shimoga | ಬ್ಲ್ಯಾಕ್’ಮೇಲ್, ಒತ್ತಡದಿಂದಲೇ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ : CID ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ
ಶಿವಮೊಗ್ಗ (shivamogga), ಆ. 23: ವಾಲ್ಮೀಕಿ ಅಭಿವೃದ್ದಿ ನಿಗಮದ (valmiki development corporations) ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ (chandrasekharan suicide case) ಕ್ಕೆ ಸಂಬಂಧಿಸಿದಂತೆ, ಸಿಐಡಿ ವಿಶೇಷ ತನಿಖಾ ತಂಡ (SIT) ಶಿವಮೊಗ್ಗದ ನ್ಯಾಯಾಲಯಕ್ಕೆ (shimoga court) Aug 22 ರ ಗುರುವಾರ ಪ್ರಾಥಮಿಕ ಹಂತದ ಆರೋಪಪಟ್ಟಿ (preliminary charge sheet) ದಾಖಲಿಸಿದೆ.
ಡಿವೈಎಸ್ಪಿ ಮೊಹಮ್ಮದ್ ರಫೀಕ್ ನೇತೃತ್ವದ ಸಿಐಡಿ ತಂಡ, 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ 300 ಪುಟಗಳ ಚಾರ್ಜ್’ಶೀಟ್ (charge sheet) ಸಲ್ಲಿಕೆ ಮಾಡಿದೆ. ಪ್ರಕರಣದ ತನಿಖೆ ಪೂರ್ಣಗೊಂಡ ನಂತರ, ಸಿಐಡಿ ತಂಡವು ಅಂತಿಮ ಹಂತದ ಚಾರ್ಜ್’ಶೀಟ್ ಸಲ್ಲಿಕೆ ಮಾಡಲಿದೆ.
ಚಂದ್ರಶೇಖರನ್ (chandrasekharan) ಅವರು ಡೆತ್ ನೋಟ್ (death note) ನಲ್ಲಿ ಉಲ್ಲೇಖಿಸಿದ್ದ, ವಾಲ್ಮೀಕಿ ನಿಗದಮ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಹಾಗೂ ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಅವರು ತಪ್ಪಿತಸ್ಥರೆಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಚಂದ್ರಶೇಖರನ್ ಅವರ ಆತ್ಮಹತ್ಯೆಗೆ ಆರೋಪಿತ ಅಧಿಕಾರಿಗಳಿಬ್ಬರ ಬ್ಲ್ಯಾಕ್’ಮೇಲ್, ಒತ್ತಡ ಕಾರಣವಾಗಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಮಾಡಿಕೊಂಡಿದ್ದರು : ಶಿವಮೊಗ್ಗದ ವಿನೋಬನಗರದಲ್ಲಿರುವ ನಿವಾಸದಲ್ಲಿ ಚಂದ್ರಶೇಖರನ್ (48) ಅವರು 2024 ರ ಮೇ 26 ರಂದು ಆತ್ಮಹತ್ಯೆ (suicide) ಮಾಡಿಕೊಂಡಿದ್ದರು. ಈ ವೇಳೆ ಅವರು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿತ್ತು. ವಿನೋಬನಗರ ಪೊಲೀಸ್ ಠಾಣೆಯಲ್ಲಿ (vinoba nagara police station) ಪ್ರಕರಣ ದಾಖಲಾಗಿತ್ತು.
ತದನಂತರ ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ಕೋಟ್ಯಾಂತರ ರೂ. ಮೊತ್ತದ ಹಗರಣ (valmikiss board scam) ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ, ವಿಶೇಷ ತನಿಖಾ ತಂಡ ರಚನೆ ಮಾಡಿತ್ತು.
ಹೈಕೋರ್ಟ್ ಮೊರೆ : ‘ತಮ್ಮ ಪತಿಯ ಮೇಲೆ ಆರೋಪ ಹೊರಿಸಲಾಗುತ್ತಿದೆ. ನಾವು ದುಡ್ಡು ತಿನ್ನುವ ಜನ ಅಲ್ಲ. ಎಸ್ಐಟಿ ತನಿಖೆ ಮೇಲೆ ನಮಗೆ ನಂಬಿಕೆಯಿಲ್ಲ. ಪ್ರಕರಣದ ಕುರಿತಂತೆ ಸಿಬಿಐ ತನಿಖೆ ನಡೆಸುವಂತೆ ಹೈಕೋರ್ಟ್ ಮೊರೆ ಹೋಗಲಾಗುವುದು’ ಎಂದು ಆತ್ಮಹತ್ಯೆಗೆ ಶರಣಾದ ಅಧಿಕಾರಿ ಚಂದ್ರಶೇಖರನ್ ಅವರ ಪತ್ನಿ ಕವಿತಾ (chandrasekharan wife kavitha) ಅವರು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ನಮ್ಮ ಮನೆಯವರು ಗೋವಾಕ್ಕೆ ಹೋಗಿಲ್ಲ. ಯಾವುದೇ ಹಣ ಪಡೆದಿಲ್ಲ. ಚಾರ್ಜ್ ಶೀಟ್ ನಲ್ಲಿ ಅಧಿಕಾರಿಗಳ ಮೇಲೆ ಆರೋಪ ಹೊರಿಸಲಾಗಿದೆ ಎಂದು ದೂರಿದ್ದಾರೆ.
ಸರ್ಕಾರ ಸೂಕ್ತ ನೆರವಿನಹಸ್ತ ಕಲ್ಪಿಸುವುದಾಗಿ ಹೇಳಿತ್ತು. ಆದರೆ ಯಾವುದೇ ನೆರವು ಲಭ್ಯವಾಗಿಲ್ಲ ಎಂದು ಇದೇ ವೇಳೆ ಕವಿತಾ ಅವರು ಅಳಲು ತೋಡಿಕೊಂಡಿದ್ದಾರೆ.
