A feud between in-laws ends in the m*ur**der of one of them! ಶಿವಮೊಗ್ಗ : ದಾಯಾದಿಗಳ ಕಲಹ ಕೊ**ಲೆಯಲ್ಲಿ ಓರ್ವನ ಕೊಲೆಯಲ್ಲಿ ಅಂತ್ಯ!

shimoga news | ಶಿವಮೊಗ್ಗ : ಯುವಕನ ಕೊ**ಲೆ – ಆರೋಪಿ ಅರೆಸ್ಟ್!

ಶಿವಮೊಗ್ಗ (shivamogga), ಜು. 2: ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ ಬಡಾವಣೆ ಇ ಬ್ಲಾಕ್ ನ ಮನೆಯೊಂದರ ಆವರಣದಲ್ಲಿ ತಡರಾತ್ರಿ ಯುವಕನೋರ್ವನ ಕೊ**ಲೆ ನಡೆದಿದೆ.

ಬೊಮ್ಮನಕಟ್ಟೆ ಬಡಾವಣೆ ನಿವಾಸಿಯಾದ ಟೈಲ್ಸ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಪವನ್ (28) ಕೊ**ಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ.

ಹ**ತ್ಯೆ ನಡೆಸಿದ ಆರೋಪದ ಮೇರೆಗೆ ಶಿವಕುಮಾರ್ (49) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.  

ಕಾರಣವೇನು? : ಪವನ್ ರಾತ್ರಿ ಆರೋಪಿ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದಾನೆ. ಮನೆಯಲ್ಲಿಯೇ ಇಬ್ಬರು ಜೊತೆಯಾಗಿಯೇ ಮದ್ಯ ಸೇವಿಸಿ ಊಟ ಮಾಡಿದ್ದಾರೆ ಎನ್ನಲಾಗಿದೆ.

ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಕಲಹವಾಗಿದ್ದು, ಇದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿಯು ಮನೆಯಲ್ಲಿದ್ದ ಕಬ್ಬಿಣದ ಹಾರೆಯಿಂದ ಪವನ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಪವನ್ ಸ್ಥಳದಲ್ಲಿಯೇ ಅ**ಸುನೀಗಿದ್ದಾನೆ ಎಂದು ತಿಳಿದುಬಂದಿದೆ.  

ಕೊ**ಲೆಗೆ ಕಾರಣವೇನು ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿಯಿತ್ತು ಪರಿಶೀಲಿಸಿದ್ಧಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga, July 2: A young man was murdered late last night in the premises of a house in E Block, Bommanakkatte Layout, on the outskirts of Shivamogga city.

Bhadravati person who lost lakshs of rupees by clicking part time job link! ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ! Previous post shimoga | ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ!
Shivamogga: A cow that fell into the upper Tunga canal was rescued! ಶಿವಮೊಗ್ಗ : ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಆಕಳು ರಕ್ಷಣೆ! Next post shimoga | ಶಿವಮೊಗ್ಗ : ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಹಸು ರಕ್ಷಣೆ!