Shivamogga: Four people missing in separate incidents - Police department appeals for cooperation in finding them! shimoga news | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನಾಪತ್ತೆ - ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ!

shimoga news | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನಾಪತ್ತೆ – ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ!

ಶಿವಮೊಗ್ಗ (shivamogga), ಆಗಸ್ಟ್ 25: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ 4 ಜನ ಕಾಣೆಯಾಗಿದ್ದಾರೆ‌. ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-261414 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

ಪ್ರಕರಣ 1: ಹಾಸನದ ವಿಜಯನಗರ ವಾಸಿ ಬಿ. ಚಂದ್ರಗೌಡ ಎಂಬುವವರ ಮಗ 35 ವರ್ಷದ ವಿಜಯಕುಮಾರ್ ಎಂಬ ವ್ಯಕ್ತಿ ಜು. 19 ರಂದು ಶಿವಮೊಗ್ಗದ ಮಾನಸಾ ಆಸ್ಪತ್ರೆಯಿಂದ ಕಾಣೆಯಾಗಿರುತ್ತಾರೆ. 

ಈತನ ಚಹರೆ ಎತ್ತರ 5.6 ಅಡಿ, ತೆಳುವಾದ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಎಡಗೈ ಮೇಲೆ ಸೂರಿ ಎಂಬ ಟ್ಯಾಟೂ ಇರುತ್ತದೆ. ಈತ ಹೊರಹೋಗುವಾಗ ಬಿಳಿ ಬಣ್ಣದ ಶರ್ಟ್, ಬೂದಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಪ್ರಕರಣ 2 : ಉಳ್ಳಾಲ ತಾಲೂಕು ಪಂಜಾಜೆ ಮನೆ ನಿವಾಸಿ ಪ್ರವೀಣ್‌ಕುಮಾರ್ ಎಂಬುವವರ ಪತ್ನಿ 21 ವರ್ಷದ ಪೂಜಾ ಎಂಬುವವರು, ಆಗಸ್ಟ್ 2024 ಮಾಹೆಯಲ್ಲಿ ದಾವಣಗೆರೆಯ ತನ್ನ ತಾಯಿ ಮನೆಗೆ ಹೋಗುವಾಗ, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಿಂದ ಕಾಣೆಯಾಗಿರುತ್ತಾರೆ. 

ಈಕೆಯ ಚಹರೆ 4.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕೆಂಪು ಮೈಬಣ್ಣ ಹೊಂದಿದ್ದು, ಎಡ ಮೊಣಕೈ ಮೇಲೆ ಪ್ರವೀಣ್ ಮತ್ತು ಬಲ ಮೊಣಕೈ ಮೇಲೆ ಹಾಲು ಎಂದು ಟ್ಯಾಟೂ ಹಾಕಿಸಿಕೊಂಡಿರುತ್ತಾರೆ. ಮೈಮೆಲೆ ಹಳದಿ ಬಣ್ಣದ ಚೂಡಿದಾರ, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಪ್ರಕರಣ 3: ಶಿವಮೊಗ್ಗದ ಭಾರತಿ ಕಾಲೋನಿ 2ನೇ ಕ್ರಾಸ್ ವಾಸಿ, ಎನ್.ಟಿ.ರಸ್ತೆಯಲ್ಲಿ ಗಿರಿ ಟಿಫನ್ ಸೆಂಟರ್ ನಡೆಸುತ್ತಿದ್ದ 50 ವರ್ಷದ ಶ್ರೀನಿವಾಸ ಮತ್ತು 45 ವರ್ಷದ ಜಯಮ್ಮ ದಂಪತಿಗಳು ಜು.05 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. 

ಶ್ರೀನಿವಾಸರ ಚಹರೆ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಬಲಗೈ ಮೇಲೆ ಜಯಮ್ಮ ಎಂಬ ಹಚ್ಚೆ ಗುರುತಿದೆ. ಕೆಂಪು ಶರ್ಟ್ ಮತ್ತು ನೀಲಿ ಪಂಚೆ ಧರಿಸಿರುತ್ತಾರೆ. ಜಯಮ್ಮನವರ ಚಹರೆ 5.1 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಬಲಗೈ ಮೇಲೆ ಶ್ರೀನಿವಾಸ ಎಂಬ ಹಚ್ಚೆ ಇರುತ್ತದೆ. ಕಿತ್ತಳೆ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ.

Shivamogga: Four people missing in separate incidents – Police department appeals for cooperation in finding them! | Shivamogga, August 25: Four people are missing from various places under the jurisdiction of Doddapete Police Station in Shivamogga city. If you have any information, please contact Doddapete Police Station on 08182-261414, a police statement said.

Shivamogga Municipal Corporation to install 400 CC cameras! ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ 400 ಸಿಸಿ ಕ್ಯಾಮರಾಗಳ ಅಳವಡಿಕೆ! Previous post free training camp news | ಸಿಸಿ ಟಿವಿ ಅಳವಡಿಕೆ – ಸರ್ವೀಸಿಂಗ್ : ಉಚಿತ ತರಬೇತಿಗೆ ಅರ್ಜಿ ಆಹ್ವಾನ
Meat sale banned in Shivamogga city on August 27th! ಶಿವಮೊಗ್ಗ ನಗರದಲ್ಲಿ ಆ.27 ರಂದು ಮಾಂಸ ಮಾರಾಟ ನಿಷೇಧ! Next post shimoga | ಶಿವಮೊಗ್ಗ ನಗರದಲ್ಲಿ ಆಗಸ್ಟ್ 27 ರಂದು ಮಾಂಸ ಮಾರಾಟ ನಿಷೇಧ!