ಮೀ., ಸಾವೇಹಕ್ಲು (savehakklu) 230 ಮಿ.ಮೀ., ಯಡೂರು (yadur( 206 ಮಿ.ಮೀ., ಹುಲಿಕಲ್ (hulikal) 176 ಮಿ.ಮೀ., ಮಾಸ್ತಿಕಟ್ಟೆಯಲ್ಲಿ (masthikatte) 170 ಮಿ.ಮೀ. ಮಳೆಯಾಗಿದೆ.
ಉಳಿದಂತೆ ಶಿವಮೊಗ್ಗದಲ್ಲಿ (shimoga) 19. 90 ಮಿ.ಮೀ., ಭದ್ರಾವತಿ (bhadravati) 20. 50 ಮಿ.ಮೀ., ತೀರ್ಥಹಳ್ಳಿ (thirthahalli) 86. 60 ಮಿ.ಮೀ., ಸಾಗರ (sagar) 55. 50 ಮಿ.ಮೀ., ಶಿಕಾರಿಪುರ (shikaripur) 18. 30 ಮಿ.ಮೀ., ಸೊರಬ (sorab) 21. 60 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagar) 77. 10 ಮಿ.ಮೀ. ಮಳೆಯಾಗಿದೆ.
ಡ್ಯಾಂಗಳ ವಿವರ : ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ (linganamakki dam) ಒಳಹರಿವಿನಲ್ಲಿ ಏರಿಕೆ ಕಂಡುಬಂದಿದ್ದು, ಗರುವಾರ ಬೆಳಿಗ್ಗೆಯ ಮಾಹಿತಿಯಂತೆ 53,371 ಕ್ಯೂಸೆಕ್ ನೀರು ಹರಿದುಬರುತ್ತಿದೆ (inflow). 1935 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 1802. 7 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1778. 9 ಅಡಿಯಿತ್ತು.
ಭದ್ರಾ ಡ್ಯಾಂ ನೀರಿನ ಮಟ್ಟ 171 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. 26,044 ಕ್ಯೂಸೆಕ್ ಒಳಹರಿವಿದ್ದು, 200 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (out flow). ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 152. 9 ಅಡಿಯಿತ್ತು. ಉಳಿದಂತೆ ತುಂಗಾ ಡ್ಯಾಂ (tunga dam) ಒಳಹರಿವು 37,236 ಕ್ಯೂಸೆಕ್ ಇದ್ದು ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೆ (hospet tungabhadra dam) ಬಿಡಲಾಗುತ್ತಿದೆ.