Plastic national flag sale ban! ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ನಿಷೇಧ!

ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ನಿಷೇಧ!

ಶಿವಮೊಗ್ಗ (shivamogga), ಆ. 9 : ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜ (national flag made of plastic) ಬಳಸದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಮೇಶ್ ವಿ ಅವರು ತಿಳಿಸಿದ್ದಾರೆ.

ಭಾರತ ಸರ್ಕಾರದ (central govt) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಗೃಹ ಮಂತ್ರಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಪ್ಲಾಸ್ಟಿಕ್‌ನಿಂದ (plastic) ತಯಾರಿಸಿದ ರಾಷ್ಟ್ರ ಧ್ವಜ ಬಳಸದಂತೆ ನಿರ್ದೇಶನ ನೀಡಿದೆ. 

ರಾಷ್ಟ್ರೀಯ ಗೌರವ ಕಾಯ್ದೆ -1971 (the Prevention of Insults to National Honour Act, 1971) ಮತ್ತು ಭಾರತ ಧ್ವಜ ಸಂಹಿತೆ 2002 (national flag act) ರಡಿ ಎಲ್ಲಾ  ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳಲ್ಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ದಿನ (independence day) ನಿಷೇಧಿತ ಪ್ಲಾಸ್ಟಿಕ್ ಧ್ವಜವನ್ನು (Plastic flag) ಬಳಸಬಾರದು.

ಈ ನಿರ್ದೇಶನವನ್ನು ಉಲ್ಲಂಘಿಸಿದವರ ವಿರುದ್ಧ ಅಪರಾಧ ಸ್ವರೂಪಕ್ಕೆ ಅನುಗುಣವಾಗಿ, ಕರ್ನಾಟಕ ಸರ್ಕಾರದ ಅಧಿಸೂಚನೆ ಪ್ರಕಾರ, ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (karnataka state pollution control board) ಪರಿಸರ ಅಧಿಕಾರಿ ರಮೇಶ್ ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The case of a newly married couple fighting case : the groom also died after the bride! ಮಚ್ಚಿನಲ್ಲಿ ಹೊಡೆದಾಡಿಕೊಂಡ ನವ ದಂಪತಿ ಪ್ರಕರಣ : ವಧುವಿನ ಬೆನ್ನಲ್ಲೇ ವರನೂ ಸಾವು Previous post ನವ ದಂಪತಿ ಪ್ರಕರಣ : ವಧುವಿನ ಬೆನ್ನಲ್ಲೇ ವರನೂ ಸಾವು!
A woman who went missing with her two children at night was found dead in a well in the morning! ರಾತ್ರಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ Next post ರಾತ್ರಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ, ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ!