shimoga | Police Department Marathon held successfully in Shimoga city! shimoga | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಇಲಾಖೆ ಮ್ಯಾರಥಾನ್!

shimoga | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಮ್ಯಾರಥಾನ್!

ಶಿವಮೊಗ್ಗ (shivamogga), ಮಾ. 9: ಶಿವಮೊಗ್ಗ ನಗರದಲ್ಲಿ ಮಾರ್ಚ್ 9 ರ ಬೆಳಿಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಓಟ – 2025 ರ 2 ನೇ ಆವೃತ್ತಿಗೆ, ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’, ‘ಎಲ್ಲರಿಗಾಗಿ ಫಿಟ್’ನೆಸ್’ ಹಾಗೂ ‘ಮಾದಕ ಮುಕ್ತ ಕರ್ನಾಟಕ’ ಎಂಬ ಧ್ಯೇಯ ಘೋಷದೊಂದಿಗೆ ಸದರಿ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು.

ಎರಡು ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಿತು. ಮಹಿಳೆಯರು – ಪುರುಷರಿಗೆ 5 ಕಿ.ಮೀ ಮತ್ತು ಪುರುಷರಿಗೆ 10 ಕಿ.ಮೀ. ಓಟ ನಡೆಯಿತು.

ನಗರದ ಡಿಎಆರ್ ಮೈದಾನದಿಂದ ಓಟ ಆರಂಭವಾಯಿತು. ಶಾಸಕರುಗಳಾದ ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಜಿಲ್ಲಾ ಪಂಚಾಯ್ತಿ ಸಿಇಓ ಹೇಮಂತ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಬಲೂನ್ ಹಾರಿ ಬಿಡುವ ಮೂಲಕ ಮ್ಯಾರಥಾನ್ ಗೆ ಚಾಲನೆ ನೀಡಿದರು.

ಅಶೋಕ ವೃತ್ತ, ಎ ಎ ವೃತ್ತ, ಶಿವಪ್ಪನಾಯಕ ಸರ್ಕಲ್, ಕರ್ನಾಟಕ ಸಂಘ ವೃತ್ತ, ಡಿವಿಎಸ್ ಸರ್ಕಲ್, ಮಹಾವೀರ ಸರ್ಕಲ್, ಶಿವಮೂರ್ತಿ ಸರ್ಕಲ್, ಜೈಲ್ ಸರ್ಕಲ್, ಐಬಿ ಸರ್ಕಲ್ ಮೂಲಕ ಡಿಎಆರ್ ಮೈದಾನದ ಬಳಿ ಓಟ ಅಂತ್ಯಗೊಂಡಿತು.

10 ಕಿ.ಮೀ. ವಿಭಾಗದಲ್ಲಿ ಕಿರಣ್ ಪ್ರಥಮ ಸ್ಥಾನ, ಭರತ್ ದ್ವಿತೀಯ ಸ್ಥಾನ ಪಡೆದುಕೊಂಡರು. 5 ಕಿ.ಮೀ. ವಿಭಾಗದಲ್ಲಿ ಬಾಲು ಪ್ರಥಮ, ಧನರಾಜ್ ದ್ವಿತೀಯ ಹಾಗೂ ಧನುಷ್ ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಉಳಿದಂತೆ ಮಹಿಳಾ ವಿಭಾಗದ 5 ಕಿ.ಮೀ. ಓಟದಲ್ಲಿ ದೀಕ್ಷಾ ಪ್ರಥಮ ಹಾಗೂ ಸೋನಿಯಾ ಅವರು ದ್ವಿತೀಯ ಸ್ಥಾನ ಸಂಪಾದಿಸಿದ್ದಾರೆ. ಮ್ಯಾರಥಾನ್ ನಲ್ಲಿ ನೂರಾರು ನಾಗರೀಕರು ಆಗಮಿಸಿದ್ದರು. ಅತ್ಯಂತ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಓಟ ನಡೆಯಿತು. ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

Shivamogga, Mar 9: The 2nd edition of the Karnataka State Police Run – 2025, organized by the District Police Department on the morning of March 9 in Shivamogga city, received a good response from the public.

The race started from the city’s DAR ground. MLAs Channabasappa, Dr. Dhananjaya Sarji, Zilla Panchayat CEO Hemanth and SP G K Mithun Kumar launched the marathon by releasing a balloon.

The race ended near the DAR ground through Ashoka Circle, AA Circle, Shivappanayaka Circle, Karnataka Sangha Circle, DVS Circle, Mahaveer Circle, Shivamurthy Circle, Jail Circle, IB Circle.

Sagara | Demand for adequate power supply during PUC, SSLC exams! sagara | ಪಿಯುಸಿ, ಎಸ್ಎಸ್ಎಲ್’ಸಿ  ಪರೀಕ್ಷೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ! Previous post sagara | ಸಾಗರ : ಪಿಯುಸಿ, ಎಸ್ಎಸ್ಎಲ್’ಸಿ  ಪರೀಕ್ಷೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ!
Champions Trophy 2025: India's huge win – a new record in Champions Trophy history! cricket | Champions Trothy 2025 | ಭಾರತಕ್ಕೆ ಭರ್ಜರಿ ಜಯ – ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ! Next post cricket | Champions Trothy 2025 | ಭಾರತಕ್ಕೆ ಭರ್ಜರಿ ಜಯ – ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ!