ಶಿವಮೊಗ್ಗ (shivamogga), ಆ. 22: ಕೂಡಲಿ ಮಠ (kudli math) ದಲ್ಲಿ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಪಾದುಕೆಗಳು ಕಳುವಾಗಿರುವ ಸಂಬಂಧ, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.
ಕೂಡಲಿ ಮಠದ ಸ್ವಾಮೀಜಿಗಳಿಗೆ ಸದರಿ ಪಾದುಕೆಗಳು (golden shoes) ಸೇರಿದ್ದಾಗಿವೆ. ಅತ್ಯಂತ ಪುರಾತನವಾದುವುಗಳಾಗಿವೆ. ಇವುಗಳ ಬಳಕೆ ಮಾಡುತ್ತಿರಲಿಲ್ಲ. ಮಠದಲ್ಲಿ ಸಂರಕ್ಷಣೆ ಮಾಡಿಕೊಂಡು ಬರಲಾಗಿತ್ತು.
ಇತ್ತೀಚೆಗೆ ಪಾದುಕೆಗಳಿಟ್ಟಿದ್ದ ಬೀರುವಿನ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಪಾದುಕೆಗಳು ಇಲ್ಲದಿರುವುದು, ಯಾರೋ ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 19 ರಂದು ಮಠದಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಗೆ (holehonnuru police station) ದೂರು ನೀಡಲಾಗಿದೆ. ಕಳುವಾದ ಪಾದುಕೆಗಳ ತೂಕ ಎಷ್ಟಿದೆ ಎಂಬ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ ಸರಿಸುಮಾರು 50 ರಿಂದ 60 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹೊಳೆಹೊನ್ನೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಬಂಗಾರದ ಪಾದುಕೆಗಳ ಕಳವು ವೃತ್ತಾಂತದ ವಿವರ ತಿಳಿದುಬರಬೇಕಾಗಿದೆ.

