thirthahalli | ತೀರ್ಥಹಳ್ಳಿ : ಪ್ರವಾಸಿ ಬಸ್, ಬೈಕ್ ನಡುವೆ ಅಪಘಾತ – ವಿದ್ಯಾರ್ಥಿ ಸಾವು!
ತೀರ್ಥಹಳ್ಳಿ (thirthahalli), ಅ. 18: ಖಾಸಗಿ ಪ್ರವಾಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರ ಮೃತಪಟ್ಟ ಘಟನೆ ಅ. 18 ರ ಶುಕ್ರವಾರ ಬೆಳಿಗ್ಗೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೆಜ್ಜವಳ್ಳಿ ಸಮೀಪದ ತನಿಕಲ್ ಕೌಟ್ ಮನೆ ನಿವಾಸಿ ಪ್ರಥಮ್ (16) ವರ್ಷ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಡಿಪ್ಲೊಮಾ ಅಭ್ಯಾಸ ಮಾಡುತ್ತಿರುವ ಪ್ರಥಮ್, ಬೆಳಿಗ್ಗೆ ಬೈಕ್ ನಲ್ಲಿ ಕಾಲೇಜ್ ಗೆ ತೆರಳುತ್ತಿದ್ದಾಗ ಸದರಿ ಅವಘಡ ಸಂಭವಿಸಿದೆ.
ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಥಮ್ ಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್’ಲಾಕ್ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾನೆ.
ಬಸ್ ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿತ್ತು. ಬೈಕ್ ಸವಾರ ಅಡ್ಡ ರಸ್ತೆಯಿಂದ ಮುಖ್ಯ ರಸ್ತೆಗೆ ಆಗಮಿಸಿದಾಗ ಬಸ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಕುಮಾರ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Accident between private tourist bus and bike near Bejjuvalli in thirthahalli : student dies! — In an accident between a private tourist bus and a bike, the bike rider died on the national highway near Bejjavalli circle in Tirthahalli taluk on Friday morning.
