Former Prime Minister passed away: Kuvempu University exam postponed! ಮಾಜಿ ಪ್ರಧಾನಿ ನಿಧನ : ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ!

kuvempu university | ಕುವೆಂಪು ವಿವಿ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶ ಅವಧಿ ವಿಸ್ತರಣೆ

ಶಿವಮೊಗ್ಗ (shivamogga), ಅ. 23 : ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಲಿನ ಸ್ನಾತಕೊತ್ತರ ಪದವಿ / ಸ್ನಾತಕೊತ್ತರ ಡಿಪ್ಲೋಮಾ / ಸರ್ಟಿಫಿಕೇಟ್ ಕೋರ್ಸ್ ಗಳ ಪ್ರವೇಶಾತಿ ಪ್ರಕ್ರಿಯೆ ವಿಸ್ತರಿಸಲಾಗಿದೆ.

ಯು.ಯು.ಸಿ.ಎಂ.ಎಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅ. 30 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ ನವೆಂಬರ್ 05 ರವರೆಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿದಾರರು ನ.06 ರ ಒಳಗೆ ಹಾರ್ಡ್ ಕಾಪಿಯನ್ನು ಸಂಬಂಧಪಟ್ಟ ವಿಭಾಗಕ್ಕೆ ಕಡ್ಡಾಯವಾಗಿ ನೀಡಬೇಕು. ಅರ್ಜಿ ಶುಲ್ಕ ಸಾಮಾನ್ಯ ಮತ್ತು ಓ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ರೂ.350 ಹಾಗೂ ಎಸ್.ಸಿ/ಎಸ್.ಟಿ/ ಪ್ರವರ್ಗ-01ರ ವಿದ್ಯಾರ್ಥಿಗಳಿಗೆ ರೂ.175 ನಿಗದಿಪಡಿಸಲಾಗಿದೆ.

ಹಣವನ್ನು ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ ಪದನಾಮದಲ್ಲಿ ಚಲನ್ ಮೂಲಕ ಖಾತೆ ಸಂಖ್ಯೆ 54023036291 ಐಎಫ್‌ಎಸ್‌ಸಿ ಕೋಡ್ SBIN0040759 ಗೆ ಜಮಾ ಮಾಡಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kuvempu University has extended the admission process for Post Graduate Degree / Post Graduate Diploma / Certificate Courses.

Shimoga: In which areas will there be no electricity on January 31? shimoga | ಶಿವಮೊಗ್ಗ : ಯಾವೆಲ್ಲ ಏರಿಯಾಗಳಲ್ಲಿ ಜ. 31 ರಂದು ವಿದ್ಯುತ್ ಇರಲ್ಲ? Previous post shimoga power cut news | ಶಿವಮೊಗ್ಗ : ಅ.25 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shivamogga: Worker dies of electrocution in Holalur arecanut plantation! ಶಿವಮೊಗ್ಗ : ಹೊಳಲೂರು ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು! Next post shimoga | ಶಿವಮೊಗ್ಗ : ಸಾಲುಸಾಲು ಭಿಕ್ಷುಕ, ನಿರ್ಗತಿಕ ವ್ಯಕ್ತಿಗಳ ಸಾವು ! – ಕಣ್ಮುಚ್ಚಿ ಕುಳಿತಿದೆಯೇ ಆಡಳಿತ ವ್ಯವಸ್ಥೆ?