What did Shimoga DC, SP say in the peace committee meeting? ಶಾಂತಿ ಸಮಿತಿ ಸಭೆಯಲ್ಲಿ ಶಿವಮೊಗ್ಗ ಡಿಸಿ, ಎಸ್ಪಿ ಹೇಳಿದ್ದೇನು?

shimoga | ಶಾಂತಿ ಸಮಿತಿ ಸಭೆ | ಶಿವಮೊಗ್ಗ ಡಿಸಿ, ಎಸ್ಪಿ ಹೇಳಿದ್ದೇನು?

ಶಿವಮೊಗ್ಗ (shivanogga), ಆಗಸ್ಟ್ 22: ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಆಗಸ್ಟ್ 21 ರ ಸಂಜೆ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಶಾಂತಿ ಸಮಿತಿ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ ಕೆ ಮಿಥುನ್ ಕುಮಾರ್, ತಹಶೀಲ್ದಾರ್ ವಿ ಎಸ್ ರಾಜೀವ್, ಪಾಲಿಕೆ ಕಮೀಷನರ್ ಮಾಯಣ್ಣ ಗೌಡ, ಜಿಲ್ಲಾ ಪಂಚಾಯ್ತಿ ಅಧಿಕಾರಿ ಸುಜಾತ, ಹೆಚ್ಚುವರಿ ಎಸ್ಪಿಗಳಾದ ಕಾರಿಯಪ್ಪ, ರಮೇಶ್ ಕುಮಾರ್ ಉಪಸ್ಥಿತರಿದ್ದರು.

ಡಿಸಿ ಹೇಳಿದ್ದೇನು? : ಸಭೆಯಲ್ಲಿ ಡಿಸಿ ಗುರುದತ್ತ ಹೆಗಡೆ ಮತನಾಡಿ, ಹಬ್ಬಗಳ ಆಚಣೆ ವೇಳೆ ಸಹಜವಾಗಿ ಸಂಬಂಧಪಟ್ಟ ಇಲಾಖೆಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ಸೂಚನೆಗಳನ್ನು ನೀಡಲಿವೆ. ಯಾವುದೇ ನಿರ್ಬಂಧನೆ ವಿಧಿಸುವಾಗ ಏಕಾಏಕಿ ನಿರ್ಧಾರಕ್ಕೆ ಬರುವುದಿಲ್ಲ. ಬದಲಾಗಿ ಮಾರ್ಗಸೂಚಿಸಿಗಳಿಗೆ ಒಳಪಟ್ಟು ಬಹುಪಾಲು ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶವಿರುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಡಿ ಜೆ, ಪಟಾಕಿ, ಸೌಂಡ್ ಸಿಸ್ಟಂ ಬಳಕೆ, ಕಲರ್ ಬ್ಲಾಸ್ಟ್ ಗಳ ಬಳಕಗೆ ನಿರ್ಬಂಧವಿರಲಿದೆ ಎಂದರು.

ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಕೆ ಮಾಡುವಾಗ ಎಲ್ಲರೂ ಕಾರ್ಪೊರೇಷನ್ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಪಡೆದು ಅಳವಡಿಸಬೇಕು. ಫ್ಲೆಕ್ಸ್ ಅಳವಡಿಸುವಾಗ ನಗರದ ನೋಟಕ್ಕೆ ಯಾವುದೇ ಭಿನ್ನವಾಗದ ರೀತಿ ಅಳವಡಿಸಬೇಕು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೇಲೆ ಸಹಜವಾಗಿ ಎಲ್ಲರ ಗಮನ ಹೆಚ್ಚಿರುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಚ್ಚರದಿಂದಿರಿ. ಯಾವುದೇ ವಿಷಯವನ್ನು ಏಕಾಏಕಿ ನಂಬಬೇಡಿ. ಸಾಮಾಜಿಕ ಜಾಲತಾಣದಲ್ಲಿ ಬರುವ ವಿಚಾರದ ಸತ್ಯಾಸತ್ಯತೆ ಅರಿತು ನಂತರ ಪ್ರತಿಕ್ರಿಯಿಸಿ  ಎಂದು ಸಲಹೆ ನೀಡಿದ್ದಾರೆ.  

ಎಸ್ಪಿ ಹೇಳಿದ್ದೇನು?: ಮೆರೆವಣಿಗೆ ಸಂದರ್ಭದಲ್ಲಿ ಕಿಡಿಗೇಡಿತನ ತೋರುವವರು ಆಕ್ರಮಣಕಾರಿಯಾಗಿ ನೃತ್ಯ ಮಾಡುತ್ತಾ, ಮಹಿಳೆ ಹಾಗೂ ಮಕ್ಕಳ್ಳೊಂದಿಗೆ ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಾರೆ.  ಅಂತಹವರ ವಿರುದ್ಧ ಪೊಲೀಸರು ಸೂಕ್ತ ನಿಗಾವಹಿಸಿದ್ದು, ಕಠಿಣ  ಕ್ರಮ ಕೈಗೊಳ್ಳಲಾಗುತ್ತದೆ  ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷದ ಮೆರೆವಣಿಗೆ ಸಮಯದಲ್ಲಿ ಕಿಡಿಗೇಡಿತನ ತೋರಿದ ಹಾಗೂ ಆಕ್ರಮಣಕಾರಿಯಾಗಿ ವರ್ತನೆ ತೋರುವವರ ವಿಡಿಯೋವನ್ನು ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರಮುಖವಾಗಿ ನಗರದಲ್ಲಿ ಇರುವ ಪೊಲೀಸ್ ಠಾಣೆಗಳಲ್ಲಿ ಸಾವಿರಾರು ಕೆಟ್ಟ ವರ್ತನೆ ಹೊಂದಿರುವ ವ್ಯಕಿಗಳನ್ನು ಗುರುತಿಸಿ, ಅಂತಹವರನ್ನು ಠಾಣೆಗಳಿಗೆ ಕರೆಸಿ ಸೂಕ್ತ ಸಲಹೆ ಹಾಗೂ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೆಲವು ಜನ ಯುವಕರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳು ಸಹಾ  ದುರ್ವರ್ತನೆ ತೋರಿರುವುದನ್ನು ವಿಡಿಯೋ ಅನಾಲಿಸಿಸ್ ಮೂಲಕ ಗುರುತಿಸಲಾಗಿದೆ. ಅಂತಹ ವಿದ್ಯಾರ್ಥಿಗಳ ಪೋಷಕರನ್ನು ಠಾಣೆಗಳಿಗೆ ಕರೆಸಿ ಸೂಕ್ತ ಎಚ್ಚರಿಕೆಯನ್ನು ನೀಡಲಾಗಿರುತ್ತದೆ .

ಬೇರೆ ಜಿಲ್ಲೆಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಿ, ದುರ್ವರ್ತನೆ ತೋರುವವರ ಬಗ್ಗೆ ಮಾಹಿತಿಯಿಡಲಾಗಿದೆ. ಅಂತಹ ವ್ಯಕ್ತಿಗಳ ನಿಗಾವಣೆಗೆ ಪಕ್ಕದ ಜಿಲ್ಲೆಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈಬಾರಿ ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗುವುದು  ಎಂದು ಹೇಳಿದ್ಧಾರೆ.

ಗಣೇಶ ಹಬ್ಬ ಹಾಗೂ ಈದ್ – ಮಿಲಾದ್ ಹಬ್ಬಗಳು 3 ನೇ ಬಾರಿಗೆ ಒಟ್ಟಿಗೆ ಬಂದಿದ್ದು, 2 ಬಾರಿ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿರುತ್ತದೆ. ಇದಕ್ಕೆ ನಿಮ್ಮ ಸಹಕಾರವಿರಲಿ. ಈ ಬಾರಿಯೂ ಯಶಸ್ವಿಯಾಗಲು ನಿಮ್ಮ ಸಹಕಾರದ ಅವಶ್ಯಕತೆ ಇರುತ್ತದೆ ಎಂದು ಮನವಿ ಮಾಡಿದರು.

ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ನಿರ್ಬಂಧಗಳನ್ನು ಹೇರುವ ಸಂದರ್ಭ ಬಂದಾಗ ಅದನ್ನು ನಿರ್ಬಂಧ ಎಂದು ಭಾವಿಸದೇ ಸೌಹಾರ್ದತೆಗೋಸ್ಕರ ಸಲಹೆ , ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ  ಎಂದರು.

ಮರೆವಣಿಗೆ ಸಂದರ್ಭದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸುವಾಗ ವಿದ್ಯಾರ್ಥಿಗಳ ಶಿಕ್ಷಣವನ್ನು ಪರಿಗಣಿಸಿ ಅವರಿಗೆ ಅನುಕೂಲವಾಗುವಂತೆ ಅಳವಡಿಸಲು ಪ್ರಯತ್ನಿಸುತ್ತೆವೆ. ವಿದ್ಯಾರ್ಥಿಗಳ ಶಿಕ್ಷಣಕ್ಕಿಂತ ಮೆರವಣಿಗಳು ಮುಖ್ಯ ಅನ್ನಿಸುವುದಿಲ್ಲ, ಅವರ ಜೀವನ ರೂಪಿಸುವುದು ನಮ್ಮ – ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.

Shimoga, August 22: In view of upcoming Gauri Ganesha and Eid Milad festival, a Peace Committee meeting was organized at DAR hall in Shimoga city on August 21.  DC Gurudatta Hegde, SP GK Mithun Kumar, Tashildar V S Rajeev, Corporation Commissioner Mayanna Gowda, District Panchayat Officer Sujatha, Additional SP kariappa, Ramesh Kumar were present in the meeting.

Power outage in various parts of Shivamogga city - taluk on September 27 ಶಿವಮೊಗ್ಗ ನಗರ - ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ Previous post shimoga | ಶಿವಮೊಗ್ಗ ನಗರದ ವಿವಿಧೆಡೆ ಆ.22, 23 ರಂದು ವಿದ್ಯುತ್ ವ್ಯತ್ಯಯ
The Abbalagere Gram Panchayat administration in Shivamogga is raising awareness about the ban on child marriage and the POCSO Act through a tree planting program! ಶಿವಮೊಗ್ಗ : ಹಸಿರೀಕರಣ ಮೂಲಕ ಬಾಲ್ಯ ವಿವಾಹ ನಿಷೇಧ - ಪೋಕ್ಸೋ ಕಾಯ್ದೆ ಜಾಗೃತಿ - ಅಬ್ಬಲಗೆರೆ ಗ್ರಾಪಂ ಆಡಳಿತದ ವಿಭಿನ್ನ ಕಾರ್ಯ! Next post shimoga | ಶಿವಮೊಗ್ಗ : ಹಸಿರೀಕರಣ ಮೂಲಕ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಜಾಗೃತಿ  – ಅಬ್ಬಲಗೆರೆ ಗ್ರಾಪಂ ಆಡಳಿತದ ವಿಭಿನ್ನ ಕಾರ್ಯ!