shimoga | Two women who arrived in the guise of customers and tried to steal a gold chain were caught! shimoga | ಗ್ರಾಹಕರ ಸೋಗಿನಲ್ಲಿ ಆಗಮಿಸಿ ಚಿನ್ನದ ಸರ ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು!

shimoga | ಶಿವಮೊಗ್ಗ : ಗ್ರಾಹಕರ ಸೋಗಿನಲ್ಲಿ ಆಗಮಿಸಿ ಚಿನ್ನದ ಸರ ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು!

ಶಿವಮೊಗ್ಗ (shivamogga), ಫೆ. 20: ಗ್ರಾಹಕರ ಸೋಗಿನಲ್ಲಿ ಆಗಮಿಸಿ ನಕಲಿ ಚಿನ್ನದ ಸರವಿಟ್ಟು, ಅಸಲಿ ಚಿನ್ನದ ಸರ ಅಪಹರಿಸಲು ಯತ್ನಿಸಿದ ಇಬ್ಬರು ಮಹಿಳೆಯರನ್ನು, ಸ್ವತಃ ಚಿನ್ನಾಭರಣ ಅಂಗಡಿಯವರೇ ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಶಿವಮೊಗ್ಗ ನಗರದ ಗಾಂಧಿಬಜಾರ್ ರಸ್ತೆಯಲ್ಲಿ ನಡೆದಿದೆ.

ಫೆ.18 ರ ಮಧ್ಯಾಹ್ನ ಸದರಿ ಘಟನೆ ನಡೆದಿದೆ. ಆರ್.ಎಂ.ಎಲ್ ನಗರದ ಇಬ್ಬರು ನಿವಾಸಿಗಳೇ ಆಪಾದಿತ ಮಹಿಳೆಯರೆಂದು ಗುರುತಿಸಲಾಗಿದೆ. ಇವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಹಿನ್ನೆಲೆ : ಗಾಂಧಿ ಬಜಾರ್ ರಸ್ತೆಯ ಕಿರಣ್ ಷಾ ಎಂಬುವರಿಗೆ ಸೇರಿದ ಷಾ ಸದಾಜೀ ಸೋಗ್ ಮಲ್ ಜೀ ಜ್ಯುವೆಲರ್ಸ್ ಅಂಗಡಿಗೆ, ಫೆ. 18 ರ ಮಧ್ಯಾಹ್ನ 2. 40 ರ ಸುಮಾರಿಗೆ ಬುರ್ಖಾ ಧರಿಸಿದ್ದ ಆರೋಪಿತ ಇಬ್ಬರು ಮಹಿಳೆಯರು ಆಗಮಿಸಿದ್ದಾರೆ.

15 ರಿಂದ 20 ಗ್ರಾಂ ತೂಕದ ಬಂಗಾರದ ಸರ ತೋರಿಸುವಂತೆ ಆಪಾದಿಯತೆಯರು, ಅಂಗಡಿಯವರಿಗೆ ತಿಳಿಸಿದ್ದಾರೆ. ಅದರಂತೆ ಬಂಗಾರದ ಸರಗಳಿದ್ದ ಟ್ರೇಯನ್ನು ಅಂಗಡಿಯವರು ತೋರಿಸಿದ್ದಾರೆ. ನಂತರ ಅಂಗಡಿಯವರು, ಇತರೆ ಗ್ರಾಹಕರ ಕಡೆಗೆ ಗಮನ ಹರಿಸಿದ್ದಾರೆ.

ಈ ವೇಳೆ ಆಪಾದಿತಯೋರ್ವಳು, ತನ್ನ ಕೈಯಲ್ಲಿಟ್ಟುಕೊಂಡಿದ್ದ ನಕಲಿ ಸರವನ್ನು ಟ್ರೇಯಲ್ಲಿಟ್ಟು, ಅಸಲಿ ಸರವನ್ನು ಮುಂಗೈ ಮೂಲಕ ಬಟ್ಟೆಯೊಳಗೆ ಹಾಕಿಕೊಂಡಿದ್ದಾಳೆ. ನಂತರ ಟ್ರೇಯನ್ನು ಅಂಗಡಿಯವರಿಗೆ ನೀಡಿದ್ದಾರೆ. ಅಂಗಡಿಯವರು ಟ್ರೇಯಲ್ಲಿದ್ದ ಬಂಗಾರದ ಸರ ಪರಿಶೀಲಿಸಿದ್ದಾರೆ.

ಕಂಪ್ಯೂಟರ್ ಸ್ಲಿಪ್ ಟ್ಯಾಗ್’ಗೆ ಬದಲಾಗಿ, ಕೈಬರಹದ ಸ್ಲಿಪ್ ಟ್ಯಾಗ್ ಇದ್ದ ಸರವೊಂದು ಟ್ರೇಯಲ್ಲಿರುವುದು ಪತ್ತೆಯಾಗಿದೆ. ಆಪಾದಿತೆಯರ ಮೇಲೆ ಅನುಮಾನಗೊಂಡು ವಿಚಾರಿಸಿದ್ದಾರೆ. ತಮಗೆ ಗೊತ್ತಿಲ್ಲವೆಂದು ತಿಳಿಸಿದ್ದಾರೆ. ನಂತರ ಅಂಗಡಿಯೊಳಗಿದ್ದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಸರ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ನಂತರ ಅವರಿಂದ ಅಸಲಿ ಬಂಗಾರದ ಸರ ಪಡೆದುಕೊಂಡು, ಕೋಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

Shimoga, Feb 20: An incident took place on Gandhibazar road in Shimoga city where two women who arrived in the guise of customers and tried to steal a genuine gold chain were caught by the jewelers themselves and handed over to the police.

The incident took place on the afternoon of February 18. Two residents of RML nagar have been identified as the accused women. The police have registered a case against them and are continuing the investigation.

shiralkoppa | To the attention of the citizens of Shiralakoppa municipality : Notice to apply for A and B khata! shiralkoppa | ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯ ನಾಗರಿಕರ ಗಮನಕ್ಕೆ : ಎ ಮತ್ತು ಬಿ ಖಾತಾಕ್ಕೆ ಅರ್ಜಿ ಸಲ್ಲಿಸಲು ಸೂಚನೆ! Previous post shiralkoppa | ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯ ನಾಗರಿಕರ ಗಮನಕ್ಕೆ : ಎ ಮತ್ತು ಬಿ ಖಾತಾಕ್ಕೆ ಅರ್ಜಿ ಸಲ್ಲಿಸಲು ಸೂಚನೆ!
shimoga | Shimoga: Special Registration Campaign of yuvanidhi scheme shimoga | ಶಿವಮೊಗ್ಗ : ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ Next post shimoga | ಶಿವಮೊಗ್ಗ : ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ