ಪರಿಹಾರವಾಗದ ಇ – ಆಸ್ತಿ ಗೊಂದಲ : ಗಮನಹರಿಸುವರೆ ಸಿಎಂ ಸಿದ್ದರಾಮಯ್ಯ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನ. 27: ನಗರ – ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ, ಸ್ಥಿರಾಸ್ತಿ ದಸ್ತಾವೇಜು ನೊಂದಣಿಗೆ ಇ – ಆಸ್ತಿ ತಂತ್ರಾಂಶದಿಂದ ಪಡೆದ ಇ – ಆಸ್ತಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ಇ – ಆಸ್ತಿ ಮಾಡಿಸಲು ನಾಗರೀಕರು ಸ್ಥಳೀಯ ಸಂಸ್ಥೆಗಳಿಗೆ ಎಡತಾಕುತ್ತಿದ್ದಾರೆ!
ಆದರೆ ಆಡಳಿತ ಯಂತ್ರದ ಇಚ್ಛಾಶಕ್ತಿಯ ಕೊರತೆಯಿಂದ, ಇ – ಆಸ್ತಿ ವ್ಯವಸ್ಥೆ ಹಲವೆಡೆ ನಾಗರೀಕರಿಗೆ ಹೊರೆಯಾಗಿ ಪರಿಣಮಿಸಿದೆ. ಇ – ಆಸ್ತಿ ಮಾಡಿಸಲು ಹರಸಾಹಸ ಪಡುವಂತಾಗಿದೆ. ಶಿವಮೊಗ್ಗ ಪಾಲಿಕೆಯಲ್ಲಿನ ಸದ್ಯದ ಸ್ಥಿತಿ ಇದಕ್ಕೆ ಸಾಕ್ಷಿಯಾಗಿದೆ.
ಪಾಲಿಕೆಯಲ್ಲಿ ಇ – ಆಸ್ತಿ ಮಾಡಿಸಲು ನಾನಾ ರೀತಿಯ ಅಡೆತಡೆಗಳು ಉದ್ಭವವಾಗಿದೆ. ಸೂಕ್ತ ಮಾಹಿತಿಯಿಲ್ಲದೆ ನಾಗರೀಕರು ದಿನನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಸಿಗುತ್ತಿಲ್ಲ ಇ – ಖಾತಾ : ಶಿವಮೊಗ್ಗ ನಗರದ ಕೆಲ ವಾರ್ಡ್ ಗಳಿಗೆ ಸಂಬಂಧಿಸಿದ ಸ್ಥಿರಾಸ್ತಿಗಳಿಗೆ, ಸೂಕ್ತ ದಾಖಲೆಗಳಿದ್ದ ಹೊರತಾಗಿಯೂ, ಇ – ಆಸ್ತಿ ಮಾಡಿಕೊಡಲಾಗುತ್ತಿಲ್ಲ. ಸ್ಥಿರಾಸ್ತಿಯ ಐದಾರು ದಶಕಗಳ ಹಿಂದಿನ ಕಾನೂನುಬದ್ಧ ಖರೀದಿ ಪತ್ರ, ಮೂಲ ದಾಖಲೆಗಳನ್ನು ಹಾಜರುಪಡಿಸಿದ ಹೊರತಾಗಿಯೂ ಇ – ಆಸ್ತಿ ಮಾಡಿಕೊಡಲು ಸತಾಯಿಸಲಾಗುತ್ತಿದೆ.
ಸರ್ಕಾರದ ಆದೇಶ ಮುಂದಿಟ್ಟುಕೊಂಡು, ಸಬೂಬು ಹೇಳುತ್ತಿರುವ ದೂರುಗಳು ಕೇಳಿಬರುತ್ತಿವೆ. ಜಿಲ್ಲೆಯ ಇತರೆ ನಗರ – ಪಟ್ಟಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ, ಇ – ಆಸ್ತಿಗೆ ಸಂಬಂಧಿಸಿದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿಯೇ ಭಾರೀ ದೊಡ್ಡ ಪ್ರಮಾಣದ ಗೊಂದಲ – ಗಡಿಬಿಡಿ ಕಂಡುಬರುತ್ತಿದೆ ಎಂದು ನಾಗರೀಕರು ಆರೋಪಿಸುತ್ತಾರೆ.
ಮತ್ತೊಂದೆಡೆ, ಪಾಲಿಕೆ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಇ – ಆಸ್ತಿ ಕುರಿತಂತೆ ಏರ್ಪಟ್ಟಿರುವ ಗೊಂದಲಗಳ ಬಗ್ಗೆ ಚರ್ಚಿಸಿ ನಾಗರೀಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸುತ್ತಿಲ್ಲ. ಇದರಿಂದ ದಿನದಿಂದ ದಿನಕ್ಕೆ ಇ – ಆಸ್ತಿ ಗೊಂದಲ ಹೆಮ್ಮರವಾಗಿ ಬೆಳೆಯುತ್ತಿದೆ.
ಗಮನಹರಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಕಾಲಮಿತಿಯೊಳಗೆ ಇ – ಆಸ್ತಿ ಗೊಂದಲ ಪರಿಹಾರಕ್ಕೆ ಸಂಬಂಧಿಸಿದಂತೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಬೇಕಾಗಿದೆ. ಈ ಮೂಲಕ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸುತ್ತಾರೆ.
ಏನೀದು ? : ರಾಜ್ಯದ ಎಲ್ಲ ನಗರ – ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ, ಇ-ಆಸ್ತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಅದರಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು, ಕಳೆದ ಅಕ್ಟೋಬರ್ 7 ರಿಂದ ಇ – ಆಸ್ತಿ ವ್ಯವಸ್ಥೆ ಅಳವಡಿಸಿಕೊಂಡಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ, ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ, ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿ ನೊಂದಣಿಗೆ ಪಾಲಿಕೆಯ ಇ – ಆಸ್ತಿ ಹೊಂದಿರುವುದು ಕಡ್ಡಾಯವಾಗಿದೆ.
In city-town area, registration of immovable property documents through e-property software is mandatory. Because of this, citizens are asking local organizations to make e-property! But due to lack of will of the administrative machinery, the e-property system has become a burden to citizens in many places. E – There is a struggle to make property. The current situation in Shimoga Corporation is a proof of this.
