The miscreants santching the woman's mangalsutra ಮಹಿಳೆಯ ಮಾಂಗಲ್ಯ ಸರ ಅಪಹರಿಸಿದ ದುಷ್ಕರ್ಮಿಗಳು

ಕಾರ್ಮಿಕ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಮಾಂಗಲ್ಯ ಸರ ಅಪಹರಣ!

ಶಿವಮೊಗ್ಗ (shivamogga), ಆ. 15: ಕಾರ್ಮಿಕ ಮಹಿಳೆಯೋರ್ವರ ಮಾಂಗಲ್ಯ ಸರವನ್ನು (mangalsutra snatching) ದುಷ್ಕರ್ಮಿಗಳು ಅಪಹರಿಸಿ (chain snatching) ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶದ (kalluru mandli industrial area) ಬಳಿ ನಡೆದಿದೆ.

ಕಲ್ಲೂರು ಮಂಡ್ಲಿಯೊಂದರ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ, 53 ವರ್ಷದ ಮಹಿಳೆಯೇ (women) ಮಾಂಗಲ್ಯ ಸರ ಕಳೆದುಕೊಂಡವರೆಂದು ಗುರುತಿಸಲಾಗಿದೆ. ಆ. 13 ರ ಸಂಜೆ 7. 30 ರ ಸುಮಾರಿಗೆ ಘಟನೆ ನಡೆದಿದೆ.

ಮಹಿಳೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬೈಕ್ (bike) ನಲ್ಲಿ ಕುಳಿತ್ತಿದ್ದ ಇಬ್ಬರು ದುಷ್ಕರ್ಮಿಗಳಲ್ಲಿ (criminals) ಓರ್ವ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ನಂತರ ಇಬ್ಬರು ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಕಳುವಾದ ಮಾಂಗಲ್ಯ ಸರ 20 ಗ್ರಾಂ ತೂಕದ್ದಾಗಿದ್ದು, ಸರಿಸುಮಾರು 1. 20 ಲಕ್ಷ ರೂ. ಮೌಲ್ಯವೆಂದು ಅಂದಾಜಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ (tunga nagar police station) ಪ್ರಕರಣ ದಾಖಲಾಗಿದೆ.

An organization donated for the treatment of a cancer-stricken girl on the occasion of Independence Day ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕ್ಯಾನ್ಸರ್ ಪೀಡಿತ ಬಾಲಕಿಯ ಚಿಕಿತ್ಸೆಗೆ ನೆರವಿನಹಸ್ತ Previous post ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕ್ಯಾನ್ಸರ್ ಪೀಡಿತ ಬಾಲಕಿಯ ಚಿಕಿತ್ಸೆಗೆ ನೆರವಿನಹಸ್ತ
10 lakhs Valuable Tool Donation to the school from Minister Madhubangarappa ಸಚಿವ ಮಧುಬಂಗಾರಪ್ಪರಿಂದ ಸರ್ಕಾರಿ ಶಾಲೆಗೆ 10 ಲಕ್ಷ ರೂ. ಮೌಲ್ಯದ ಪರಿಕರ ದೇಣಿಗೆ Next post ಸಚಿವ ಮಧು ಬಂಗಾರಪ್ಪರಿಂದ ಸರ್ಕಾರಿ ಶಾಲೆಗೆ 10 ಲಕ್ಷ ರೂ. ಮೌಲ್ಯದ ಪರಿಕರ ದೇಣಿಗೆ