
india vs pakistan | ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!
ದುಬೈ, ಫೆ. 23: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಭಾರತ – ಪಾಕಿಸ್ತಾನ ನಡುವಿನ ಹೈ ವೊಲ್ಟೇಜ್ ಕ್ರಿಕೆಟ್ ಪಂದ್ಯದಲ್ಲಿ, ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಂಪಾದಿಸಿದೆ.
ಭಾರತದ ಪರ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 100 ರನ್ ಗಳಿಸಿ ಭಾರತದ ಗೆಲುವಿಗೆ ಆಸರೆಯಾದರು. ಉಳಿದಂತೆ ಶ್ರೇಯಸ್ ಅಯ್ಯರ್ 56, ಶುಭಮನ್ ಗಿಲ್ 46 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ತಂಡ, 241 ರನ್ ಗಳಿಸಲಷ್ಟೆ ಶಕ್ತವಾಯಿತು. ಪಾಕ್ ಪರ ಸೈಯದ್ ಶಾಕೀಲ್ 62, ಮೊಹಮ್ಮದ್ ರಿಜ್ವಾನ್ 46, ಖುಷ್ದಿಲ್ ಶಾ 38 ಅತ್ಯದಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ.
ಪಾಕ್ ನ 241 ರನ್ ಗಳ ಸವಾಲನ್ನು ಭಾರತ ತಂಡವು, 42. 3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್ ಗಳಿಸಿ ವಿಜಯದ ನಗೆ ಬೀರುವಲ್ಲಿ ಸಫಲವಾಯಿತು.
ಭಾರತದ ಪರ ಕುಲದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯ 2 ಅತ್ಯದಿಕ ವಿಕೆಟ್ ಪಡೆದ ಬೌಲರ್ ಗಳಾಗಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ತಂಡ ಜಯ ಸಾಧಿಸಿದ್ದಕ್ಕೆ, ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟುವಂತೆ ಮಾಡಿದೆ.
Dubai, Feb 23: In the high voltage cricket match between India and Pakistan in the ICC Champions Trophy tournament, India won by 6 wickets. Virat Kohli gave a good batting performance for India. Scored 100 runs and helped India win. Shreyas Iyer scored 56 runs, Shubman Gill scored 46 runs and gave a good batting performance.
Kuldeep Yadav 3 and Hardik Pandya 2 are the bowlers who took the most wickets for India. Team India’s fans are in awe of the celebration of India’s victory over Pakistan in the prestigious tournament.