bhadravati | Bhadravati: Witchcraft in front of the house on Amavasya night..! bhadravati | ಭದ್ರಾವತಿ : ಅಮಾವಾಸ್ಯೆ ರಾತ್ರಿಯಂದು ಮನೆಯ ಮುಂಭಾಗ ವಾಮಾಚಾರ..!

bhadravati | ಭದ್ರಾವತಿ : ಅಮಾವಾಸ್ಯೆ ರಾತ್ರಿಯಂದು ಮನೆಯ ಮುಂಭಾಗ ವಾಮಾಚಾರ..!

ಭದ್ರಾವತಿ (bhadravathi), ಡಿ. 4: ಮನೆಯೊಂದರ ಮುಂಭಾಗ ಅಮಾವಾಸ್ಯೆ ದಿನದ ರಾತ್ರಿಯಂದು, ಕಿಡಿಗೇಡಿಗಳ ತಂಡವೊಂದು ವಾಮಾಚಾರ ನಡೆಸಿ ಕುಟುಂಬದವರಲ್ಲಿ ಭೀತಿ ಉಂಟು ಮಾಡಲೆತ್ನಿಸಿದ ಘಟನೆ, ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಂಜ ಎಂಬುವರ ಮನೆಯ ಬಳಿ ವಾಮಾಚಾರ ನಡೆಸಲಾಗಿದೆ. ಡಿಸೆಂಬರ್ 1 ರ ತಡ ರಾತ್ರಿ ಮಾಟಮಂತ್ರ ಮಾಡಲಾಗಿದ್ದು, ಈ ವೇಳೆ ಮಂಜ ಮತ್ತವರ ಮನೆಯವರು ಮನೆಯಲ್ಲಿರಲಿಲ್ಲ. ಹೊರ ಜಿಲ್ಲೆಯ ದೇವಾಲಯವೊಂದಕ್ಕೆ ತೆರಳಿದ್ದರು. ಮನೆಯಲ್ಲಿ ಅವರ ಇಬ್ಬರು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ಮೊಟ್ಟೆಗಳು, ಮೀನುಗಳು, ಮಣ್ಣಿನಿಂದ ಮಾಡಿದ ಗೊಂಬೆಗಳು, ತೆಂಗಿನಕಾಯಿ, ಬಾಳೆಹಣ್ಣು, ಅರಿಶಿಷಣ, ಕುಂಕುಮ, ಲಿಂಬೆಹಣ್ಣು ಸೇರಿದಂತೆ ಮತ್ತೀತರ ಪೂಜಾ ಸಾಮಾಗ್ರಿಗಳನ್ನಿಟ್ಟಿರುವುದು ಕಂಡುಬಂದಿದೆ.

ಸದರಿ ಘಟನೆಯಿಂದ ಕುಟುಂಬದವರು ಹಾಗೂ ಸುತ್ತಮುತ್ತಲಿನ ಮನೆಗಳ ನಿವಾಸಿಗಳನ್ನು ಆತಂಕಿತರನ್ನಾಗಿಸಿದೆ. ವಾಮಾಚಾರ ನಡೆಸಿ ಭೀತಿ ಉಂಟು ಮಾಡಲು ಮುಂದಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

The incident took place in Ratnapura village under Antargange Gram Panchayat of Bhadravati taluk when a group of miscreants performed witchcraft in front of a house on the night of the new moon day and caused panic among the family.

Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ! Previous post shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ?
shimoga | Yatnal Rebellion: BS Yediyurappa's cold response! ಯತ್ನಾಳ್ ಬಂಡಾಯ : ಬಿ ಎಸ್ ಯಡಿಯೂರಪ್ಪರ ತಣ್ಣನೆಯ ಪ್ರತಿಕ್ರಿಯೆ! Next post shimoga | ಯತ್ನಾಳ್ ಬಂಡಾಯ : ಬಿ ಎಸ್ ಯಡಿಯೂರಪ್ಪರ ತಣ್ಣನೆಯ ಪ್ರತಿಕ್ರಿಯೆ!