bhadravati crime news | ಭದ್ರಾವತಿ | ವಿವಿಧೆಡೆ ಬೈಕ್ ಕಳವು ಮಾಡಿದ್ದ ಯುವಕ ಸೆರೆ!
ಭದ್ರಾವತಿ (bhadravathi), ಜೂ. 30: ವಿವಿಧೆಡೆ ಬೈಕ್ ಕಳವು ಮಾಡಿದ್ದ ಆರೋಪದ ಮೇರೆಗೆ, ಯುವಕನೋರ್ವನನ್ನು ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ನಗರದ ಹೊಸಮನೆಯ ಹನುಮಂತನಗರದ ನಿವಾಸಿ ಹರ್ಷ (19) ಬಂಧಿತ ಯುವಕ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಒಟ್ಟಾರೆ 2. 40 ಲಕ್ಷ ರೂ. ಮೌಲ್ಯದ 5 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಬಂಧನದಿಂದ, ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ಕಳವು ಮಾಡಲಾಗಿದ್ದ 3 ಹಾಗೂ ಚಿಕ್ಕಮಗಳೂರು ಜಿಲ್ಲೆ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 1 ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಜೂ. 30 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಭದ್ರಾವತಿ ಡಿವೈಎಸ್ಪಿ ನಾಗರಾಜ್, ಇನ್ಸ್’ಪೆಕ್ಟರ್ ಶ್ರೀಶೈಲ ಕುಮಾರ್ ಮೇಲ್ವೀಚಾರಣೆಯಲ್ಲಿ ನ್ಯೂಟೌನ್ ಠಾಣೆ ಪಿಎಸ್ಐ ಟಿ ರಮೇಶ್, ಎಎಸ್ಐ ಟಿ ಪಿ ಮಂಜಪ್ಪ, ಸಿಬ್ಬಂದಿಗಳಾದ ಸಿ ಹೆಚ್ ಸಿ ನವೀನ್ ಟಿ ಮತ್ತು ಸಿಪಿಸಿ ಪ್ರಸನ್ನರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕಳುವಾದ ಬೈಕ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Bhadravati, June 30: A youth was arrested by the Bhadravati New Town police station on charges of stealing bikes from various places. With the arrest of the accused, 3 cases of theft of bikes from various places under the jurisdiction of New Town Police Station and 1 case of theft of bikes from Birur Police Station in Chikkamagaluru district have come to light, according to a statement issued by the police department on June 30.
More Stories
bhadravati news | ಭದ್ರಾವತಿಯಲ್ಲಿ ಅಸ್ಸಾಂ ರಾಜ್ಯದ ಮಹಿಳೆಯ ನಿಗೂಢ ಕಣ್ಮರೆ!
The mysterious disappearance of a woman from Bhadravati!
ಭದ್ರಾವತಿಯ ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ನಿಗೂಢ ಕಣ್ಮರೆ!
bhadravati news | ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!
Bhadravati: A love dispute that turned into a disaster – ended in the murder of two people!
ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!
job news | ಉದ್ಯೋಗ ಮಾಹಿತಿ | ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
Job Information | Applications invited for the posts of Anganwadi workers and helpers in Shivamogga and Bhadravati taluks
ಉದ್ಯೋಗ ಮಾಹಿತಿ | ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
bhadravati news | ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
Woman’s body found in Bhadra River in Bhadravati city!
ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
bhadravati news | ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
Caste abuse, assault case : Bhadravati man sentenced to 4 years rigorous imprisonment!
ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
bhadravati | ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ : ನಾಗರೀಕರ ಆತಂಕ!
‘Chaddi gang’ roaming in Bhadravati: Citizens worried!
ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ ಓಡಾಟ : ನಾಗರೀಕರ ಆತಂಕ!
