The thief entered Anganwadi and snatched the workers Mangala sutra! ಅಂಗನವಾಡಿಗೆ ನುಗ್ಗಿ ಕಾರ್ಯಕರ್ತೆಯ ಮಾಂಗಲ್ಯ ಸರ ಅಪಹರಿಸಿದ ಕಳ್ಳ!

hosanagara | ಅಂಗನವಾಡಿಗೆ ನುಗ್ಗಿ ಕಾರ್ಯಕರ್ತೆಯ ಮಾಂಗಲ್ಯ ಸರ ಅಪಹರಿಸಿದ ಕಳ್ಳ!

ಹೊಸನಗರ (hosanagara), ಆ. 25: ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಸರಗಳ್ಳನೋರ್ವ (chain snatcher), ಕಾರ್ಯಕರ್ತೆಯ ಮಾಂಗಲ್ಯ ಸರ ಅಪಹರಿಸಿ ಪರಾರಿಯಾದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ (hosanagara) ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬ್ಬೈಲು ಗ್ರಾಮದಲ್ಲಿ ನಡೆದಿದೆ.

ಮಿನಿ ಅಂಗನವಾಡಿ ಕಾರ್ಯಕರ್ತೆ (anganwadi worker) ತಾರಾಮತಿ ಎಂಬುವರೇ ಮಾಂಗಲ್ಯ ಸರ (mangal sutra) ಕಳೆದುಕೊಂಡ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ಕಳುವಾದ ಮಾಂಗಲ್ಯ ಸರ 42 ಗ್ರಾಂ ತೂಕದ್ದಾಗಿದ್ದು, 3.20 ಲಕ್ಷ ರೂ. ಮೌಲ್ಯದ್ದೆಂದು ಅಂದಾಜಿಸಲಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ : ಆ. 22 ರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ನೀಲಿ ಜರ್ಕಿನ್ ಹಾಕಿಕೊಂಡಿದ್ದ ದುಷ್ಕರ್ಮಿ ಅಂಗನವಾಡಿಗೆ (anganwadi) ನುಗ್ಗಿದ್ದಾನೆ. ನಂತರ ಕಾರ್ಯಕರ್ತೆಗೆ ಬೆದರಿಕೆ ಹಾಕಿ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ.

ಹೊಸನಗರ ತಾಲೂಕಿನ (hosanagara taluk) ಹಲವೆಡೆ ಅಂಗನವಾಡಿ ಹಾಗೂ ಮಿನಿ ಅಂಗನವಾಡಿ ಕೇಂದ್ರಗಳು, ಗ್ರಾಮಗಳ ಹೊರವಲಯದ ನಿರ್ಜನ ಪ್ರದೇಶಗಳಲ್ಲಿ ನಡೆಯುತ್ತಿವೆ.

wild elephant attack : Gadag-based agricultural laborer dies - demand for appropriate compensation ಕಾಡಾನೆ ದಾಳಿ : ಗದಗ ಮೂಲದ ಕೃಷಿ ಕೂಲಿ ಕಾರ್ಮಿಕ ಸಾವು – ಸೂಕ್ತ ಪರಿಹಾರಕ್ಕೆ ಆಗ್ರಹ Previous post ಕಾಡಾನೆ ದಾಳಿ : ಗದಗ ಮೂಲದ ಕೃಷಿ ಕೂಲಿ ಕಾರ್ಮಿಕ ಸಾವು – ಸೂಕ್ತ ಪರಿಹಾರಕ್ಕೆ ಆಗ್ರಹ
Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Next post shimoga | ಭಾರೀ ಮಳೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್!