
bhadravati | ಭದ್ರಾವತಿ : ಹೆಚ್ಚಾಗುತ್ತಿರುವ ದರೋಡೆ ಪ್ರಕರಣಗಳು – ಗಮನಹರಿಸುವರೆ ಪೊಲೀಸರು?
ಭದ್ರಾವತಿ (bhadravati), ನ. 18: ಇತ್ತೀಚೆಗೆ ಭದ್ರಾವತಿಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯೂ ಟೌನ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ದುಷ್ಕರ್ಮಿಗಳ ತಂಡಗಳು ನಾಗರೀಕರನ್ನು ಬೆದರಿಸಿ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿದೆ.
ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿ ಬಿ ಹೆಚ್ ರಸ್ತೆಯ ಭೈರವೇಶ್ವರ ಕಮ್ಯೂನಿಕೇಷನ್ ಬಳಿ, ರಾತ್ರಿ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಮೂವರು ದುಷ್ಕರ್ಮಿಗಳು, ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಕಡದಕಟ್ಟೆ ಬಡಾವಣೆ ನಿವಾಸಿ ವೆಂಕಟೇಶ್ ಎಂಬುವರೆ ಚಿನ್ನದ ಸರ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಅಂದಾಜು 1. 75 ಲಕ್ಷ ರೂ. ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ತಡಸ ಗ್ರಾಮದ ಬಳಿ ಬೈಕ್ ಸವಾರನೋರ್ವನನ್ನು ಅಡ್ಡಗಟ್ಟಿ ಹಾಕಿದ ದುಷ್ಕರ್ಮಿಗಳು, ಚಾಕುವಿನಿಂದ ಬೆದರಿಕೆ ಹಾಕಿ 2 ಸಾವಿರ ನಗದು ಅಪಹರಿಸಿ ಪರಾರಿಯಾದ ಘಟನೆ ನಡೆದಿದೆ.
ಪದ್ಮೇನಹಳ್ಳಿ ಗ್ರಾಮದ ನಿವಾಸಿ ರಾಕೇಶ್ ಎಂಬುವರೆ ದರೋಡೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ, ರಸ್ತೆಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ.
Recently robbery cases are increasing in Bhadravati. In two separate incidents that took place in New Town and Rural Police Station areas, gangs of miscreants threatened citizens and ran away with cash.