Bhadra river created flood threat in Bhadravati! ಭದ್ರಾವತಿಯಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ ಭದ್ರಾ ನದಿ!

bhadravati news | ಭದ್ರಾವತಿಯಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ ಭದ್ರಾ ನದಿ!

ಭದ್ರಾವತಿ (bhadravathi), ಜು. 27: ಭದ್ರಾ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭದ್ರಾವತಿ ನಗರದ ಮೂಲಕ ಹಾದು ಹೋಗಿರುವ ಭದ್ರಾ ನದಿಯು ಮೈದುಂಬಿ ಹರಿಯಲಾರಂಭಿಸಿದೆ. ಜೊತೆಗೆ ಪ್ರವಾಹ ಭೀತಿ ಸೃಷ್ಟಿಸಿದೆ!

ಜುಲೈ 27 ರ ಭಾನುವಾರ ಬೆಳಿಗ್ಗೆ ಹೊಸ ಸೇತುವೆ ಮೇಲೆ ನದಿ ನೀರು ಹರಿಯುತ್ತಿದೆ. ಈ ಕಾರಣದಿಂದ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರವಾಹ ಭೀತಿ ಸೃಷ್ಟಿಸಿದೆ!

‘ಕವಲುಗುಂದಿಯಲ್ಲಿ ಸುಮಾರು 15 ಮನೆಗಳಿಗೆ ನೀರು ನುಗ್ಗಿದೆ. ಸ್ಥಳೀಯ ನಿವಾಸಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ನಗರಸಭೆ ಆಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಅವರು ಮಾಹಿತಿ ನೀಡಿದ್ಧಾರೆ.

ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿಪಾತ್ರದ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಈಗಾಗಲೇ ನಾಗರೀಕರಿಗೆ ಸೂಕ್ತ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಜಲಾವೃತ ಭೀತಿ : ಭದ್ರಾ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾದರೆ ಸುಣ್ಣದಹಳ್ಳಿ, ಗುಂಡೂರಾವ್ ಶೆಡ್, ಯಕಿನ್ಷಾ ಕಾಲೋನಿ ಮೊದಲಾದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಈ ನಡುವೆ ನಗರಸಭೆ ಎಂಜಿನಿಯರ್ ಗಳಾದ ಪ್ರಸಾದ್ ಮೊದಲಾದ ಅಧಿಕಾರಿಗಳ ತಂಡ ತಗ್ಗ ಪ್ರದೇಶಗಳ ಬಡಾವಣೆಗಳಿಗೆ ನಿರಂತರವಾಗಿ ಭೇಟಿಯಿತ್ತು ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ.

Bhadravati, July 27: Bhadra River, which passes through Bhadravati city, has started overflowing due to the increase in water released from Bhadra Reservoir. River water started flowing over the new bridge on Sunday morning, July 27. Due to this, vehicular traffic is restricted on the bridge. Vehicular traffic has been allowed through an alternate route. #bhadrariver, #bhadrariverflood, #flood, #bhadravati, #bhadravathi,

A feud between in-laws ends in the m*ur**der of one of them! ಶಿವಮೊಗ್ಗ : ದಾಯಾದಿಗಳ ಕಲಹ ಕೊ**ಲೆಯಲ್ಲಿ ಓರ್ವನ ಕೊಲೆಯಲ್ಲಿ ಅಂತ್ಯ! Previous post shimoga | ಶಿವಮೊಗ್ಗ : ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ!
Shimoga: A huge tree fell on the transformer due to wind and rain! ಶಿವಮೊಗ್ಗ : ಗಾಳಿ – ಮಳೆಗೆ ಟ್ರಾನ್ಸ್’ಫಾರ್ಮರ್ ಮೇಲೆಯೇ ಉರುಳಿಬಿದ್ದ ಬೃಹದಾಕಾರದ ಮರ! Next post shimoga news | ಶಿವಮೊಗ್ಗ : ಟ್ರಾನ್ಸ್‌ಫಾರ್ಮರ್ ಮೇಲೆಯೇ ಉರುಳಿಬಿದ್ದ ಬೃಹದಾಕಾರದ ಮರ!