Shimoga : Continued strike of village employees - what will be the government's decision? ಶಿವಮೊಗ್ಗ : ಮುಂದುವರಿದ ಗ್ರಾಪಂ ನೌಕರರ ಮುಷ್ಕರ – ಏನಾಗಲಿದೆ ಸರ್ಕಾರದ ನಿರ್ಧಾರ?

shimoga | ಶಿವಮೊಗ್ಗ : ಮುಂದುವರಿದ ಗ್ರಾಪಂ ನೌಕರರ ಮುಷ್ಕರ – ಏನಾಗಲಿದೆ ಸರ್ಕಾರದ ನಿರ್ಧಾರ?

ಶಿವಮೊಗ್ಗ (shivamogga), ಅ. 10: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯದ ಗ್ರಾಮ ಪಂಚಾಯ್ತಿ ಅಧಿಕಾರಿ ಹಾಗೂ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆದಿದೆ. ಅ. 10 ರ ಗುರುವಾರ 6 ನೇ ದಿನಕ್ಕೆ ಕಾಲಿಟ್ಟಿದೆ.

ಶಿವಮೊಗ್ಗ ಜಿಲ್ಲೆಯಲ್ಲಿಯೂ ಗ್ರಾಪಂ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಶಿವಮೊಗ್ಗ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಕಳೆದ ಸೋಮವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಗ್ರಾಪಂ ಕಚೇರಿಗಳು ಬಾಗಿಲು ಮುಚ್ಚಿವೆ.

ಕುಡಿಯುವ ನೀರು ಪೂರೈಕೆ, ಕಸ ಸಂಗ್ರಹಣೆ ಹೊರತುಪಡಿಸಿ ಗ್ರಾಪಂ ಆಡಳಿತದ ಬಹುತೇಕ ಎಲ್ಲ ಸೇವೆಗಳು ಬಂದ್ ಆಗಿವೆ. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ. ನೌಕರರು ಹಾಗೂ ರಾಜ್ಯ ಸರ್ಕಾರದ ನಡುವಿನ ಹಗ್ಗಜಗ್ಗಾಟದಲ್ಲಿ, ತೊಂದರೆಗೆ ಸಿಲುಕಿ ಬೀಳುವಂತಾಗಿದೆ.

‘ಕಳೆದ ಹಲವು ವರ್ಷಗಳಿಂದ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿಕೊಂಡು ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ’ ಎಂದು ಪ್ರತಿಭಟನಾನಿರತ ನೌಕರರು ಸ್ಪಷ್ಟಪಡಿಸಿದ್ದಾರೆ.

ಚರ್ಚೆ : ಈ ನಡುವೆ ಅ. 10 ರಂದು ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಲು, ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ. ಚರ್ಚೆಗೆ ನೌಕರರ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸಿದೆ. ಸಭೆ ಫಲಪ್ರದವಾಗಲಿದೆಯಾ? ಇಲ್ಲವೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

In Shimoga district also the Gramam staff are involved in the strike. They have been protesting since last Monday in the Zilla Panchayat office premises of Shimoga city. All the village offices in the district have closed their doors.

Spice AirJet has started flights from Shimoga to Chennai and Hyderabad from Thursday. In a ceremony held on Thursday morning at the Shimoga airport premises, MP B. Y. Raghavendra ceremonially launched the flights. On this occasion, airport officials and staff of Spice Air'jet were present. Previous post shimoga | ಶಿವಮೊಗ್ಗದಿಂದ ಚೆನ್ನೈ, ಹೈದ್ರಾಬಾದ್ ಗೆ ವಿಮಾನ ಹಾರಾಟಕ್ಕೆ ಚಾಲನೆ : ದೆಹಲಿ ಸಂಪರ್ಕ ಯಾವಾಗ?
Citizens of Shimoga beware : Increased turbidity in Tunga river water - advice to boil and drink selected water! ಶಿವಮೊಗ್ಗ ನಾಗರಿಕರೇ ಎಚ್ಚರ : ತುಂಗಾ ನದಿ ನೀರಿನಲ್ಲಿ ಹೆಚ್ಚಿದ ಟರ್ಬಿಡಿಟಿ ಪ್ರಮಾಣ - ಕುದಿಸಿ ಆರಿಸಿದ ನೀರು ಕುಡಿಯಲು ಸಲಹೆ! Next post ಶಿವಮೊಗ್ಗ ನಾಗರಿಕರೇ ಎಚ್ಚರ : ತುಂಗಾ ನದಿ ನೀರಿನಲ್ಲಿ ಹೆಚ್ಚಿದ ಟರ್ಬಿಡಿಟಿ ಪ್ರಮಾಣ – ಕುದಿಸಿ, ಆರಿಸಿದ ನೀರು ಕುಡಿಯಲು ಸಲಹೆ!