
shimoga | ಶಿವಮೊಗ್ಗ : ಹೆರಿಗೆಯಾದ ಕೆಲ ಗಂಟೆಗಳಲ್ಲಿಯೇ ಮಹಿಳೆ ಸಾವು – ಕಾರಣವೇನು?
ಶಿವಮೊಗ್ಗ (shivamogga), ಜ. 4: ರಾಜ್ಯದ ವಿವಿಧೆಡೆ ಬಾಣಂತಿರ ಸಾವು ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ, ಹೆರಿಗೆಯಾದ ಕೆಲ ಗಂಟೆಗಳಲ್ಲಿಯೇ ಮಹಿಳೆಯೋರ್ವರು ಮೃತಪಟ್ಟ ಘಟನೆ ಜ. 3 ರಂದು ನಡೆದಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಂಶೀಪುರ ನಿವಾಸಿಯಾದ ಕವಿತಾ (24) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಜಿಲ್ಲೆಯ ಮೈದೊಳಲು ಮಲ್ಲಾಪುರ ಗ್ರಾಮದಲ್ಲಿದ್ದ ಕವಿತಾ ಅವರು, ಎರಡನೇ ಹೆರಿಗಾಗಿ ಜನವರಿ 1 ರಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಗೆ ದಾಖಲಾಗಿದ್ದರು.
‘ಜ. 3 ರಂದು ಬೆಳಿಗ್ಗೆ ಸುಮಾರು 8. 25 ಕ್ಕೆ ಕವಿತಾ ಅವರಿಗೆ ಸಹಜ ಹೆರಿಗೆಯಾಗಿತ್ತು. 3. 5 ಕೆಜಿ ತೂಕದ ಮಗು ಜನಿಸಿತ್ತು. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದರು. ತದನಂತರ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು’ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರಾದ ಡಾ. ತಿಮ್ಮಪ್ಪ ಅವರು ತಿಳಿಸಿದ್ದಾರೆ.
ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಹೆರಿಗೆಯಾದ ಎರಡು ಗಂಟೆ ನಂತರ, ದಿಢೀರ್ ಆಗಿ ಅವರಲ್ಲಿ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಸಾಕಷ್ಟು ವೈದ್ಯೋಪಚಾರದ ನಡುವೆಯೂ ಅವರು ಬದುಕುಳಿಯಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
‘ಕವಿತಾ ಅವರು ಹೆರಿಗೆಗೆ ದಾಖಲಾದ ವೇಳೆ ಹಾಗೂ ಹೆರಿಗೆ ಪೂರ್ವದ ತಪಾಸಣೆ ವೇಳೆಯಲ್ಲಿ ಅವರ ಬಿಪಿ, ಪಲ್ಸ್, ರಕ್ತಕ್ಕೆ ಸಂಬಂಧಿಸಿದ ಹಿಮೋಗ್ಲೊಬಿನ್, ಪ್ಲೆಟೇಟ್, ಅಲ್ಟ್ರಾಸೌಂಡ್ ಸೇರಿದಂತೆ ಮತ್ತೀತರ ಪರೀಕ್ಷೆಗಳು ನಾರ್ಮಲ್ ಆಗಿತ್ತು. ಆರೋಗ್ಯವಾಗಿಯೇ ಇದ್ದರು. ಆದರೆ ದಿಢೀರ್ ಕಾಣಿಸಿಕೊಂಡ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ, ತದನಂತರ ಉಂಟಾದ ಹೃದಯಾಘಾತದಿಂದ ಮೃತಪಡುವಂತಾಗಿದೆ’ ಎಂದು ಹೇಳಿದ್ದಾರೆ.
ನಡೆಯದ ಮರಣೋತ್ತರ ಪರೀಕ್ಷೆ : ಮತ್ತೊಂದೆಡೆ ಕುಟುಂಬದವರು ಮಹಿಳೆಯ ಸಾವಿನ ಬಗ್ಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸದೆ ಶವವನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯ ಸಾವಿಗೆ ನಿಖರ ಕಾರಣಗಳೇನು ಎಂಬುವುದು ಹೆಚ್ಚಿನ ವೈದ್ಯಕೀಯ ಪರಿಶೀಲನೆಯಿಂದ ಗೊತ್ತಾಗಬೇಕಾಗಿದೆ.
Shimoga, January 4: an incident occurred on January 3 where a woman died within a few hours of giving birth at the Government Megan Hospital in Shimoga city. Kavitha (24), a resident of Shamshipura in Harihara taluk of Davangere district, has been identified as the dead woman. Kavitha, who was from Mallapur village in Maidola district, was admitted to Meghan Hospital maternity ward on January 1 for her second delivery.
On the january 3rd at around 8.25 am, Kavitha had a normal delivery. A baby weighing 3. 5 kg was born. Both mother and child were healthy. After that, he was shifted to the ward, said Meggan Hospital Superintendent dr. Thimmappa said.