Shimoga: Villagers are scared of leopard movement! ಶಿವಮೊಗ್ಗ : ಚಿರತೆ ಸಂಚಾರದಿಂದ ಭಯಭೀತರಾದ ಗ್ರಾಮಸ್ಥರು!

shimoga | ಶಿವಮೊಗ್ಗ : ಚಿರತೆ ಸಂಚಾರ – ಭಯಭೀತರಾದ ಗ್ರಾಮಸ್ಥರು!

ಶಿವಮೊಗ್ಗ (shivamogga), ಅ. 6: ಶಿವಮೊಗ್ಗ ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚರಿಸುತ್ತಿರುವ ಮಾಹಿತಿ ಕೇಳಿಬಂದಿದ್ದು, ಇದು ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

‘ಮೇಯಲು ತೆರಳಿದ್ದ ಆಕಳೊಂದರ ಮೇಲೆ ಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಆಕಳು ತಪ್ಪಿಸಿಕೊಂಡು ಬಂದಿದೆ. ಆಕಳ ಮೈಮೇಲೆ ಪರಚಿದ ಗಾಯಗಳಾಗಿವೆ’ ಎಂದು ಸ್ಥಳೀಯ ನಿವಾಸಿಯೂ ಆದ ಕೋಟೆಗಂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೂದ್ಯನಾಯ್ಕ್ ಅವರು ತಿಳಿಸಿದ್ದಾರೆ.

‘ಗ್ರಾಮದ ಜನವಸತಿ ಪ್ರದೇಶದ ಬಳಿಯೇ ಚಿರತೆ ಸಂಚಾರ ನಡೆಸುತ್ತಿರುವ ಮಾಹಿತಿಗಳಿವೆ. ಕೆಲ ಗ್ರಾಮಸ್ಥರು ಗಮನಿಸಿದ್ದಾರೆ. ಚಿರತೆ ಭೀತಿಯಿಂದ ಹೊಲಗದ್ದೆ, ತೋಟಗಳಿಗೆ ಗ್ರಾಮಸ್ಥರು ಹೋಗಲು ಭಯ ಪಡುವಂತಾಗಿದೆ’ ಎಂದು ಗ್ರಾಮದ ಯುವ ಮುಖಂಡ ಟೀಕ್ಯಾನಾಯ್ಕ್ ಅವರು ಹೇಳಿದ್ದಾರೆ.

ತಕ್ಷಣವೇ ಅರಣ್ಯ ಇಲಾಖೆಯು ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು. ಜನವಸತಿ ಪ್ರದೇಶಕ್ಕೆ ಚಿರತೆ ಆಗಮಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Reports of a leopard roaming in the vicinity of Gejjenahalli village on the outskirts of Shimoga city have caused severe anxiety among the local villagers.

Citizens of Shimoga beware...! Dangerous sale of Chinese garlic : sudden attack by a team of officials!! ಶಿವಮೊಗ್ಗ ನಾಗರೀಕರೇ ಎಚ್ಚರ…! ಅಪಾಯಕಾರಿ ಚೀನಾ ಬೆಳ್ಳುಳ್ಳಿ ಮಾರಾಟ ಶಂಕೆ : ಅಧಿಕಾರಿಗಳ ತಂಡದ ದಿಢೀರ್ ದಾಳಿ!! Previous post shimoga | ಶಿವಮೊಗ್ಗದಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ : ರಾಜ್ಯಾದ್ಯಂತ ಸದ್ದು – ನಾಗರೀಕರಲ್ಲಿ ಭಾರೀ ಸಂಚಲನ!
Hosanagara | SSLC student dies after drowning in water! hosanagara | ನೀರಿನಲ್ಲಿ ಮುಳುಗಿ ಎಸ್ಎಸ್ಎಲ್’ಸಿ ವಿದ್ಯಾರ್ಥಿ ಸಾವು! Next post soraba | ಸೊರಬ : ಕೆರೆಯಲ್ಲಿ ಎತ್ತಿಗೆ ಮೈ ತೊಳೆಯಲು ಹೋದ ಯುವಕ ನೀರುಪಾಲು!