What did Minister Madhu Bangarappa say about Airport VISL MPM? ವಿಮಾನ ನಿಲ್ದಾಣ ವಿಐಎಸ್ಎಲ್ ಎಂಪಿಎಂ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ವಿಮಾನ ನಿಲ್ದಾಣ, ವಿಐಎಸ್ಎಲ್, ಎಂಪಿಎಂ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

 ಶಿವಮೊಗ್ಗ (shivamogga), ಆ. 11: ಭದ್ರಾವತಿಯ (bhadravati) ಎರಡು ಕಣ್ಣುಗಳಂತಿರುವ ವಿಐಎಸ್ಎಲ್ (visl) ಮತ್ತು ಎಂಪಿಎಂ (mpm) ಕಾರ್ಖಾನೆಗಳನ್ನು, ಸರ್ಕಾರದ ವತಿಯಿಂದಲೇ ಪುನಶ್ಚೇತನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ (minister madhu bangarappa) ಅವರು ತಿಳಿಸಿದ್ದಾರೆ.

ಅವರು ಇಂದು ಭದ್ರಾ ಜಲಾಶಯಕ್ಕೆ (bhadra dam) ಬಾಗಿನ ಅರ್ಪಿಸುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಅವಳಿ ಸಂಸ್ಥೆಗಳನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದ, ಸಾವಿರಾರು ಕುಟುಂಬಗಳು ಉದ್ಯೋಗಾವಕಾಶ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿವೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (shimoga airport) ಬಾಕಿ ಇರುವ ನೈಟ್ ಲ್ಯಾಂಡಿಂಗ್ ಸೇರಿದಂತೆ, ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು. ನೈಟ್ ಲ್ಯಾಂಡಿಂಗ್ ಗೆ (night landing) ಸಂಬಂಧಪಟ್ಟಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಾಲೆಗಳಲ್ಲಿ ಕೊರತೆಯಿರುವ ಶಿಕ್ಷಕರ ಹುದ್ದೆಗಳ (teacher post) ಶೀಘ್ರದಲ್ಲಿ ಭರ್ತಿ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಹೇಳಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿನ (education dept) ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ, ಈಗಾಗಲೇ ರೂಪಿಸಿರುವ ಯೋಜನೆಗಳಂತೆ ಮುಂದಿನ ಒಂದು ಅಥವಾ ಒಂದೂವರೆ ವರ್ಷಗಳ ಅವಧಿಯಲ್ಲಿ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿನ ಬಹುತೇಕ ಎಲ್ಲಾ ಜಲಾಶಯಗಳು (dams) ಸುಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳ ಸ್ಥಿತಿಗತಿಗಳ ಕುರಿತು ಉಪಮುಖ್ಯಮಂತ್ರಿಯ ಡಿ ಕೆ ಶಿವಕುಮಾರ್ (dcm d k shivakumar) ಅವರ ನೇತೃತ್ವದಲ್ಲಿ ಶೀಘ್ರದಲ್ಲಿ ಬೆಂಗಳೂರಿನಲ್ಲಿ (bengaluru) ಸಭೆ ಕರೆದು ಚರ್ಚಿಸಲಾಗುವುದು ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದ್ದಾರೆ.

bagina offering program for bhadra reservoir ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ Previous post ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ
1. 50 Lakh cusec water out of Tungabhadra Reservoir : Flood threat! ತುಂಗಭದ್ರಾ ಜಲಾಶಯದಿಂದ 1. 50 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ : ಪ್ರವಾಹ ಭೀತಿ! Next post ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ : ಪ್ರವಾಹ ಭೀತಿ!