shimoga | ಶಿವಮೊಗ್ಗ ತಾಲೂಕಿನಲ್ಲಿ ಭಾರೀ ಮಳೆಯಿಂದ ಹಾನಿಗೀಡಾದ ಮನೆಗಳ ಸಂಖ್ಯೆಯೆಷ್ಟು?
ಶಿವಮೊಗ್ಗ (shivamogga), ಅ. 21: ಇತ್ತೀಚೆಗೆ ಶಿವಮೊಗ್ಗ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಬಿದ್ದ ಭಾರೀ ಮಳೆಯಿಂದ, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾದ ಮಾಹಿತಿಗಳು ಬಂದಿವೆ.
ಧಾರಾಕಾರ ಮಳೆಗೆ, ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಸಾಕಷ್ಟು ಸಂಖ್ಯೆಯ ಮನೆಗಳಿಗೆ ಹಾನಿಯಾದ ಪ್ರಕರಣಗಳು ವರದಿಯಾಗುತ್ತಿವೆ. ಕೆಲವೆಡೆ ಸಂಪೂರ್ಣ ಮನೆಗಳು ಕುಸಿದು ಬಿದ್ದಿದ್ದರೆ, ಇನ್ನೂ ಹಲವೆಡೆ ಭಾಗಶಃ ಹಾನಿಗೀಡಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ.
‘ಪ್ರಾಥಮಿಕ ಹಂತದ ಮಾಹಿತಿ ಅನುಸಾರ, ಇತ್ತೀಚೆಗೆ ಬಿದ್ದ ಭಾರೀ ಮಳೆಯ ವೇಳೆ ತಾಲೂಕಿನಲ್ಲಿ 36 ಮನೆಗಳಿಗೆ ಹಾನಿಯಾಗಿದೆ. ಸುಮಾರು 125 ಮನೆಗಳು ಜಲಾವೃತವಾಗಿದ್ದ ವಿವರ ಲಭ್ಯವಾಗಿದೆ. ಮಾಹಿತಿ ಸಂಗ್ರಹ ಕಾರ್ಯ ಮುಂದುವರಿದಿದೆ’ ಎಂದು ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಗ್ರೇಡ್ – 2 ತಹಶೀಲ್ದಾರ್ ಪರಶುರಾಮ್ ಕೆ ಅವರು ಮಾಹಿತಿ ನೀಡಿದ್ದಾರೆ.
ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಭಾರೀ ಮಳೆಯಿಂದ ಹಾನಿಗೀಡಾದ ಬೆಳೆಗಳ ವಿವರ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ರೆವಿನ್ಯೂ ಇನ್ಸ್’ಪೆಕ್ಟರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತಗ್ಗಿದ ಅಬ್ಬರ : ಕಳೆದ ಕೆಲ ದಿನಗಳಿಂದ ಶಿವಮೊಗ್ಗ ತಾಲೂಕಿನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವರ್ಷಧಾರೆಯು, ಕಳೆದೆರೆಡು ದಿನಗಳಿಂದ ಕಡಿಮೆಯಾಗಿದೆ. ಇದರಿಂದ ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ವಿವಿಧೆಡೆಯ ಜನವಸತಿ ಪ್ರದೇಶಗಳಲ್ಲಿ ಕಂಡುಬಂದಿದ್ದ ಜಲಾವೃತ ಸ್ಥಿತಿ ಸಂಪೂರ್ಣ ಇಳಿಕೆಯಾಗಿದೆ. ಸಹಜ ಸ್ಥಿತಿಗೆ ಮರಳಿದೆ.
ಉಳಿದಂತೆ ತಾಲೂಕಿನ ಹಲವೆಡೆ ಕೆರೆಕಟ್ಟೆಗಳು ಮತ್ತೆ ಕೋಡಿ ಬಿದ್ದು ಹರಿಯುತ್ತಿವೆ. ಉಳಿದಂತೆ ಭಾರೀ ಮಳೆಯಿಂದ, ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಮತ್ತೀತರ ಬೆಳೆಗಳು ಹಾನಿಗೀಡಾಗಿವೆ ಎಂದು ರೈತರು ತಿಳಿಸುತ್ತಾರೆ.
Recently, there have been reports of damage to a large amount of public property due to heavy rains in Shimoga city and taluk. Due to torrential rain, cases of damage to many houses are being reported in many parts of Shimoga city and taluk. In some places, entire houses have collapsed, while in others, they have been partially damaged. The walls are cracked.
