shimoga | ಮಹಾಲಯ ಅಮಾವ್ಯಾಸೆ ಪೂಜೆಗೆ ಆಗಮಿಸಿದ್ದ ಯುವಕ ತುಂಗಭದ್ರಾ ನದಿಯಲ್ಲಿ ನಾಪತ್ತೆ!
ಶಿವಮೊಗ್ಗ (shivamogga), ಅ. 3: ತುಂಗಭದ್ರಾ ನದಿ ಸಂಗಮದಲ್ಲಿ ಸ್ನಾನಕ್ಕೆಂದು ತೆರಳಿದ ಯುವಕನೋರ್ವ, ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಹೊಳೆಹೊನ್ನೂರು ಸಮೀಪದ ಕೂಡ್ಲಿಯಲ್ಲಿ ಅ. 2 ರಂದು ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ನಿವಾಸಿ ಹರ್ಷಿತ್ (23) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಇವರು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಹಾಲಯ ಅಮಾವ್ಯಾಸೆ (mahalaya amavyase) ಹಿನ್ನೆಲೆಯಲ್ಲಿ, ಪಿತೃಪಕ್ಷದ ಪೂಜೆಗೆಂದು ಕುಟುಂಬ ಸದಸ್ಯರೊಂದಿಗೆ ಯುವಕ ಆಗಮಿಸಿದ್ದ. ಪೂಜೆ ಸಲ್ಲಿಸಿದ ನಂತರ ತುಂಗಭದ್ರಾ ನದಿ ಸಂಗಮದಲ್ಲಿ ಸ್ನಾನಕ್ಕೆಂದು ತೆರಳಿದ್ದು, ಈ ವೇಳೆ ಸಂಗಮ ಸ್ಥಳದಲ್ಲಿ ನೀರಿನ ಹರಿವು ಹೆಚ್ಚಿತ್ತು.
ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಕೊಚ್ಚಿ ಹೋಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಹೊಳೆಹೊನ್ನೂರು ಠಾಣೆ ಪೊಲೀಸರು (holehonnuru police station) ಸ್ಥಳಕ್ಕೆ ಭೇಟಿಯಿತ್ತು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಯುವಕನ ಸುಳಿವು ಪತ್ತೆಯಾಗಿಲ್ಲ.
ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಅವರು ಭೇಟಿಯಿತ್ತು ಪರಿಶೀಲಿಸಿದ್ಧಾರೆ. ಇಂದೂ ಕೂಡ ಸಂಗಮ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
The incident took place at Kudli near Holehonur, where a young man went for a bath at the confluence of the Tungabhadra river and drowned in the water. Harshit (23), a resident of Holalkere in Chitradurga district, has been identified as the missing youth.
