
bhadravati news | ಭದ್ರಾವತಿ : ನಾಲೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ!
ಶಿವಮೊಗ್ಗ. ಅ. 22: ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಣಕಟ್ಟೆ ಚಾನಲ್‌ನಲ್ಲಿ, ಅನಾಮಧೇಯ ಮಹಿಳೆಯ ಶವ ಪತ್ತೆಯಾದ ಘಟನೆ ನಡೆದಿದೆ.
ಮೃತ ಮಹಿಳೆಗೆ ಸರಿಸುಮಾರು 70 ವರ್ಷ ವಯಸ್ಸಿದ್ದು ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ಪತ್ತೆಯಾಗಿಲ್ಲ. ಶವವನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ಮಂಗಳವಾರ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಚಹರೆ : 4.10 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಶವವು ಕೊಳೆತ ಸ್ಥಿತಿಯಲ್ಲಿದೆ. ಮೈಮೇಲೆ ಹಳದಿ ಬಣ್ಣದ ಲಂಗ, ಹಸಿರು ಬಣ್ಣದ ರವಿಕೆ, ಸೊಂಟಕ್ಕೆ ಗ್ರೇ ಕಲರ್ ಬೆಲ್ಟ್ ಧರಿಸಿರುತ್ತಾರೆ.
ಮಹಿಳೆಯ ವಾರಸುದಾರರು ಪತ್ತೆಯಾದಲ್ಲಿ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
An incident has taken place where the dead body of an anonymous woman was found in the Bhadravati Kanakette channel. The deceased woman is approximately 70 years old and no details including name and address have been found. A press release issued by the police department on Tuesday informed that the body has been kept at Bhadravati Government Hospital mortuary.