Citizens of Shimoga beware : Increased turbidity in Tunga river water - advice to boil and drink selected water! ಶಿವಮೊಗ್ಗ ನಾಗರಿಕರೇ ಎಚ್ಚರ : ತುಂಗಾ ನದಿ ನೀರಿನಲ್ಲಿ ಹೆಚ್ಚಿದ ಟರ್ಬಿಡಿಟಿ ಪ್ರಮಾಣ - ಕುದಿಸಿ ಆರಿಸಿದ ನೀರು ಕುಡಿಯಲು ಸಲಹೆ!

ಶಿವಮೊಗ್ಗ ನಾಗರಿಕರೇ ಎಚ್ಚರ : ತುಂಗಾ ನದಿ ನೀರಿನಲ್ಲಿ ಹೆಚ್ಚಿದ ಟರ್ಬಿಡಿಟಿ ಪ್ರಮಾಣ – ಕುದಿಸಿ, ಆರಿಸಿದ ನೀರು ಕುಡಿಯಲು ಸಲಹೆ!

ಶಿವಮೊಗ್ಗ, ಅ. 19: ‘ಶಿವಮೊಗ್ಗ ನಗರದ ನಾಗರಿಕರೇ ಗಮನಿಸಿ… ಸದ್ಯ ತುಂಗಾ ಜಲಾಶಯದಿಂದ ಪೂರೈಕೆಯಾಗುತ್ತಿರುವ ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ನೀರನ್ನು ಕುದಿಸಿ, ಆರಿಸಿ ಕುಡಿಯುವುದು ಉತ್ತಮ..!’

ಹೌದು. ಈ ಕುರಿತಂತೆ ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆ ಮಾಡುತ್ತಿರುವ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೇ ಪ್ರಕಟಣೆ ಹೊರಡಿಸಿದೆ.

ಸಲಹೆಯೇನು? :  ಅ. 10 ರಂದು ಮಂಡಳಿ ಬಿಡುಗಡೆ ಮಾಡಿರುವ ಪ್ರಕಟಣೆಯ ವಿವರ ಇಂತಿದೆ. ‘ಕಳೆದ ಅಕ್ಟೋಬರ್ 8 ರಂದು ಬಿದ್ದ ಭಾರೀ ಮಳೆಯಿಂದ ಗಾಜನೂರು ತುಂಗಾ ಜಲಾಶಯ ಹಾಗೂ ತುಂಗಾ ನದಿ ನೀರಿನಲ್ಲಿ ಕೆಂಪು ಬಣ್ಣ ಹೆಚ್ಚಾಗಿದೆ. ಟರ್ಬಿಡಿಟಿ ಪ್ರಮಾಣ ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಪೂರೈಕೆಯಾಗುವ ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ’ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಎಷ್ಟಿರಬೇಕು?: ಕುಡಿಯಲು ಯೋಗ್ಯವಾದ ನೀರಿನಲ್ಲಿನ ಟರ್ಬಿಡಿಟಿ ಪ್ರಮಾಣ 1ಎನ್.ಟಿ.ಯು ಇರಬೇಕು. ಆದರೆ ಪ್ರಸ್ತುತ ತುಂಗಾ ನದಿ ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ 5 ಎನ್.ಟಿ.ಯು ಇದೆ ಹೇಳಲಾಗುತ್ತಿದೆ.

Citizens of Shivamogga city please note… The turbidity level of the water being supplied from the Tunga reservoir has increased. In this background, it is better to boil water and drink it in the interest of health..!’ Yes. In this regard, the Karnataka City Water Supply and Sewerage Board, which is managing the Shimoga city water supply system, has issued an announcement.

Shimoga : Continued strike of village employees - what will be the government's decision? ಶಿವಮೊಗ್ಗ : ಮುಂದುವರಿದ ಗ್ರಾಪಂ ನೌಕರರ ಮುಷ್ಕರ – ಏನಾಗಲಿದೆ ಸರ್ಕಾರದ ನಿರ್ಧಾರ? Previous post shimoga | ಶಿವಮೊಗ್ಗ : ಮುಂದುವರಿದ ಗ್ರಾಪಂ ನೌಕರರ ಮುಷ್ಕರ – ಏನಾಗಲಿದೆ ಸರ್ಕಾರದ ನಿರ್ಧಾರ?
shimoga | Shimoga: The dead body of the bike rider who was washed away in the water was found! ಶಿವಮೊಗ್ಗ : ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನ ಮೃತದೇಹ ಪತ್ತೆ! Next post shimoga | ಶಿವಮೊಗ್ಗ : ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನ ಮೃತದೇಹ ಪತ್ತೆ!