Devil attack news near Kargal is a fabrication! : Shimoga Police Department appeals not to believe rumours ಕಾರ್ಗಲ್ ಸಮೀಪ ದೆವ್ವದ ದಾಳಿ ಸುದ್ದಿ ಕಟ್ಟುಕಥೆ : ವದಂತಿ ನಂಬದಂತೆ ಶಿವಮೊಗ್ಗ ಪೊಲೀಸ್ ಇಲಾಖೆ ಮನವಿ

ಕಾರ್ಗಲ್ ಸಮೀಪ ದೆವ್ವದ ದಾಳಿ ಸುದ್ಧಿ ಕಟ್ಟುಕಥೆ! : ವದಂತಿ ನಂಬದಂತೆ ಶಿವಮೊಗ್ಗ ಪೊಲೀಸ್ ಇಲಾಖೆ ಮನವಿ

ಶಿವಮೊಗ್ಗ (shivamogga), ಅ. 29: ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಸಮೀಪ ಇತ್ತೀಚೆಗೆ ದೆವ್ವವೊಂದು, ಬೈಕ್ ಸವಾರರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಎಂಬ ಕಿಡಿಗೇಡಿಗಳು ಸೃಷ್ಟಿಸಿದ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ನಡುವೆ ಸದರಿ ಸುದ್ದಿಯ ಕುರಿತಂತೆ ಅ. 29 ರಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ‘ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಸಾರ್ವಜನಿಕರು ಭಯಪಡುವ ಅವಶ್ಯಕತೆಯಿರುವುದಿಲ್ಲ. ಈ ರೀತಿಯ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿರುವುದಿಲ್ಲ’ ಎಂದು ತಿಳಿಸಿದೆ.

‘ಕಾರ್ಗಲ್ ಸಮೀಪ ಕಂಚಿಕೈ ರಸ್ತೆಯಲ್ಲಿ ಎರಡು ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿದೆ. ಓರ್ವರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಗೂ ಮತ್ತೋರ್ವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಪೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿರುತ್ತದೆ.

ಸಾರ್ವಜನಿಕರು ಭಯಪಡುವ ಅವಶ್ಯಕತೆಯಿರುವುದಿಲ್ಲ. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವರ್ಡ್ , ಶೇರ್ ಮಾಡುವುದು ಕಾನೂನು ರೀತ್ಯ ಅಪರಾಧವಾಗಿರುತ್ತದೆ. ಇಂತಹವರ ವಿರುದ್ದ ಕಾನೂನು ರೀತ್ಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Recently, a fake news created by miscreants that a demon attacked and injured bikers near Kargal in Sagar taluk of Shimoga district went viral on social media. Meanwhile, the police department clarified the news on October. This is completely fake news. The public need not fear. No such cases have come to light.

Death of beggars and anonymous persons in a row: Bengaluru Social Welfare Department official who arrived in Shimoga and collected information! ಸಾಲುಸಾಲು ಭಿಕ್ಷುಕರು, ಅನಾಮಧೇಯ ವ್ಯಕ್ತಿಗಳ ಸಾವು ಪ್ರಕರಣ : ಶಿವಮೊಗ್ಗಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ! ವರದಿ : ಬಿ. ರೇಣುಕೇಶ್ b renukesha Previous post ಸಾಲುಸಾಲು ಭಿಕ್ಷುಕರು, ಅನಾಮಧೇಯ ವ್ಯಕ್ತಿಗಳ ಸಾವು ಪ್ರಕರಣ : ಶಿವಮೊಗ್ಗಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ!
Re-investigation of Dharmasthala sowjanya case: What did CM Siddaramaiah say? ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? Next post bengaluru | ‘ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ’ : CM ಸಿದ್ದರಾಮಯ್ಯ