Shimoga: A multi-storied parking building built at a cost of crores of rupees is not open for public use! ಶಿವಮೊಗ್ಗ : ಸಾರ್ವಜನಿಕ ಬಳಕೆ ಮುಕ್ತಗೊಳ್ಳದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಹುಮಹಡಿ ಪಾರ್ಕಿಂಗ್ ಕಟ್ಟಡ!

shimoga | ಶಿವಮೊಗ್ಗ : ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಹುಮಹಡಿ ಪಾರ್ಕಿಂಗ್ ಕಟ್ಟಡ!

ಶಿವಮೊಗ್ಗ (shivamogga), ನ. 15: ಶಿವಮೊಗ್ಗ ನಗರದ ಹೃದಯ ಭಾಗವಾದ ಹೂವಿನ ಮಾರುಕಟ್ಟೆ ಬಳಿ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ, ಬಹುಮಹಡಿ ಪಾರ್ಕಿಂಗ್ ಕಟ್ಟಡ ಉದ್ಘಾಟನೆಗೊಂಡು ವರ್ಷವಾಗುತ್ತಾ ಬಂದರೂ ಇಲ್ಲಿಯವರೆಗೂ ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿಲ್ಲ!

ಕೋಟ್ಯಾಂತರ ರೂ. ವೆಚ್ಚ : ಶಿವಮೊಗ್ಗ ನಗರದಲ್ಲಿ ವರ್ಷದಿಂದ ವರ್ಷಕ್ಕೆ, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಉಲ್ಬಣಿಸುತ್ತಿದೆ. ಕೆಲ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಾರಣದಿಂದಲೇ, ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ.

ಈ ಕಾರಣದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ, 25 ಕೋಟಿ ರೂ. ವೆಚ್ಚದಲ್ಲಿ ಮೂರು ಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಸದರಿ ಕಟ್ಟಡದಲ್ಲಿ 172 ಕಾರುಗಳು ಹಾಗೂ 78 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಹಾಗೆಯೇ ನೆಲ ಮಹಡಿಯಲ್ಲಿ 118 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಹೂವು, ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಲಿಫ್ಟ್ ವ್ಯವಸ್ಥೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಬಳಕೆಗಿಲ್ಲ : ಮಳಿಗೆಗಳಿಗೆ ಬಾಡಿಗೆ ದರ ನಿಗದಿಗೊಳಿಸಿ, ವ್ಯಾಪಾರಿಗಳಿಗೆ ಹಂಚಿಕೆ ಮಾಡಬೇಕಾಗಿದೆ. ಉಳಿದಂತೆ ವಾಹನಗಳ ನಿಲುಗಡೆಗೆ ಟೆಂಡರ್ ಆಹ್ವಾನಿಸಿ, ಅರ್ಹ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸಬೇಕಾಗಿದೆ. ಆದರೆ ಇಲ್ಲಿಯವರೆಗೂ ಇವ್ಯಾವ ಕೆಲಸಗಳು ಆಗಿಲ್ಲವಾಗಿದೆ. ಇದರಿಂದ ಪ್ರತಿ ತಿಂಗಳು ಕಟ್ಟಡದಿಂದ ಬರಬಹುದಾಗಿದ್ದ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತಿದೆ!

ಅವ್ಯವಸ್ಥೆ : ಶಿವಮೊಗ್ಗ ನಗರದ ಹಲವೆಡೆ ವಾಹನಗಳ ನಿಲುಗಡೆ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿ ಪರಿಣಮಿಸುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲದೆ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸುಗಮ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಮತ್ತೊಂದೆಡೆ, ಕನ್ಸರ್’ವೆನ್ಸಿಗಳಲ್ಲಿ ವಾಹನಗಳ ನಿಲುಗಡೆ ಮಾಡುವ ಯೋಜನೆಯನ್ನೇ ಪಾಲಿಕೆ ಆಡಳಿತ ಮರೆತಿದೆ! ನಗರದ ಹಲವೆಡೆ ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗಿದ್ದ ಕನ್ಸರ್’ವೆನ್ಸಿಗಳು ಪಾಳು ಬೀಳುತ್ತಿರುವುದು, ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಎಚ್ಚೆತ್ತುಕೊಳ್ಳಲಿ : ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು, ಈಗಾಗಲೇ ಸ್ಮಾರ್ಟ್ ಸಿಟಿ ಆಡಳಿತವು ಮಹಾನಗರ ಪಾಲಿಕೆ ಆಡಳಿತಕ್ಕೆ ಹಸ್ತಾಂತರಿಸಿದೆ. ಇನ್ನಾದರೂ ಪಾಲಿಕೆ ಆಡಳಿತ, ಕಾಲಮಿತಿಯೊಳಗೆ ಸಾರ್ವಜನಿಕ ಬಳಕೆಗೆ ಕಟ್ಟಡ ಮುಕ್ತಗೊಳಿಸುವ ಕಾರ್ಯ ಮಾಡಲಿದೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

The multi-storied parking building built at a cost of crores of rupees near the flower market, the heart of Shimoga city, has been inaugurated for years but has not been opened for public use till now!

Political shadow on government employees union elections: Shimoga Tehsildar suddenly transferred! ಸರ್ಕಾರಿ ನೌಕರರ ಸಂಘದ ಚುನಾವಣೆ ಮೇಲೆ ರಾಜಕೀಯ ಕರಿನೆರಳು : ಶಿವಮೊಗ್ಗ ತಹಶೀಲ್ದಾರ್ ದಿಢೀರ್ ಎತ್ತಂಗಡಿ! Previous post shimoga | ಸರ್ಕಾರಿ ನೌಕರರ ಸಂಘದ ಚುನಾವಣೆ ಮೇಲೆ ರಾಜಕೀಯ ಕರಿನೆರಳು : ಶಿವಮೊಗ್ಗ ತಹಶೀಲ್ದಾರ್ ದಿಢೀರ್ ಎತ್ತಂಗಡಿ!
Shimoga: FIR against K.S.Eshwarappa under non-bailable section – possibility of arrest? ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧ ಜಾಮೀನುರಹಿತ ಕಲಂಗಳಡಿ ಎಫ್ಐಆರ್ – ಬಂಧನ ಸಾಧ್ಯತೆ? Next post shimoga | ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧ ಜಾಮೀನುರಹಿತ ಕಲಂಗಳಡಿ FIR – ಬಂಧನ ಸಾಧ್ಯತೆ?