
shimoga | ಶಿವಮೊಗ್ಗ : ಅಡಕೆ ಕಳ್ಳತನ ಪ್ರಕರಣ – ಐವರ ಬಂಧನ!
ಶಿವಮೊಗ್ಗ (shivamogga), ನ. 17: ಅಡಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ವಿವಿಧೆಡೆ ಕಳವು ಮಾಡಿದ್ದ ಲಕ್ಷಾಂತರ ರೂ. ಮೌಲ್ಯದ ಅಡಕೆ ವಶಕ್ಕೆ ಪಡೆದ ಘಟನೆ ನಡೆದಿದೆ.
ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆ ನಿವಾಸಿ ಅನಿಲ್ ಆರ್ ಯಾನೆ ಜಾಕ್ (26), ಭದ್ರಾವತಿ ವಿಠಲಾಪುರ ಲೋಕೇಶ್ ಯಾನೆ ವಿಜಯ್ (27), ಶಿವಮೊಗ್ಗ ಬಸವನಗುಡಿ ಬಡಾವಣೆಯ ಮನೋಜ ಯಾನೆ ಮುರುಗೋಡು (20),
ಹಾಡೋನಹಳ್ಳಿ ಗ್ರಾಮದ ನವೀನ್ ಪಿ ಯಾನೆ ನುಗ್ಗೆ (23) ಹಾಗೂ ಮಡಕೆ ಚೀಲೂರು ಗ್ರಾಮದ ನಿವಾಸಿ ಚಂದು ಎಸ್ ಯಾನೆ ಸುಣ್ಣ (20) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ, 3 ಅಡಕೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. 7. 35 ಲಕ್ಷ ರೂ. ಮೌಲ್ಯದ 15 ಕ್ವಿಂಟಾಲ್ 8 ಕೆಜಿ ತೂಕದ ಒಣ ಅಡಕೆ, 1.40 ಲಕ್ಷ ರೂ. ಮೌಲ್ಯದ 2 ಬೈಕ್, 1. 40 ಲಕ್ಷ ರೂ. ಮೌಲ್ಯದ ಪ್ಯಾಸೆಂಜರ್ ಆಟೋ ವಶಕ್ಕೆ ಪಡೆಯಲಾಗಿದೆ.
ಇನ್ಸ್’ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಸ್ವಪ್ನ, ಎಂ ಜಿ ವಗ್ಗಣ್ಣನವರ್, ಸಿಬ್ಬಂದಿಗಳಾದ ಹೆಚ್ ಸಿ ವೆಂಕಟೇಶ್, ಗಣೇಶ್, ಕಾಶೀನಾಥ್, ಶ್ರೀಕಾಂತ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
In connection with the case of arecanut theft, Shimoga rural police arrested five accused and seized arecanut worth lakhs of rupees which had been stolen from different places.