shimoga | Shimoga: Clean drinking water plant mess in Kunsi village - Is the administration turning a blind eye? ಶಿವಮೊಗ್ಗ : ಕುಂಸಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ - ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?

shimoga | ಶಿವಮೊಗ್ಗ : ಕುಂಸಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ – ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?

ಶಿವಮೊಗ್ಗ (shivamogga), ನ. 28: ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ, ಕಳೆದ ಏಳೆಂಟು ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಬಹುತೇಕ ಗ್ರಾಮಸ್ಥರು ಸದರಿ ಘಟಕದಲ್ಲಿ ಲಭ್ಯವಾಗುವ ನೀರನ್ನೇ ಕುಡಿಯಲು ಬಳಸುತ್ತಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಕಳೆದ ಹಲವು ದಿನಗಳಿಂದ ಘಟಕದಲ್ಲಿ ನೀರು ಪೂರೈಕೆಯಾಗುತ್ತಿಲ್ಲ.

ಇದರಿಂದ ಕುಡಿಯಲು ಅಯೋಗ್ಯವಾದ, ಸ್ಥಳೀಯ ಬೋರ್’ವೆಲ್ ಗಳ ನೀರನ್ನೇ ಕುಡಿಯಲು ಬಳಕೆ ಮಾಡಲಾಗುತ್ತಿದೆ. ಇದರಿಂದ  ನಾನಾ ರೀತಿಯ ಅನಾರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

ಈ ಕಾರಣದಿಂದ ಕೆಲವರು ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳಿಂದ ನೀರು ತರುತ್ತಿದ್ದಾರೆ ಎಂದು ಕೆಲ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಲ್ಲಿಯವರೆಗೂ ಘಟಕದ ಅವ್ಯವಸ್ಥೆ ಸರಿಪಡಿಸಲು ಆಡಳಿತ ಕ್ರಮಕೈಗೊಂಡಿಲ್ಲ. ನಮ್ಮಗಳ ಗೋಳು ಕೇಳುವವರು ಯಾರು ಇಲ್ಲವಾಗಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಶುದ್ಧ ಕುಡಿಯುವ ನೀರಿಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರೋರ್ವರು ಎಚ್ಚರಿಕೆ ನೀಡಿದ್ದಾರೆ.

ತಕ್ಷಣವೇ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಆಡಳಿತಗಳು ಇತ್ತ ಗಮನಹರಿಸಬೇಕು. ಕಾಲಮಿತಿಯೊಳಗೆ ಕುಂಸಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಅಲ್ಲಿಯವರೆಗೂ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

In the pure drinking water plant of Kumsi village of Shimoga taluk, there is no water supply for the last seven or eight days. Local villagers have alleged that drinking water has become a problem due to this.

Unresolved E-Property Confusion : Focus on CM Siddaramaiah? ಪರಿಹಾರವಾಗದ ಇ – ಆಸ್ತಿ ಗೊಂದಲ : ಗಮನಹರಿಸುವರೆ ಸಿಎಂ ಸಿದ್ದರಾಮಯ್ಯ? Previous post ಪರಿಹಾರವಾಗದ ಇ – ಆಸ್ತಿ ಗೊಂದಲ : ಗಮನಹರಿಸುವರೆ ಸಿಎಂ ಸಿದ್ದರಾಮಯ್ಯ?
ತಹಶೀಲ್ದಾರ್ ರಾಜೀವ್ Next post shimoga | ಶಿವಮೊಗ್ಗ : ನೂತನ ತಹಶೀಲ್ದಾರ್ ವಿ. ಎಸ್. ರಾಜೀವ್ ಹೇಳಿದ್ದೇನು?