shimoga | ಯತ್ನಾಳ್ ಬಂಡಾಯ : ಬಿ ಎಸ್ ಯಡಿಯೂರಪ್ಪರ ತಣ್ಣನೆಯ ಪ್ರತಿಕ್ರಿಯೆ!
ಶಿವಮೊಗ್ಗ (shivamogga), ಡಿ. 4: ಒಂದೆಡೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತವರ ಪುತ್ರ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿದ್ದಾರೆ. ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಯತ್ನಾಳ್ ಅವರ ಆರೋಪಗಳ ಬಗ್ಗೆ ತಣ್ಣನೆ ಪ್ರತಿಕ್ರಿಯೆ ನೀಡಿದ್ದಾರೆ!
ಶಿವಮೊಗ್ಗದ ವಿನೋಬನಗರದಲ್ಲಿರುವ ನಿವಾಸದ ಆವರಣದಲ್ಲಿ, ಡಿ. 4 ರ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಯತ್ನಾಳ್ ಅವರ್ಯಾರು ಹೊರಗಡೆಯವರಲ್ಲ. ಯಾವುದೋ ಒಂದು ಕಾರಣಕ್ಕೆ ಆಕ್ರೋಶಗೊಂಡಿರಬಹುದು. ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯಬೇಕು ಎಂಬುವುದು ತಮ್ಮ ಆಪೇಕ್ಷೆಯಾಗಿದೆ ’ ಎಂದು ತಿಳಿಸಿದ್ದಾರೆ.
‘ವಿಜಯೇಂದ್ರ ಹಾಗೂ ರಾಘವೇಂದ್ರ ಅಪೇಕ್ಷೆಯೂ ಕೂಡ ಅದೇ ಆಗಿದೆ. ಏನೇ ಕರ್ತವ್ಯಗಳಿದ್ದರೂ ಎದುರು-ಬದುರು ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಒಟ್ಟಾಗಿ ಹೋಗಬೇಕು ಎಂಬುವುದು ತಮ್ಮ ಅಭಿಪ್ರಾಯವಾಗಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕಾಗಿದೆ’ ಎಂದರು.
ಯತ್ನಾಳ್ ಬಣವು ತಮ್ಮ ಕುಟುಂಬದ ವಿರುದ್ಧ ಮಾತನಾಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಏನೇ ಮಾತನಾಡಲಿ ಪರವಾಗಿಲ್ಲ. ಅದನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.
ಭಾಗಿ : ‘ವಿಧಾನ ಮಂಡಲ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಪಕ್ಷದ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ. ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ನಡೆಸಲಿದ್ದಾರೆ. ಸರ್ಕಾರದಲ್ಲಿನ ಕೊರತೆಗಳನ್ನು ಜನರ ಗಮನಕ್ಕೆ ತರುವ ಕಾರ್ಯ ನಡೆಸಲಿದ್ದಾರೆ’ ಎಂದು ಇದೆ ವೇಳೆ ಯಡಿಯೂರಪ್ಪ ತಿಳಿಸಿದರು.
ಮುಡಾ ಹಗರಣ : ಪುರಾವೆಯಿಲ್ಲದೆ ಇಡಿಯವರು ಮಾತನಾಡುವುದಿಲ್ಲ..!
*** ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ದ ನಿವೇಶನ ಹಗರಣ ಹಾಗೂ ಇಡಿಯವರು ಲೋಕಾಯುಕ್ತಕ್ಕೆ ಬರೆದಿರುವ ಪತ್ರದ ಕುರಿತಂತೆ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ, ‘ಅಪರಾಧ ಮಾಡಿದ ನಂತರ ನಿವೇಶನಗಳನ್ನು ವಾಪಾಸ್ ಕೊಡುವುದು ಬಿಡುವುದು ಬೇರೆಯ ವಿಷಯ. ಸಾವಿರಾರು ನಿವೇಶನಗಳನ್ನು ಕಾನೂನುಬಾಹಿರವಾಗಿ ಕೊಡಲಾಗಿದೆ ಎಂಬುವುದನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದೆ. ಇ.ಡಿ.ಯವರು ಪುರಾವೆಯಿಲ್ಲದೆ ಮಾತನಾಡುವುದಿಲ್ಲ. ನೋಡೋಣ ಏನೇನು ಆಗುತ್ತೆ’ ಎಂದು ತಿಳಿಸಿದ್ದಾರೆ.
On the one hand, BJP MLA Basanagowda Patil Yatnal, who is the son of former CM BS Yeddyurappa, has rebelled against party state president B Y Vijayendra. Criticizing.
He spoke to reporters who met him on Wednesday at his residence in Vinobanagar, Shimoga. Yatnal is not an outsider. May be angry for some reason. He said that it is his wish that everyone should be taken together.
